ಕೊಪ್ಪಳ ಆಗಸ್ಟ್ 29 ಕೊಪ್ಪಳ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಶ್ರೀ ನುಲಿಯ ಚಂದಯ್ಯನವರ ಮತ್ತು ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯನ್ನು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರದಂದು ಸರಳವಾಗಿ ಆಚರಿಸಲಾಯಿತು.
ಜಿಲ್ಲಾಧಿಕಾರಿಗಳ ಆಪ್ತ ಸಹಾಯಕಿ ವಿಜಯಲಕ್ಷ್ಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕರ್ಣಕುಮಾರ ಅವರು ಸಮಾಜದ ಮುಖಂಡರೊಂದಿಗೆ ಸೇರಿ ಶ್ರೀ ನುಲಿಯ ಚಂದಯ್ಯನವರ ಮತ್ತು ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.
*ಶ್ರೀ ನುಲಿಯ ಚಂದಯ್ಯ ಜಯಂತಿ:* 12ನೇ ಶತಮಾನದ ಮಹಾನ್ ಶರಣ, ವಚನಕಾರ ಹಾಗೂ ಕಾಯಕಯೋಗಿ ಶ್ರೀ ನುಲಿಯ ಚಂದಯ್ಯನವರ ಜಯಂತಿ ಕಾರ್ಯಕ್ರಮದಲ್ಲಿ ಕೊರಮ ಸಮಾಜ ರಾಜ್ಯ ಉಪಾಧ್ಯಕ್ಷರಾದ ಕಂಬಣ್ಣ ಭಜಂತ್ರಿ, ಸಮಾಜದ ಕೊಪ್ಪಳ ಜಿಲ್ಲಾಧ್ಯಕ್ಷರಾದ ಬಸವರಾಜ್ ಓಜನಹಳ್ಳಿ, ತಾಲೂಕ ಅಧ್ಯಕ್ಷರಾದ ಲಕ್ಷ್ಮಣ ಇಂದ್ರಪ್ಪ ಭಜಂತ್ರಿ, ತಾಲೂಕು ಉಪಾಧ್ಯಕ್ಷರಾದ ನಾಗರಾಜ್ ಭಜಂತ್ರಿ, ಸಮಾಜದ ಮುಖಂಡರಾದ ಹನುಮಂತ್ ಭಜಂತ್ರಿ, ಯಮನೂರು ಭಜಂತ್ರಿ, ಲಕ್ಷ್ಮಣ ಮಾಳಗಿ, ಹನುಮಂತ್ ಭಜಂತ್ರಿ, ಶರಣಪ್ಪ ಭಜಂತ್ರಿ, ಕರಿಯಪ್ಪ ಭಜಂತ್ರಿ ನಾಗಪ್ಪ ಹೇರೂರು, ಶಿವು ಭಜಂತ್ರಿ, ಹನುಮಂತ್ ಬಜಂತ್ರಿ, ಹುಲಿಗೇಶ್ ಹಾಗೂ ಮತ್ತಿತರಿದ್ದರು.
*ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ:* ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತಿಯ ಕಾರ್ಯಕ್ರಮದಲ್ಲಿ ಈಡಿಗ ಸಮಾಜದ ಜಿಲ್ಲಾ ಅಧ್ಯಕ್ಷರಾದ ಈರಣ್ಣ ಹುಲಿಗಿ, ಉಪಾಧ್ಯಕ್ಷರಾದ ಎ.ವಿ ರವಿ, ಸಮಾಜದ ಮುಖಂಡರಾದ ವೆಂಕಟೇಶ್ ಹೆಚ್. ಗಂಗಾವತಿ, ಅನಿಲ್ ಹುಲಿಗಿ, ಕಿರಣ ಕುಮಾರ್ ಗಂಗಾವತಿ, ಮಂಜುನಾಥ, ರಾಘವೇಂದ್ರ, ಮರಿಯಪ್ಪ, ಬಸವರಾಜ, ಶರಣಪ್ಪ, ರಮೇಶ, ನೀರುಪಾದಿ, ರಾಘವೇಂದ, ಮುನಿರಾಜ ಮತ್ತು ಅನೇಕರಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಇತರೆ ಇಲಾಖೆಗಳ ಸಿಬ್ಬಂದಿ ಉಪಸ್ಥಿತರಿದ್ದರು.
****