ಹುನಗುಂದ: ಕಳೆದ ೩೩ ದಿನಗಳಿಂದ ಹುನಗುಂದ ತಾಲೂಕಿನ ಇದ್ದಲಗಿ ಗ್ರಾಮದ ಮುಳಗಡೆ ಸಂತ್ರಸ್ತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ನಡೆಸುತ್ತಿರುವ ಅನಿರ್ದಿ?ವಧಿ ಸಂತ್ರಸ್ತರ ಧರಣಿಗೆ ಸರ್ಕಾರ ಮತ್ತು ಅಧಿಕಾರಿಗಳ ವರ್ಗ ಬೇಡಿಕೆ ಈಡೇರಿಸಲು ಮುಂದಾಗದೇ ಇರೋದರಿಂದ ಸಂತ್ರಸ್ತರು ತಮ್ಮ ಹೋರಾಟದ ಸ್ವರೂಪವನ್ನು ತೀವ್ರಗೊಳಿಸಬೇಕು ಬೇಡಿಕೆ ಈಡೇರಿಕೆಗೆ ಪಾದಯಾತ್ರೆ ಮತ್ತು ಸಮಾವೇಶ ಮಾಡಿಯಾದರೂ ಸರ್ಕಾರ ಮತ್ತು ಅಧಿಕಾರಿಗಳ ಕಣ್ತೆರಿಸಬೇಕೆಂದು ಇತ್ತೀಚಗೆ ಇದ್ದಲಗಿ ಗ್ರಾಮ ಸೇರಿದಂತೆ ೯ ಗ್ರಾಮಗಳ ನೂರಾರು ಸಂತ್ರಸ್ತರು ಹಾಗೂ ತಾಲೂಕಿನ ಅನೇಕ ಮಠಾದೀಶರೊಂದಿಗೆ ಮುಂದಿನ ಹೋರಾಟದ ರೂಪರೇಶದ ಸಭೆಯನ್ನು ನಡೆಸಿದರು.
ಈ ವೇಳೆ ಹಡಗಲಿ ನಿಡಗುಂದಿಯ ರುದ್ರಮುನಿ ಶಿವಾಚಾರ್ಯರು ಮಾತನಾಡಿ ರೈತಾಪಿ ಕುಟುಂಬಕ್ಕೆ ಸರ್ಕಾರ ಕೊಟ್ಟ ೧ ಗುಂಟೆ ನಿವೇಶನ ಸಾಕಾಗದು ಸಂತ್ರಸ್ತರು ಕೇಳುತ್ತಿರುವ ೪ ಗುಂಟೆ ಜಾಗೆ ಕೇಳುವುದು ನ್ಯಾಯಯುತವಾಗಿದೆ. ೧೦ ಗ್ರಾಮಗಳ ಸಂತ್ರಸ್ತರ ಹೋರಾಟಕ್ಕೆ ನಮ್ಮ ಆದ್ಯಾತ್ಮಿಕ ಶಕ್ತಿಯ ಬೆಂಬಲ ನೀಡಲು ಸಿದ್ದ. ಆದರೆ ಈ ಹೋರಾಟ ಬಲಾಢ್ಯವಾಗಬೇಕಾದರೇ ಪ್ರತಿ ಹಳ್ಳಿಗಳಿಂದ ಒಂದು ಸಾವಿರಕ್ಕೂ ಅಧಿಕ ಜನ ಸೇರಿದರೇ ಖಂಡಿತ ಸರ್ಕಾರದ ಕಣ್ತೆರರದು ನಿಮ್ಮಗಳಿಗೆ ಶಾಶ್ವತ ಪರಿಹಾರ ಸಿಗಲಿದೆ ಎಂದರು.
ಬಿಲ್‌ಕೆರೂರಿನ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಎಲ್ಲರೂ ಸೇರಿಕೊಂಡು ಹೋರಾಟ ಯಶಸ್ವಿ ಗೊಳಿಸೋಣ. ಸಂತ್ರಸ್ತರ ಸಮಿತಿ ಕೈಗೊಳ್ಳುವ ನಿರ್ಣಯಕ್ಕೆ ಬದ್ಧರಾಗಿರೋಣ ಎಂದರು.
ನಂದವಾಡಗಿಯ ಅಭಿನವ ಚನ್ನಬಸವ ದೇವರು ಮಾತನಾಡಿ, ಸಂತ್ರಸ್ತರಲ್ಲಿ ಒಬ್ಬರಾಗಿ ನಾವು ನಿಮ್ಮ ಹೋರಾಟದಲ್ಲಿ ಪಾಲ್ಗೊಳ್ಳುತ್ತೇವೆ. ನಮ್ಮ ಅಳಲನ್ನು ಕೇಳುವ ಸಮರ್ಥರಿಗೆ ಮನವಿ ಕೊಡೋಣ ಎಂದರು.
ಹಸನಸಾಬ ಪಿಂಜಾರ ಮಾತನಾಡಿ ಸಧ್ಯ ನೀರಾವರಿ ಸಚಿವರು ಅಧಿಕೃತವಾಗಿ ನೇಮಕವಾಗುವರೆಗೆ ೧೦ ಗ್ರಾಮಗಳ ಸಂತ್ರಸ್ತರು ಪ್ರತಿ ದಿನ ಒಂದೊಂದು ಹಳ್ಳಿಯವರೂ ಧರಣೆಯಲ್ಲಿ ಭಾಗವಸಬೇಕು ಎಂದರು.
ಶರಣಯ್ಯ ಮಂಟೇಸ್ವಾಮಿ, ಶ್ರೀಕೃ? ಜಾಲಿಹಾಳ,ಬಸವರಾಜ ಬಡ್ಡಿ, ಮಹಾಂತೇಶ ನಾಡಗೌಡ,ಬಸಯ್ಯ ಹಿರೇಮಠ, ಯಮನಪ್ಪ ಅಂಬಿಗೇರ, ಪ್ರಭು ಬಡಕನ್ನವರ,ಬಸವರಾಜ ತಿಮ್ಮಾಪುರ, ಕಲ್ಲಪ್ಪ ಆನೆಹೊಸೂರ,, ಭೀಮಣ್ಣ ಅಡಿಹಾಳ, ಶರಣು ಮುಳ್ಳೂರ, ಸರೋಜಮ್ಮ ಹಿರೇಮಠ, ಮೀನಾಕ್ಷಿ ಗಂಜಿಹಾಳ, ನೀಲಮ್ಮ ಆನೆಹೊಸೂರ ಇದ್ದರು.
ಬಾಕ್ಸ್; ಗ್ರಾಮೀಣ ಪ್ರದೇಶ ಜನಗಳಿಗೆ ಮನೆ ಹೇಗಿರಬೇಕೆಂದರೇ ಮನೆ ಮಂದಿಯ ಜೊತೆಗೆ ದನಕರು, ಬೀಜ ಗೊಬ್ಬರ, ಕೃಷಿ ಸಲಕರಣೆ ಇಟ್ಟಕೊಳ್ಳಲು ಸಾಕ? ಜಾಗಬೇಕು. ಅದನ್ನು ಸರ್ಕಾರ ಒದಗಿಸದಿರೋದೆ ಈ ಹೋರಾಟಕ್ಕೆ ಕಾರಣವಾಗಿದೆ. ಸಂತ್ರಸ್ತರ ವಿವಿಧ ಬೇಡಿಕೆಗಳ ಈಡೇರಿಗಾಗಿ ಮುಂದೆ ಕೈಕೊಳ್ಳಲಿರುವ ಪಾದಯಾತ್ರೆಯ ದಿನಾಂಕದಂದು ಪ್ರತಿ ಗ್ರಾಮದ ಸಂತ್ರಸ್ತರು ತಮ್ಮ ತಮ್ಮ ಮನೆಗೆ ಬೀಗ ಹಾಕಿ, ಮನೆ ಮಂದಿ ಎಲ್ಲಾ ಕರೆದುಕೊಂಡು ಬಂಡೆ ಎತ್ತುಗಳನ್ನು ಕಟ್ಟಿಕೊಂಡು ನಿಮ್ಮಗಳ ದನಕರುಗಳನ್ನು ಹೊಡಕೊಂಡು ಪಾದಯಾತ್ರೆಯಲ್ಲಿ ಭಾಗವಹಿಸಿದರೇ ಖಂಡಿತ ಸರ್ಕಾರವನ್ನು ಕಣ್ತೆರಿಸಲು ಸಾಧ್ಯ. ಪ್ರಭುಶಂಕರ ರಾಜೇಂದ್ರ ಶ್ರೀಗಳು ಅಮೀನಗಡ.
ಬಾಕ್ಸ್; ಮುಳಗಡೆ ಸಂತ್ರಸ್ತರ ಬೇಡಿಕೆ ಈಡೇರಿಕೆ ಹೋರಾಟ ಕಳೆದ ಆರು ತಿಂಗಳ ಹಿಂದೆ ನಡೆದ ಗುರ್ಲಾಪೂರ ಕಬ್ಬು ಬೆಳೆಗಾರರ ರೈತ ಹೋರಾಟದಂತಾದಾಗ ಮಾತ್ರ ನಿಮ್ಮಗಳ ಹೋರಾಟದ ಸ್ಥಳಕ್ಕೆ ಸರ್ಕಾರ ಬರಲು ಸಾಧ್ಯ. ಅಮರೇಶ್ವರ ದೇವರು. ಗಚ್ಚಿನಮಠ ಹುನಗುಂದ.
