LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bellary

ಅಪಾಯಕಾರಿ ವಿದ್ಯುತ್ ಕಂಬ, ತಂತಿ ಕಂಡುಬAದರೆ ಮಾಹಿತಿ ನೀಡಿ: ಜೆಸ್ಕಾಂ ಕಂಪ್ಲಿ ಉಪ-ವಿಭಾಗ ಮನವಿ


ಬಳ್ಳಾರಿ,ಸೆ.02
ಕಂಪ್ಲಿ ವ್ಯಾಪ್ತಿಯಲ್ಲಿ ಎಲ್ಲಿಯಾದರೂ ವಿದ್ಯುತ್ ಕಂಬಗಳು ಮುರಿದಿದ್ದರೆ, ಬಾಗಿದ್ದರೆ ಅಥವಾ ವಿದ್ಯುತ್ ತಂತಿಗಳು ಕೆಳಗೆ ಜೋತುಬಿದ್ದಿರುವುದು ಕಂಡುಬAದರೆ ಸಾರ್ವಜನಿಕರು ಕೂಡಲೇ ಛಾಯಾಚಿತ್ರ (ಫೋಟೋ), ನಿಖರ ವಿಳಾಸ ಮತ್ತು ಲೊಕೇಶನ್ ಸಮೇತ ಸಂಬAಧಪಟ್ಟ ಅಧಿಕಾರಿಗಳ ಮೊಬೈಲ್ ಸಂಖ್ಯೆಗೆ ಮಾಹಿತಿ ನೀಡುವಂತೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.
ಕಂಪ್ಲಿ ಪಟ್ಟಣ ಹಾಗೂ ಗ್ರಾಮೀಣ ವ್ಯಾಪ್ತಿಯಲ್ಲಿ ಸಾರ್ವಜನಿಕರ ಸುರಕ್ಷತೆ ಮತ್ತು ವಿದ್ಯುತ್ ಮಾರ್ಗಗಳ ಸಮರ್ಪಕ ನಿರ್ವಹಣೆಗಾಗಿ ಜೆಸ್ಕಾಂ ಕಂಪ್ಲಿ ಉಪ-ವಿಭಾಗವು ಸಾರ್ವಜನಿಕರಲ್ಲಿ ಸಹಕಾರ ಕೋರಿದ್ದು, ಮಾಹಿತಿ ದೊರೆತ ತಕ್ಷಣವೇ ಜೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ತುರ್ತು ದುರಸ್ತಿ ಕೈಗೊಳ್ಳಲಿದ್ದಾರೆ.
ಕೇಂದ್ರ ವಿದ್ಯುತ್ ಪ್ರಾಧಿಕಾರ ಹಾಗೂ ಭಾರತೀಯ ವಿದ್ಯುತ್ ಕಾಯ್ದೆ 2003ರ ಪ್ರಕಾರ ನಿಯಮಾನುಸಾರ ಕಟ್ಟಡ ಮತ್ತು ವಿದ್ಯುತ್ ಮಾರ್ಗಗಳ ನಡುವೆ ಕೆಳಗಿನಂತೆ ಅಂತರವಿರಬೇಕು.
ಕಡಿಮೆ ಒತ್ತಡದ ಮಾರ್ಗಗಳು (ಎಲ್‌ಟಿ ಲೈನ್ಸ್- 650ವಿ ವರೆಗೆ): ಚಾವಣಿ/ಬಾಲ್ಕನಿಯಿಂದ ಲಂಬವಾಗಿ ಕನಿಷ್ಠ 2.5 ಮೀಟರ್ ಹಾಗೂ ಸಮತಲವಾಗಿ ಕನಿಷ್ಠ 1.2 ಮೀಟರ್ ಅಂತರವಿರಬೇಕು.
ಹೆಚ್ಚು ಒತ್ತಡದ ಮಾರ್ಗಗಳು (ಹೆಚ್‌ಟಿ ಲೈನ್ಸ್- 650ವಿ ನಿಂದ 33ಕೆವಿ ವರೆಗೆ): ಕಟ್ಟಡದ ಅತ್ಯುನ್ನತ ಭಾಗದಿಂದ ಲಂಬವಾಗಿ ಕನಿಷ್ಠ 3.7 ಮೀಟರ್ ಹಾಗೂ ಸಮತಲವಾಗಿ 1.2 ರಿಂದ 2.0 ಮೀಟರ್ ಅಂತರ ಕಡ್ಡಾಯವಾಗಿದೆ.
