LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ಅಥಣಿ, ಶ್ರೀ ಸುಧಾ ಭಜನಾ ಮಂಡಳದಿಂದ ಏಕಾದಶಿ‌ ನಿಮಿತ್ಯ ಪಲ್ಲಕ್ಕಿ ಉತ್ಸವ. 

ಅಥಣಿ.ಆಶಾಢ ಏಕಾದಶಿ ನಿಮಿತ್ಯ ಶ್ರೀ ಸುಧಾ ಮಹಿಳಾ ಭಜನಾ ಮಂಡಳದ ಭಗಿನಿಯರು ಕೋಲಾಟ, ನೃತ್ಯದೊಂದಿಗೆ ಗ್ರಾಮ ಪ್ರದಕ್ಷಿಣೆ ಹಾಕುವ ಮೂಲಕ ಶ್ರೀ ವಿಠ್ಠಲ ಮಂದಿರಕ್ಕೆ ಆಗಮಿಸಿದರು.
        ಶ್ರೀ ಸುಧಾ ಭಜನಾ ಮಂಡಳದ ಭಗಿನಿಯರು ಸ್ಥಳೀಯ ಶ್ರೀ ನರಸಿಂಹ ದೇವಸ್ಥಾನದಲ್ಲಿ ಪಲ್ಲಕ್ಕಿಗೆ, ನರಸಿಂಹ ದೇವರಿಗೆ ಆರತಿ ಮಾಡಿದ ನಂತರ  ಮೆರವಣಿಗೆ ಮೂಲಕ ಹೊರಟು ಬಾರೆ ಭಾಗ್ಯದ ನಿಧಿಯೇ, ಇಟ್ಟಿಗೆ ಮೇಲೆ ನಿಂತಾನಮ್ಮ ,  ಗುರು ಮಧ್ವರಾಯರಿಗೆ, ರಂಗಾ ನಿನ್ನ ಕೊಂಡಾಡುವೆ, ಶ್ರೀಪತಿಯು ನಮಗೆ ಸಂಪದವೀಯಲಿ  ಸೇರಿದಂತೆ ಅನೇಕ  ದಾಸರ  ಪದಗಳನ್ನು ಹಾಡುತ್ತ, ಕುಣಿಯುತ್ತ, ವಿಠ್ಠಲನ ನಾಮಸ್ಮರಣೆ ಮಾಡುತ್ತ ಕೋಲಾಟ ಆಡಿದರು, ತುಳಸಿ ಕಟ್ಟೆ ತಲೆ ಮೇಲೆ ಹೊತ್ತು ಮಹಿಳೆಯರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಈ ಮೆರವಣಿಗೆ ಜೋಶಿ ಗಲ್ಲಿ, ಹಬ್ಬು ಗಲ್ಲಿ, ದೇಶಪಾಂಡೆ ಗಲ್ಲಿಯ ಮೂಲಕ ಶ್ರೀ ವಿಠ್ಠಲ ಮಂದಿರ ತಲುಪಿ ಸಮಾವೇಶ ಗೊಂಡಿತು.  ಮೆರವಣಿಗೆ ಬರುವ ದಾರಿಯುದ್ದಕ್ಕೂ ಜನರು ಆರತಿ ಮಾಡಿ ಬರಮಾಡಿಕೊಂಡರು.  ಹರಿವಾಣ ಸೇವೆಯನ್ನು ದೇವರಿಗೆ ಅರ್ಪಿಸಲಾಯಿತು, ವಿಠ್ಠಲ ದೇವರಿಗೆ ಆರತಿ ಮಾಡಲಾಯಿತು.   ಏಕಾದಶಿ ವೃತದ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶಿಷ್ಠವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ಶ್ರೀ ಸುಧಾ ಭಜನಾ ಮಂಡಳದ ರಮಾ ಕುಲಕರ್ಣಿ ಹೇಳಿದರು.
        ಮೆರವಣಿಗೆಯಲ್ಲಿ ಶ್ರೀ ಸುಧಾ ಭಜನಾ ಮಂಡಳಿಯ ಸದಸ್ಯೆಯರು ಉತ್ಸಾಹದಿಂದ ಪಾಲ್ಗೊಂಡಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ೩೦ ಮೀಟರ್ ಉದ್ದದ ತ್ರಿವರ್ಣ ಧ್ವಜದೊಂದಿಗೆ ಬೃಹತ್ ಶೋಭಾಯಾತ್ರೆಅನ್ನಪೂರ್ಣಾ ಯತ್ತಿನಮನಿ ನಿಧನ. ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಾಡಗೌಡರಿಂದ ಚಾಲನೆಎಂಆರ್‌ಎನ್‌ ಗ್ರೂಪ್ ಬ ಬಯೋಪ್ಲಾಸ್ಟಿಕ್ ಕಾರ್ಖಾನೆಗೆ ರಾಜ್ಯ ಸರ್ಕಾರದ ನಿರಾಕರಣೆ: ಮುರುಗೇಶ್ ನಿರಾಣಿ ಅಸಮಾಧಾನಇಂಡಿಯಲ್ಲಿ 'ವಿಶಾಲ ಸೌಹಾರ್ದ' ಬ್ಯಾಂಕ್‌ 12ನೇ ಶಾಖೆ ಉದ್ಘಾಟನೆ: ನಿರಾಣಿ ಕುಟುಂಬದ ಸಹಕಾರಿ ಸೇವೆ ಶ್ಲಾಘನೀಯ ಎಂದ ಶಾಸಕ ಯಶವಂತರಾಯಗೌಡ ಪಾಟೀಲಇಂಡಿ, ಚಡಚಣ, ತಾಳಿಕೋಟೆ ತಾಲೂಕುಗಳು ಶೀಘ್ರದಲ್ಲೇ ಬರಪೀಡಿತ ಎಂದು ಘೋಷಣೆ: ಶಾಸಕ ಯಶವಂತರಾಯಗೌಡ ಪಾಟೀಲರೈತರ ವಿಷಯದಲ್ಲಿ ನಿರ್ಲಕ್ಷ ವಹಿಸಿದರೆ ಸಹಿಸಲ್ಲಾ-ಸೋಮನಗೌಡತಾಲ್ಲೂಕಾ ಮಟ್ಟದಲ್ಲಿ ಲಕ್ಷ್ಮೀಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಬ್ಬಡ್ಢಿಯಲ್ಲಿ ಪ್ರಥಮ: ಜಿಲ್ಲಾಮಟ್ಟಕ್ಕೆ ಆಯ್ಕೆ*ವಿವಿಧ ಗ್ರಾಮಗಳ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಭೇಟಿ ನೀಡಿದ ಚನ್ನರಾಜ ಹಟ್ಟಿಹೊಳಿ*ವಿವಿಧೆಡೆ ಗಣೇಶ ಮೂರ್ತಿ ದರ್ಶನ ಪಡೆದು ಪೂಜೆ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್