LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

ಸಹಕಾರ ಸಚಿವ ಲಕ್ಷ್ಮಣ ಸವದಿಯವರ ಮಾರ್ಗದರ್ಶನದಲ್ಲಿ ಕುಡಿಯುವ ನೀರಿಗಾಗಿ ವಿಶೇಷ ಯೋಜನೆ.ಅಧ್ಯಕ್ಷ ದತ್ತಾ ವಾಸ್ಟರ

ಅಥಣಿ: ಅಥಣಿ ಜನತೆಗೆ ಸಹಕಾರ ಸಚಿವರಾದ ಲಕ್ಷ್ಮಣ ಸವದಿ ಆದೇಶದ ಮೇರೆಗೆ ಮತ್ತು ಮಾರ್ಗದರ್ಶನದಲ್ಲಿ ಬೇಸಿಗೆ ಅವಧಿಯಲ್ಲಿ  ಕುಡಿಯುವ ನೀರಿನ‌ ತೊಂದರೆ ಉಂಟಾಗಬಾರದೆಂದು 25 ಕೋಟಿ ರೂ.ವೆಚ್ಚದ  ಕೆರೆ ಅಭಿವೃದ್ಧಿಗೊಳಿಸಿ ನೀರು ತುಂಬಿಸುವ ಯೋಜನೆಗೆ ಇಷ್ಟರಲ್ಲಿಯೇ ಚಾಲನೆ ನೀಡುತ್ತೇವೆ ಎಂದು ನಗರ ಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ದತ್ತಾ ವಾಸ್ಟರ್ ಹೇಳಿದರು. 
ಅವರು ನಗರ ಸಭಾ ಕಾರ್ಯಾಲಯದಲ್ಲಿ ಕರೆದಿದ್ದ ಅಧಿಕಾರಿ ಮತ್ತು ಸಿಬ್ಬಂದಿಗಳ ಸಭೆಯ ನಂತರ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು. ಕೆರೆಯಲ್ಲಿ ನೀರು ತುಂಬಿಸುವುದರಿಂದ ಸಹಜವಾಗಿಯೇ ಅಥಣಿ ನಗರದಲ್ಲಿ ಅಂತರ್ಜಲ ಪ್ರಮಾಣ ಹೆಚ್ಚಾಗುವುದರಿಂದ ಕೊಳವೆ ಭಾವಿಗಳು ಚಾರ್ಜ ಆಗುವುದು ಎಂದ ಅವರು ಯಾವ ಕಾರಣಕ್ಕೂ ಅಥಣಿಯಲ್ಲಿ ಕುಡಿಯುವ ನೀರಿನ ತೊಂದರೆ ಉಂಟಾಗದಂತೆ ಈಗಿನಿಂದಲೇ ಎಚ್ವರ ವಹಿಸಿ ಎಂದು ಆದೇಶಿಸಿರುವೆ ಎಂದರು.
ಅಥಣಿ ಜನತೆಗೆ ಇನ್ನಷ್ಟು ಸೌಲಭ್ಯ ದೊರಕಬೇಕು ಎನ್ನುವ ಕಾರಣದಿಂದ ಸಹಕಾರ ಸಚಿವರಾದ ಲಕ್ಷ್ಮಣ ಸವದಿಯವರು 10 ಕೋಟಿ ಅನುದಾನದಲ್ಲಿ  ಭಾಗೀರಥಿ ನಾಲಾ ಅಭಿವೃದ್ಧಿ ಯೋಜನೆಯನ್ನೂ ಸಹ ಅನುಷ್ಠಾನಗೊಳಿಸಿದ್ದಾರೆ. ಈ ಯೋಜನೆ ಪೂರ್ಣಗೊಳ್ಳುವುದರಿಂದ ಕೊಳಚೆ ನಿರ್ಮೂಲನೆಯಾಗುತ್ತದೆ ಎಂದ ಅವರು ನಮ್ಮ ಆದ್ಯತೆ ಈ ಬಾರಿಯ ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ಎಚ್ಚರ ವಹಿಸುತ್ತೇವೆ ಎಂದರು.
ಅಥಣಿಯಲ್ಲಿ ಈಗಾಗಲೇ ಪ್ರಾರಂಭಗೊಂಡ ಅಮೃತ 2 ನಿರಂತರ ಕುಡಿಯುವ ನೀರು ಯೋಜನೆಯ ಕಾಮಗಾರಿಯನ್ನು ನಿಗದಿತ ಅವಧಿಯೋಳಗಾಗಿಯೇ ಪೂರ್ಣಗೊಳಿಸಬೇಕು ಎಂದು ಈಗಾಗಲೇ ಸಚಿವ ಲಕ್ಷ್ಮಣ ಸವದಿಯವರು ಆದೇಶಿಸಿದ್ದಾರೆ ಎಂದ ಅವರು ಕುಡಿಯುವ ನೀರಿನ‌ ಸಮಸ್ಯೆ ಕಂಡು ಬಂದಲ್ಲಿ ನೇರವಾಗಿ ನನ್ನನ್ನು ಸಂಪರ್ಕಿಸಿ ಎಂದರು.  
