ಬಳ್ಳಾರಿ (ಕಂಪ್ಲಿ) ಸೆ. 03: ಜಿಲ್ಲೆಯ ಕಂಪ್ಲಿ ತಾಲೂಕಿನ ಎಮ್ಮಿಗನೂರು ಗ್ರಾಮದ ಕೆಪಿಎಸ್ ಶಾಲೆಯ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗೆ ಬಿ,ರಮೇಶ್ ಅವರನ್ನು ನೂತನ ಅಧ್ಯಕ್ಷರಾಗಿ ಮತ್ತು ಮರಿಸ್ವಾಮಿಯನ್ನು ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದು ಶಾಲೆಯ ಮುಖ್ಯ ಗುರುಗಳು ತಿಳಿಸಿದ್ದಾರೆ.
ಶಾಸಕ ಜೆ.ಎನ್. ಗಣೇಶ್ ಅವರ ಆದೇಶದ ಮೇರೆಗೆ ಈ ಹಿಂದೆ ನೇಮಕವಾಗಿದ್ದ ಶ್ರೀ ಹೊಸಳ್ಳಿ ಜಡೇಶ ರವರ ಸ್ಥಾನಕ್ಕೆ ಬಿ,ರಮೇಶ್ ಅವರನ್ನು ಹಾಗೂ ಉಪಾಧ್ಯಕ್ಷರಾಗಿ ಮರಿಸ್ವಾಮಿಯನ್ನು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.
ಈ ಹಿನ್ನೆಲೆಯಲ್ಲಿ ಬುಧವಾರ ಶಾಲೆ ಸಭಾಂಗಣದಲ್ಲಿ ಹೊಸಳ್ಳಿ ಜಡೆಶರವರಿಗೆ ಬೀಳ್ಕೊಡುಗೆ ಸಮಾರಂಭ ನೆಡೆಯಿತು ನಂತರ ಶಾಲೆಯ ಎಸ್‌ಡಿಎಂಸಿ ಸದಸ್ಯರ ನೇತೃತ್ವದಲ್ಲಿ, ಶಾಲೆಯ ಮುಖ್ಯಗುರುಗಳು ಹಾಗೂ ಗ್ರಾಮದ ಹಿರಿಯರ ಸಮ್ಮುಖದಲ್ಲಿ ರಮೇಶ್ ಬಾರಿಕೆರ್ ಅವರು ಕೆಪಿಎಸ್ ಶಾಲೆಯ ನೂತನ ಅಧ್ಯಕ್ಷರಾಗಿ ಪದಗ್ರಹಣ ಮಾಡಿದರು.
ಈ ಸಂದರ್ಭದಲ್ಲಿ ಮುಖ್ಯಗುರುಗಳಾದ ಹುಲುಗಪ್ಪ. ಹಾಗೂ ಪ್ರಭಾರಿ ಪ್ರಾಂಶುಪಾಲರಾದ ವೀರೇಶ, ಶಾಲೆಯ ಎಸ್‌ಡಿಎಂಸಿ ಸದಸ್ಯರು, ಶಿಕ್ಷಕರು ಹಾಗೂ ಗ್ರಾಮದ ಮುಖಂಡರಾದ ಎಲ್ಲರ್ತಿ ರಾಘವೇಂದ್ರ ರೆಡ್ಡಿ. ಟಿ, ಪಿ ಜಡೇಪ್ಪ, ಶರಣ ಬಸವ ಗೌಡ, ಜಡೇಸಿದ್ದ ಸ್ವಾಮಿ ಸೇರಿದಂತೆ ಗ್ರಾಮದ ಶಿಕ್ಷಣ ಪ್ರೇಮಿಗಳು ನೂತನ ಅಧ್ಯಕ್ಷರಿಗೆ ಶುಭ ಹಾರೈಸಿದರು.
ಶಾಲೆಯ ಶೈಕ್ಷಣಿಕ ಅಭಿವೃದ್ಧಿ, ಮೂಲಸೌಕರ್ಯಗಳ ಸುಧಾರಣೆ ಹಾಗೂ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಸಮಿತಿಯೊಂದಿಗೆ ಕೈಜೋಡಿಸಿ ಕಾರ್ಯನಿರ್ವಹಿಸುವುದಾಗಿ ನೂತನ ಅಧ್ಯಕ್ಷರು ತಿಳಿಸಿದರು.
ರಮೇಶ್ ಬಾರಿಕೆರ್ ಅವರ ಆಯ್ಕೆಗೆ ಎಮ್ಮಿಗನೂರು ಗ್ರಾಮದ ಮುಖಂಡರು, ಪೋಷಕರು ಹಾಗೂ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.