LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Education News

ದ್ವಿತೀಯ ಪಿಯುಸಿ ಪರೀಕ್ಷೆ-2 ಫಲಿತಾಂಶ ಪ್ರಕಟ

ಬೆಂಗಳೂರು: 

ದ್ವಿತೀಯ ಪಿಯು ಪರೀಕ್ಷೆ- 2ರ ಫಲಿತಾಂಶ ಇಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಿಸಿದೆ. ರಾಜ್ಯದಲ್ಲಿ ಒಟ್ಟು ಕ್ರೋಢೀಕೃತ ಫಲಿತಾಂಶವು 92.25ರಷ್ಟು ಏರಿಕೆ ಕಂಡಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಾಗ ಈ ವರ್ಷ ಶೇ 7.06ರಷ್ಟು ಏರಿಕೆ ಕಂಡಿದೆ.

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಾಗ ಈ ಬಾರಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮೂರು ವಿಭಾಗದಲ್ಲೂ ಫಲಿತಾಂಶದಲ್ಲಿ ಗಮನಾರ್ಹ ಸಾಧನೆ ದಾಖಲಾಗಿದೆ. ಈ ಬಾರಿ ಗ್ರಾಮೀಣ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು, ಗ್ರಾಮೀಣ ಪ್ರದೇಶದ ಫಲಿತಾಂಶ 92.77ರಷ್ಟು, ನಗರ ಪ್ರದೇಶದದಲ್ಲಿ ಶೇ 92.01ರಷ್ಟು ಫಲಿತಾಂಶ ಬಂದಿದೆ. ಈ ಫಲಿತಾಂಶವು ಗ್ರಾಮೀಣ ಮಕ್ಕಳ ಪ್ರತಿಭೆ ಮತ್ತು ಪರಿಶ್ರಮಕ್ಕೆ ಸಾಕ್ಷಿಯಾಗಿದೆ ಎಂದು ಶಿಕ್ಷಣ ಸಚಿವರಾಗಿರುವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಕಲಾ ವಿಭಾಗದಲ್ಲಿ ಈ ಬಾರಿ ಶೇ 83.31ರಷ್ಟು ಫಲಿತಾಂಶ ಬಂದರೆ, ವಾಣಿಜ್ಯ ವಿಭಾಗದಲ್ಲಿ 92.84ರಷ್ಟು, ವಿಜ್ಞಾನ ವಿಭಾಗದಲ್ಲಿ 96.01ರಷ್ಟು ಹೊರಹೊಮ್ಮಿದೆ.

ಈ ಬಾರಿ ಫಲಿತಾಂಶದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಫಲಿತಾಂಶದಲ್ಲಿ ಪ್ರಗತಿ ಕಂಡಿದೆ. ಕಳೆದ ಬಾರಿಗೆ ಹೋಲಿಕೆ ಮಾಡಿದರೆ, ಶೇ 11.99ರಷ್ಟು ಸುಧಾರಣೆ ಕಂಡಿದ್ದು, ಈ ಬಾರಿ ಕ್ರೋಢೀಕೃತ ಫಲಿತಾಂಶ 73.04ರಷ್ಟು ದಾಖಲಾಗಿದೆ.

ಈ ವರ್ಷದ ಫಲಿತಾಂಶ ಸುಧಾರಣೆ ಮತ್ತು ಮಹತ್ವದ ಸಾಧನೆಯಲ್ಲಿ ಗುಣಮಟ್ಟದ ಶಿಕ್ಷಣದ ದೃಷ್ಟಿಯಿಂದ ನಡೆಸಲಾದ ಪ್ರಶ್ನೆ ಬ್ಯಾಂಕ್​, ಡಿಸೆಂಬರ್​ ಒಳಗೆ ಪಠ್ಯಕ್ರಮ ಪೂರ್ಣಗೊಳಿಸುವಿಕೆ, ಮಾದರಿ ಪ್ರಶ್ನೆ ಪತ್ರಿಕೆ ಲಭ್ಯತೆ, ಉಪನ್ಯಾಸಕರ ಸಾಮರ್ಥ್ಯ ವೃದ್ಧಿ ತರಬೇತಿ, ರಾಜ್ಯ ಮಟ್ಟದ ಪೂರ್ವ ಸಿದ್ಧತಾ ಪರೀಕ್ಷೆಗಳು ಹಾಗೂ ರಾಜ್ಯಾದ್ಯಂತ ಮೆಗಾ ಪೋಷಕರ ಮತ್ತು ಶಿಕ್ಷಕರ ಸಭೆಗಳಂತ ಕ್ರಮಗಳಿಂದ ಈ ಮಹತ್ವದ ಸಾಧನೆ ಸಾಧ್ಯವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಕಲಾ ವಿಭಾಗದಲ್ಲಿ ಪರೀಕ್ಷೆ 2ಕ್ಕೆ 33,453 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, ಶೇ 43.72ರಷ್ಟು ಫಲಿತಾಂಶ ಹೊರಹೊಮ್ಮಿದೆ. ವಾಣಿಜ್ಯ ವಿಭಾಗದಲ್ಲಿ 23,615 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, ಶೇ 43.27ರಷ್ಟು ಫಲಿತಾಂಶ ಮತ್ತು ವಿಜ್ಞಾನ ವಿಭಾಗ 23,469 ವಿದ್ಯಾರ್ಥಿಗಳು ಹಾಜರಾಗಿದ್ದು, ಶೇ 50.79ರಷ್ಟು ಫಲಿತಾಂಶ ದಾಖಲಾಗಿದೆ.