ಸಚಿವ ಲಕ್ಷ್ಮಣ ಸವದಿಯವರ ಸತತ ಪ್ರಯತ್ನದ ಫಲವಾಗಿ ಅಥಣಿ ತಾಲೂಕು ಬರಗಾಲ ಪಿಡಿತ ಎಂದು ರಾಜ್ಯ ಸರಕಾರ ಘೋಶಿಸಿದ್ದು, ಇದಕ್ಕೆ ಕಾರಣರಾದ ಲಕ್ಷ್ಮಣ ಸವದಿಯವರನ್ನು ನಾವು ಅಭಿನಂದಿಸಲೇಬೇಕು ಎಂದ ಅವರು ತಾಲೂಕಿನ ಪೂರ್ವಭಾಗದ ದ್ರಾಕ್ಷಿ ಮತ್ತು ಡಾಳಿಂಬೆ ಬೆಳೆಗಾರರಿಗೆ 80 ಕೋಟಿ ವಿಮಾ ಹಣ ಮಂಜೂರಾಗಲು ಲಕ್ಷ್ಮಣ ಸವದಿಯವರೇ ಕಾರಣ ಎಂದು ಹೇಳಿದರು. 
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿ,
 ದಯಾ ಜೋಶಿ, ಕಚೇರಿ ವ್ಯವಸ್ಥಾಪಕರು,
ಎಂ.ಬಿ.ಮಾಡಗಿ, 
ರವೀಂದ್ರ ಸನಗೊಂಡ, ಎ ಎಲ್ ನದಾಫ, 
ಅಕ್ಷಯ ಸೌಸುದ್ಧಿ, ಸುಜಾತಾ ಸುರಗೌಂಡ.ವಿನುತಾ.ಮಹೇಶ ಜಾಧವ, ಅಭಿಜೀತ ಮಾಂಡವಕರ,ರೇವಣಸಿದ್ದ ಹುಗಾರ,ಗುರು ಕೆಂಪಸತ್ತಿ
 ಸರ್ವ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದಲಿತರ ಮೇಲಿನ ದೌರ್ಜನ್ಯ, ಹಲ್ಲೆ, ಕೊಲೆ, ಸಾಮಾಜಿಕ ಬಹಿಷ್ಕಾರಕ್ಕೆ ಕಡಿವಾಣ ಹಾಕಿ : ಶ್ರೀನಿವಾಸ್ ಕರ್ಚೇಡ್ ನಬಿ ರಸೂಲ್ ಹತ್ಯೆ ಪ್ರಕರಣ: ಸಮಗ್ರ ತನಿಖೆಗೆ ಆರಿಫಾ ಆಗ್ರಹರಂಜಿಸಿದ ಯಾರಿಗೆ ಬೇಕು ನಿನ್ನ ಕವಿತೆ ನಾಟಕಡಾ.ಬಿ.ಆರ್.ಅಂಬೇಡಕರ್ ಸಂಘಕ್ಕೆ 10 ಲಕ್ಷ ರೂ.ಗಳ ದೇಣಿಗೆ ನೀಡಿದ ಶಾಸಕ ನಾರಾ ಭರತ್ ರೆಡ್ಡಿವಿಶೇಷ ನೋಂದಣಿ ಅಭಿಯಾನ ಪರಿಶೀಲಿಸಿದ ವೀಕ್ಷಕ ಕ್ಯಾಪ್ಟನ್ ಕೆ.ರಾಜೇಂದ್ರಕಾಗವಾಡ ತಾಲೂಕನ್ನು ಬರಪೀಡಿತ ಎಂದು ಘೋಷಿಸಲು ಸೆ.28ರಂದು ಬಂದ್: ಜ್ಯೋತಿಕುಮಾರ ಪಾಟೀಲದ್ರಾಕ್ಷಿ ಬೆಳೆಗಾರರಿಗೆ  ೭೯.೯೭ ಕೋಟಿ ವಿಮಾ ಪರಿಹಾರ, ೮ ಸಾವಿರ ರೈತರಿಗೆ ಅನುಕೂಲ,ಸಚಿವ ಲಕ್ಷ್ಮಣ ಸವದಿ ಪ್ರಯತ್ನಕ್ಕೆ ರೈತ ಮುಖಂಡ ಶೇಖರ ನೇಮಗೌಡ ಅಭಿನಂದನೆಪ್ರಜಾಸೇವಾ ಆಂದೋಲನ ಮೂರು ತಿಂಗಳಲ್ಲಿ ಎಲ್ಲ ತಾಲೂಕುಗಳಲ್ಲೂ ಆಯೋಜನೆ: ಸಚಿವ ಸತೀಶ್ ಜಾರಕಿಹೊಳಿಕಾಗವಾಡ ತಾಲೂಕು ಬರಪೀಡಿತ ಎಂದು ಘೋಷಿಸಿ:ಜ್ಯೋತಿಕುಮಾರ ಪಾಟೀಲ್ ಆಗ್ರಹ ಘೋಷಿಸದಿದ್ದರೆ ಸೆ.28 ಕ್ಕೆ ಪ್ರತಿಭಟನೆಗೆ ಕರೆಸಹಕಾರ ಸಚಿವ ಲಕ್ಷ್ಮಣ ಸವದಿಯವರ ಮಾರ್ಗದರ್ಶನದಲ್ಲಿ ಕುಡಿಯುವ ನೀರಿಗಾಗಿ ವಿಶೇಷ ಯೋಜನೆ.ಅಧ್ಯಕ್ಷ ದತ್ತಾ ವಾಸ್ಟರ