ಬಳ್ಳಾರಿ. ಸೆ. 03:: ಗ್ರಾಮೀಣ ಸೊಗಡಿನ ಕಥಾಹಂದರವನ್ನು ಹೊಂದಿರುವ ಬಾನಲ್ಲಿ ಕಂಡ ಚಂದಿರ ಬಾವಿಯೊಳ್ ಸಂದನು ನೂತನ ಚಲನಚಿತ್ರಕ್ಕೆ ನಗರದ ಮರ್ಚಾಡ್ ಹೋಟೆಲ್ ಸಭಾಂಗಣದಲ್ಲಿ ಇದೇ ಸೆಪ್ಟೆಂಬರ್ ನಾಲ್ಕು ಶುಕ್ರವಾರದಂದು ಕಲಾವಿದರ ಆಯ್ಕೆ ನಡೆಯುತ್ತಿದ್ದು ಚಲನಚಿತ್ರದಲ್ಲಿ ಅಭಿನಯಿಸಲು ಆಸಕ್ತಿಯು ಕಲಾವಿದರು ಹಾಗೂ ಬಾಲ ಪ್ರತಿಭೆಗಳಿಗೆ ಆಡಿಷನ್ ಮೂಲಕ ಅವಕಾಶ ಕಲ್ಪಿಸಲಾಗಿದೆ ಬಳ್ಳಾರಿಯ ಕಲಾವಿದರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಚಿತ್ರ ನಿರ್ದೇಶಕ ನಾಗಪ್ಪ ತಿಳಿಸಿದರು.
ಈ ಕುರಿತು ಅವರು
ನಗರದ ಪತ್ರಿಕಾ ಭವನದಲ್ಲಿ ಬುಧವಾರದಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, Brinda Veronika Cine Creations ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ವಿವಿಧ ವಯೋಮಿತಿಯ ಪ್ರತಿಭಾವಂತರನ್ನು ಆಯ್ಕೆ ಮಾಡಲಾಗುವುದು ಈ ಚಿತ್ರಕ್ಕೆ 6 ರಿಂದ 14 ವರ್ಷದೊಳಗಿನ ಬಾಲ ಪ್ರತಿಭೆಗಳು, 18 ರಿಂದ 25 ವರ್ಷದ ಯುವಕರು ಹಾಗೂ ಯುವತಿಯರು, 30 ರಿಂದ 60 ವರ್ಷದೊಳಗಿನ ಪುರುಷರು ಮತ್ತು ಮಹಿಳೆಯರು ಆಡಿಷನ್‌ನಲ್ಲಿ ಭಾಗವಹಿಸಬಹುದಾಗಿದೆ ಎಂದು ಹೇಳಿದರು.
ಚಿತ್ರದಲ್ಲಿ ನಾಯಕ, ನಾಯಕಿ, ಖಳನಾಯಕ, ಹಾಸ್ಯ ನಟರು, ಪಾತ್ರ ನಟರು, ಮಹಿಳಾ ಪಾತ್ರಗಳು ಹಾಗೂ ಬಾಲ ನಟರ ಸೇರಿದಂತೆ ವಿವಿಧ ಪಾತ್ರಗಳಿಗೆ ಕಲಾವಿದರ ಆಯ್ಕೆ ನಡೆಯಲಿದೆ. ನಟನೆಯ ಬಗ್ಗೆ ಆಸಕ್ತಿ ಮತ್ತು ಪ್ರತಿಭೆ ಹೊಂದಿರುವವರು ಈ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿ ಅವಕಾಶ ಪಡೆದುಕೊಳ್ಳಬಹುದು ಎಂದು ನಾಗಪ್ಪ ತಿಳಿಸಿದರು.
ಆಡಿಷನ್ ಸೆಪ್ಟೆಂಬರ್ 4ರಂದು ಶುಕ್ರವಾರ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಗರದ ರಾಯಲ್ ಸರ್ಕಲ್‌ನ ಮಯೂರ ಹೋಟೆಲ್ ಮುಂಭಾಗದಲ್ಲಿರುವ ಅಂಬೇಡ್ಕರ್ ಬಿಲ್ಡಿಂಗ್‌ನಲ್ಲಿ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.
ಚಿತ್ರದ ಕಥೆ ಮತ್ತು ನಿರ್ಮಾಪಕರಾಗಿ ಹಂಪಮ್ಮ ಎನ್ ಗೌರಿಪುರ ಕಾರ್ಯನಿರ್ವಹಿಸುತ್ತಿದ್ದು, ನಾಗಪ್ಪ ನಿರ್ದೇಶನ ಮಾಡಲಿದ್ದಾರೆ. ಕೃಷ್ಣಮೂರ್ತಿ ಸಹ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ ನಾಗರಾಜ್ ಮೊಬೈಲ್ ಸಂಖ್ಯೆ 8197055787 ಹಾಗೂ ಕೃಷ್ಣಮೂರ್ತಿ ಮೊಬೈಲ್ ಸಂಖ್ಯೆ 6362714219 ಅನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ಸುದ್ದಿಗೊಷ್ಟಿಯಲ್ಲಿ ಕೃಷ್ಣ ಮೂರ್ತಿ ಹಾಗೂ ಹಂಪಮ್ಮ ಉಪಸ್ಥಿತರಿದ್ದರು.