ಇನ್ನು ವಿದ್ಯಾರ್ಥಿಗಳು ತಮ್ಮ ಪರೀಕ್ಷೆ ಫಲಿತಾಂಶವನ್ನು karresults.nic.in ಅಥವಾ dpue-exam.karnataka.gov.in kseabdpue2025e1e2e3/WebForm1.aspx ಅಥವಾ ಕರ್ನಾಟಕ ಒನ್ ಅಪ್ಲಿಕೇಶನ್ ಮೂಲಕ ವೀಕ್ಷಿಸಬಹುದಾಗಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೀಟ್ ಹಾಗೂ ಸಿಇಟಿ ವಿಶೇಷ ಮಾರ್ಗದರ್ಶನ ಕಾರ್ಯಾಗಾರಸಣ್ಣ ನೀರಾವರಿ ಇಲಾಖೆ ಕಛೇರಿಯ ನೂತನ ಕಟ್ಟಡ ನಿರ್ಮಾಣಕ್ಕೆ ಸಚಿವ ಲಕ್ಷ್ಮಣ ಸವದಿ ಭೂಮಿ ಪೂಜೆ.೧೨೫ ದಿನಗಳ ಉದ್ಯೋಗ ಖಾತರಿ: ರಾಮದುರ್ಗ ತಾಲೂಕಿನಲ್ಲಿ ಜಾಬ್ ಕಾರ್ಡ್ ಮೇಳಕ್ಕೆ ಚಾಲನೆಮಹಾದೇವಪ್ಪ ಯಾದವಾಡ ಅಭಿಮಾನಿ ಬಳಗದಿಂದ ಉಚಿತ ಹೆಲ್ಮೆಟ್ ವಿತರಣೆರಾಮದುರ್ಗದಲ್ಲಿ ಉಚಿತ ಉಚಿತ ಹೃದಯ ಹಾಗೂ ಆರೋಗ್ಯ ತಪಾಸಣಾ ಶಿಬಿರಚಚಡಿ ಏತ ನೀರಾವರಿ ಶೀಘ್ರ  ಯೋಜನೆ ಅನುಷ್ಠಾನಕ್ಕೆ ಅಗ್ರಹಿಸಿ ರೈತರಿಂದ ದಿ. 24 ರಂದು ರಸ್ತಾರೋಖೊ.ಮಲ್ಲಿಕಾರ್ಜುನ ಖರ್ಗೆ ಭಾಷಣದ ಸ್ಥಳ ಶುದ್ಧೀಕರಣಕ್ಕೆ ಖಂಡನೆ: ಕಾಗವಾಡದಲ್ಲಿ ದಲಿತ ಸಂಘಟನೆಗಳ ಪ್ರತಿಭಟನೆವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಪೂಜೆ ಶೆಲ್ ನೆಕ್ಸ್ ಪ್ಲೋರರ್ಸ್ ಶಿಕ್ಷಕರ ವೃತ್ತಿಪರ ಅಭಿವೃದ್ಧಿ ತರಬೇತಿ ರಿಫ್ರೆಶರ್ ತರಬೇತಿ-೭  ಕಂಚವೀರ ನಗರ ನಿವಾಸಿಗಳ ಗ್ರಾಮ ಪಂ ವಿರುದ್ದ ಆಕ್ರೋಶ