ನೇಸರಗಿ.ಚನ್ನಮ್ಮನ ಕಿತ್ತೂರು ಮಾಜಿ ಶಾಸಕರು, ಬಿಡಿಸಿಸಿ ಬ್ಯಾಂಕ ನಿರ್ದೇಶಕರಾದ ಮಹಾಂತೇಶ ದೊಡ್ಡಗೌಡರ ಅವರು ತಮ್ಮ 53 ನೇ ಹುಟ್ಟುಹಬ್ಬದ ಪ್ರಯುಕ್ತ ಬುಧವಾರದಂದು ಇಂಚಲ ಸಾಧು ಸಂಸ್ಥಾನ ಮಠದ ಪರಮಪೂಜ್ಯ ಡಾ. ಶ್ರೀ ಶಿವಾನಂದ ಭಾರತಿ ಮಹಾಸ್ವಾಮಿಗಳ ಹಾಗೂ ಶ್ರೀ ನಿರ್ಮಲಾನಂದ ಮಹಾಸ್ವಾಮಿಗಳನ್ನು ಬೇಟಿ ಆಗಿ ಶ್ರೀಗಳ ಆಶೀರ್ವಾದ ಪಡೆದರು.ಈ ಸಂದರ್ಭದಲ್ಲಿ ಮಹಾಂತೇಶ ದೊಡ್ಡಗೌಡರ ದಂಪತಿಗಳನ್ನು ಶ್ರೀಗಳು ಸತ್ಕರಿಸಿದರು.
ಈ ಸಂದರ್ಭದಲ್ಲಿ ಪತ್ನಿ ಶ್ರೀಮತಿ ಮಂಜುಳಾ ದೊಡ್ಡಗೌಡರ, ಪುತ್ರ ಮುರಘೇಂದ್ರ ದೊಡ್ಡಗೌಡರ ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.