ವಿಜಯಪುರ,ಎ,೧೯ : ಬಸವಣ್ಣ ಸಾಂಸ್ಕೃತಿಕ ನಾಯಕ. ಸಮಾಜ ಸುಧಾರಕ. ಕ್ರಾಂತಿಕಾರಿ ಹಾಗೂ ಮಹಾಮಾನವತಾವಾದಿ ಮತ್ತು ಶ್ರೇಷ್ಠ ವಚನಕಾರ ಎಂದು ವಿಶ್ರಾಂತ ಡಿ ಎಸ್ ಪಿ ಬಸವರಾಜ ಚೌಕಿಮಠ ಅಭಿಪ್ರಾಯ ವ್ಯಕ್ತಪಡಿಸಿದರು.
ಇಂದು ರವಿವಾರ ದಿನಾಂಕ ೧೯-೦೪-೨೦೨೬ ರಂದು ನಗರ ಘಟಕ. ತಾಲೂಕ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವಿಜಯಪುರ ಇವರ ಆಶ್ರಯದಲ್ಲಿ ಬಸವಣ್ಣ ಕುರಿತು ದತ್ತಿ ನಿಧಿ ಗೋಷ್ಠಿ ಹಾಗೂ ಕವಿ ಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ಅವರ ವಚನಗಳು ಇಂದಿಗೂ ಸವ೯ಕಾಲಿಕ. ಸಮಾಜದ ಅನಿಷ್ಠ ಪದ್ದತಿಗಳನ್ನು ಹೋಗಲಾಡಿಸಲು ಅನುಭವ ಮಂಟಪದಲ್ಲಿ ಅಲ್ಲಮಪ್ರಭುದೇವರೊಂದಿಗೆ ಅನೇಕ ಸಂವಾದಗಳ ಮೂಲಕ ಮಾನವೀಯ ಮೌಲ್ಯಗಳ ಕುರಿತು ಚಿಂತನ ಮಾಡಿದ ಶ್ರೇಷ್ಠ ಶರಣ ಬಸವಣ್ಣನಾಗಿದ್ದರು ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ ವಿಶ್ರಾಂತ ಶಿಕ್ಷಣ ಇಲಾಖೆಯ ಎಸ್ ಎಲ್ ಇಂಗಳೇಶ್ವರ ಮಾತನಾಡಿ ಬಸವಣ್ಣ ಸವ೯ಸಮಾಜದ ಸಾಂಸ್ಕೃತಿಕ ನಾಯಕರಾಗಿ ಸೇವೆ ಸ್ಮರಣೀಯವಾಗಿದೆ. ಹನ್ನೇರಡನೆಯ ಶತಮಾನದ ಶಿವಶರಣೆಯರು ಮಾನವ ಕುಲದ ಏಳ್ಗೆಗಾಗಿ ಶ್ರಮಿಸಿದರು ಎಂದರು.
ವಿಶ್ವಗುರು ಬಸವಣ್ಣನವರ ಕುರಿತು ಉಪನ್ಯಾಸ ನೀಡಿದ ಸಾಹಿತಿ ಮತ್ತು ಶಿಕ್ಷಕಿ ಶೋಭಾ ಮೇಡೆಗಾರ ಮಹಿಳೆಯರಿಗೆ ಸಾಮಾಜಿಕ ಹಾಗೂ ಧಾರ್ಮಿಕ ಹಕ್ಕುಗಳನ್ನು ನೀಡಿರುವ ಬಸವಣ್ಣನವರು ಲೋಕದ ಡೊಂಕು ನಿವೇಕೆ ತಿದ್ದುವಿರಿ. ನಿಮ್ಮ ತನುವ ತಿದ್ದುಕೊಳ್ಳಿ ಎಂದು ಉಪದೇಶ ನೀಡುವವರಿಗೆ ತಿಳಿಸಿದರು. ಕಾಯಕವೇ ಕೈಲಾಸ.ಕಾಯಕದಲ್ಲಿ ತೊಡಗಿರುವ ಪ್ರತಿಯೊಬ್ಬರು ಕಾಯಕಯೋಗಿಗಳು. ಕಾಯಕ ಶುದ್ಧವಾಗಿರಬೇಕು. ಜಾತಿ ನಿರ್ಮೂಲನೆ ಮಾಡಬೇಕು. ಮಾನವರೆಲ್ಲರೂ ನಮ್ಮವರೇ ಎಂದರು.