*ಸಂಪರ್ಕಿಸಬೇಕಾದ ಅಧಿಕಾರಿಗಳ ವಿವರ:*
ಶ್ರೀನಿವಾಸ್ ಪ್ರಸಾದ್ (ಎಇಇ, ಕಂಪ್ಲಿ): 9449597416
ಭೀಮೇಶ್ (ಎಇ, ಕಂಪ್ಲಿ): 9480845163
ವಿನೋದ್ ಕುಮಾರ್ (ಎಇ - ಕಂಪ್ಲಿ ಪಟ್ಟಣ, ರಾಮಸಾಗರ, ನಂ. 10 ಮುದ್ದಾಪುರ): 9480844965
ಮಂತೇಶ್ ತುಂಬದ್ (ಎಇ - ಕಂಪ್ಲಿ ಗ್ರಾಮೀಣ, ಹಂಪಾದೇವನಹಳ್ಳಿ, ಸಣಾಪುರ, ದೇವಸಮುದ್ರ): 9448397533
ಸಾಮಿಯುಲ್ಲಾ (ಎಇ - ಮೆಟ್ರಿ ಸೆಕ್ಷನ್, ಸುಗ್ಗಿನಹಳ್ಳಿ, ದೇವಲಾಪುರ): 9480844996
ವಿಜಯ್ ಕುಮಾರ್ (ಹಿರಿಯ ಸಹಾಯಕ - ಬಿಲ್ಲಿಂಗ್ ಸಂಬAಧಿತ ದೂರುಗಳಿಗೆ): 9480845141
ಇತರ ಸಹಾಯವಾಣಿ ಅಥವಾ ಪಟ್ಟಣ ವ್ಯಾಪ್ತಿಯ ವಿದ್ಯುತ್ ವ್ಯತ್ಯಯ ದೂರುಗಳಿಗೆ: 9480845104
ಗ್ರಾಹಕರು ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯಿತಿಯ ಗ್ರಾಮೀಣ ವಿದ್ಯುತ್ ಪ್ರತಿನಿಧಿಗಳನ್ನು ಸಂಪರ್ಕಿಸಿ ದೂರು ದಾಖಲಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ೩೦ ಮೀಟರ್ ಉದ್ದದ ತ್ರಿವರ್ಣ ಧ್ವಜದೊಂದಿಗೆ ಬೃಹತ್ ಶೋಭಾಯಾತ್ರೆಅನ್ನಪೂರ್ಣಾ ಯತ್ತಿನಮನಿ ನಿಧನ. ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಾಡಗೌಡರಿಂದ ಚಾಲನೆಎಂಆರ್‌ಎನ್‌ ಗ್ರೂಪ್ ಬ ಬಯೋಪ್ಲಾಸ್ಟಿಕ್ ಕಾರ್ಖಾನೆಗೆ ರಾಜ್ಯ ಸರ್ಕಾರದ ನಿರಾಕರಣೆ: ಮುರುಗೇಶ್ ನಿರಾಣಿ ಅಸಮಾಧಾನಇಂಡಿಯಲ್ಲಿ 'ವಿಶಾಲ ಸೌಹಾರ್ದ' ಬ್ಯಾಂಕ್‌ 12ನೇ ಶಾಖೆ ಉದ್ಘಾಟನೆ: ನಿರಾಣಿ ಕುಟುಂಬದ ಸಹಕಾರಿ ಸೇವೆ ಶ್ಲಾಘನೀಯ ಎಂದ ಶಾಸಕ ಯಶವಂತರಾಯಗೌಡ ಪಾಟೀಲಇಂಡಿ, ಚಡಚಣ, ತಾಳಿಕೋಟೆ ತಾಲೂಕುಗಳು ಶೀಘ್ರದಲ್ಲೇ ಬರಪೀಡಿತ ಎಂದು ಘೋಷಣೆ: ಶಾಸಕ ಯಶವಂತರಾಯಗೌಡ ಪಾಟೀಲರೈತರ ವಿಷಯದಲ್ಲಿ ನಿರ್ಲಕ್ಷ ವಹಿಸಿದರೆ ಸಹಿಸಲ್ಲಾ-ಸೋಮನಗೌಡತಾಲ್ಲೂಕಾ ಮಟ್ಟದಲ್ಲಿ ಲಕ್ಷ್ಮೀಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಬ್ಬಡ್ಢಿಯಲ್ಲಿ ಪ್ರಥಮ: ಜಿಲ್ಲಾಮಟ್ಟಕ್ಕೆ ಆಯ್ಕೆ*ವಿವಿಧ ಗ್ರಾಮಗಳ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಭೇಟಿ ನೀಡಿದ ಚನ್ನರಾಜ ಹಟ್ಟಿಹೊಳಿ*ವಿವಿಧೆಡೆ ಗಣೇಶ ಮೂರ್ತಿ ದರ್ಶನ ಪಡೆದು ಪೂಜೆ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್