ಮುಖ್ಯ ಅತಿಥಿಗಳಾದ ವಿಶ್ರಾಂತ ಅಧಿಕಾರಿ ರೇಣುಕಾ ಹುಣಸಿಗಿಡದ. ಹಿರಿಯ ಸಾಹಿತಿ ಬೌರಮ್ಮ ಪತಂಗೆ ಮಾತನಾಡಿ ಶರಣರು. ಸಂತರು. ಯತಿಗಳು. ಪೂಜ್ಯರು ಮೌಲ್ಯಯುತ ಜೀವನಕ್ಕೆ ಮಹತ್ವ ಸಾರಿದ್ದಾರೆ. ಬಸವಣ್ಣನವರ ಪಚನಗಳು ಸವ೯ ಶ್ರೇಷ್ಠ ಎಂದರು. ಡಾ ಗೀತಾಂಜಲಿ ಮಾಮನೆ. ಮಂಜುನಾಥ ಮಾಮನೆ ಮುಂತಾದವರು ಉಪ ಸ್ಥಿತರಿದ್ದರು ಇದೇ ಸಮಯದಲ್ಲಿ ಬಸವಣ್ಣ ಕುರಿತು ಕವಿ ಗೋಷ್ಠಿ ಏಪ೯ಡಿಸಿದರು.ಪಾವ೯ತಿ ಸೊನ್ನದ ರೂಪಾ ರಜಪೂತ. ಅಂಬಣ್ಣ ಬಡಚಿ. ಸರೋಜಿನಿ ಮಾವಿನಮರ. ಸಂತೋಷ ಪಾಟೀಲ. ಸವಿತಾ ಹಿಪ್ಪರಗಿ. ಭಾರತಿ ಗೊಂಗಡಿ. ಮೆಹತಾಬ ಕಾಗವಾಡ. ರಾಹುಲ್ ರಜಪೂತ. ಸಾಯಬಣ್ಣ ಮಾದರ. ಭಾಗವಹಿಸುದ್ದರು.
ಪ್ರಾಥ೯ನೆ : ಸುನಂದಾ ಕೋರಿ ಗೀತಗಾಯನ ಶಶಿಕಲಾ. ನಾಯ್ಕೋಡಿ. ಪರವೀನ ಶೇಖ ಸ್ವಾಗತಿಸಿ ಪ್ರಾಥಿ೯ಸಿದರು. ನ ಶಿಲ್ಪಾ ಭಸ್ಮೆ ಪ್ರಾಥಿ೯ಸಿದರು. ಕೆ ಎಸ್ ಹಣಮಾಣಿ ವಂದಿಸಿದರು.
ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ. ಪದಾಧಿಕಾರಿಗಳಾದ ಬಿ ಎಮ್ ಅಜೂರ. ಅಹಮ್ಮದ ವಾಲಿಕಾರ. ಜಿ ಎಸ್ ಬಳ್ಳೂರ .ಸುಖದೇವಿ ಅಲಬಾಳಮಠ .ಬಸವರಾಜ ಬೇವಿನಮಟ್ಟಿ. ರಿಯಾಜ ಪಿಂಜಾರ .ವಿಜಯಲಕ್ಷ್ಮಿ ಹಳಕಟ್ಟಿ. ಎಸ್ ಎಮ್ ಕೊರಬು. ಸಿದ್ರಾಮಪ್ಪ ಜಂಗಮಶೆಟ್ಟಿ. ಅಕ್ಷರಕುಮಾರ ಮುಳಸಾವಳಗಿ. ಡಾ ಸಂಗಮೇಶ ಮೇತ್ರಿ. ಬಸನಗೌಡ ಬಿರಾದಾರ. ಸಿದ್ದು ಬೀಳಗಿ. ಬಿ ಎಂ ಮಸಬಿನಾಳ ಸವೇ೯ಶ ಎಂ. ರೇಣೂಕಾ ಮನಹಳ್ಳಿ. ಸಿದ್ದು ಮಾನೆ ಪ್ರಕುದ್ದೀನ ಹಿರೇಕೊಪ್ಪ. ಶ್ರೀಕಾಂತ ನಾಡಗೌಡ. ಎಸ್ ಎಸ್ ಬಿರಾದಾರ. ವಿಜಯಕುಮಾರ ಘಾಟಗೆ ಮುಂತಾದವರು ಉಪಸ್ಥಿತರಿದ್ದರು.
ಹಾಸೀಂಫೀರ ವಾಲಿಕಾರ
ಮೊ; ೯೩೫೩೦ ೫೭೫೩೦
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠ


