ಗದಗ,ಎ,೧೯ : ದಿ ೧೭.೦೪.೨೬ ಇಂದು ಗದಗ ನಗರದಲ್ಲಿ *ಸ್ವರಾಷ್ಟ್ರ ಎಂಟರ್ಪ್ರೈಸಸ್* ಹಾಗು ಮಲ್ನಾಡ್ ಗಿಡ್ಡ ಸಂರಕ್ಷಣಾ ಮತ್ತು ಸಂವರ್ಧನ ಅಭಿಯಾನ (ಮಂಗಳೂರು)ಸಂಸ್ಥೆಯಿಂದ *ಗೋಧಾನ ಕಾರ್ಯಕ್ರಮ* ಮಲೆನಾಡು ಗಿಡ್ಡ ತಳಿ ಹಸುಗಳ ಉಚಿತ ವಿತರಣಾ ಕಾರ್ಯಕ್ರಮ ಮತ್ತು ಗದಗ ಜಿಲ್ಲೆಯ ಗೋ ರಕ್ಷಕರಿಗೆ ಸನ್ಮಾನ ಸಮಾರಂಭ ಜರುಗಿತು.
ಪರಮಪೂಜ್ಯ ಜಗದ್ಗುರು ಶ್ರೀ ಡಾ|| ಶ್ರೀ ನಿಶ್ಚಲಾನಂದನಾಥ ಮಹಾಸ್ವಾಮೀಜಿಯವರು ಪೀಠಾಧ್ಯಕ್ಷರು, ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠ, ಕೆಂಗೇರಿ-ಬೆಂಗಳೂರು ದಿವ್ಯ ಸಾನ್ನಿಧ್ಯ, ವಹಿಸಿ ಗಿಡ್ಡತಳಿ ಹಸುವಿನ ಮನಸ್ಸು ತಾಯಿಯ ಮನಸ್ಸಿನಂತೆ ಪ್ರೀತಿ ಮಮತೆ ಕರುಣೆಯಿಂದ ಕೂಡಿರುತ್ತದೆ ನಾವು ಆ ಹಸುಗಳನ್ನು ಸಂರಕ್ಷಣೆ ಮಾಡಿದ್ದೆ ಆದರೆ ಅವು ನಮ್ಮ ಆರೋಗ್ಯವನ್ನು ಸಂರಕ್ಷಣೆ ಮಾಡುತ್ತವೆ ಗೋಮೂತ್ರ ಹಾಗೂ ಸಗಣಿಯಿಂದ ಸಾಕಷ್ಟು ಉಪಯೋಗವಿದೆ ಅದರ ಲಾಭವನ್ನ ರೈತರು ಪಡೆದುಕೊಳ್ಳಬೇಕು ಧರ್ಮೋ ರಕ್ಷತಿ ರಕ್ಷಿತಃ ಗೋ ರಕ್ಷತಿ ರಕ್ಷಿತಃ ದೇಶಿ ಹಸುವನ್ನು ರಕ್ಷಣೆ ಮಾಡುವುದು ಕೂಡ ಧರ್ಮ ರಕ್ಷಣೆ ಮಾಡಿದ ಪುಣ್ಣೆಕ್ಕೆ ಪಾತ್ರರಾಗುತ್ತೀರಿ ಎಂದು ಸಮಾಜಕ್ಕೆ ತಿಳಿಸಿದರು
ಶ್ರೀ. ವೀರೇಶ್ವರ ಸ್ವಾಮಿಗಳು, ಮಡಿವಾಳೇಶ್ವರ ಮಠ ದೇಗುಲಹಳ್ಳಿ, ಅಂಬಡಗಟ್ಟಿ, ಕಿತ್ತೂರು ಸಾನ್ನಿಧ್ಯ ವಹಿಸಿ ಉಚಿತವಾಗಿ ನೀಡುತ್ತಿರುವ ಈ ಹಸುಗಳನ್ನು ಬೇವಜವಾಬ್ದಾರಿಯಿಂದ ನೀವು ಮಾರಾಟ ಮಾಡಿಕೊಳ್ಳುವಂತ ಕೆಲಸಕ್ಕೆ ಮುಂದಾದರೆ ಹಡೆದ ತಾಯಿಯನ್ನೇ ಮಾರಾಟ ಮಾಡಿಕೊಂಡಂತೆ ಹಾಗಾಗಿ ರೈತರು ದುರುಪಯೋಗ ಪಡೆಸಿಕೊಳ್ಳದೆ ಅವುಗಳನ್ನು ಜವಾಬ್ದಾರಿಯಿಂದ ಸಂರಕ್ಷಣೆ ಮಾಡುವ ಸಂಕಲ್ಪವನ್ನು ಮಾಡಬೇಕೆಂದು ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಶ್ರೀ ಅಕ್ಷಯ ಆಳ್ವ – ಅಧ್ಯಕ್ಷರು, ಮಲೆನಾಡು ಗಿಡ್ಡ ತಳಿ ಸಂರಕ್ಷಣೆ ಮತ್ತು ಸಂವರ್ಧನ ಅಭಿಯಾನ ವೇದಿಕೆ ಸುಳ್ಯ ತಾಲೂಕು ದಕ್ಷಿಣ ಕನ್ನಡ ಜಿಲ್ಲೆಯಿಂದ ಆಗಮಿಸಿದ ಇವರು ಮಲೆನಾಡು ಗಿಡ್ಡ ತಳಿ ಹಸುವಿನ ಕುರಿತು ಹಾಗೂ ದೇಸಿ ಹಸು ಸಾಕಾಣಿಕೆಯಿಂದ ಜನರಿಗೆ ಸಿಗುವಂತಹ ಲಾಭಗಳ ಕುರಿತು ಆರೋಗ್ಯದ ಕುರಿತು ಬಹಳ ವಿಸ್ತಾರವಾಗಿ ಮಾತನಾಡಿದರು.
ಗೌರವಾನ್ವಿತ ಅತಿಥಿಗಳಾಗಿ ಶ್ರೀ ಎಸ್. ವಿ. ಸಂಕನೂರ – ಮಾನ್ಯ ವಿಧಾನ ಪರಿಷತ್ ಸದಸ್ಯರು ಉಪಸ್ಥಿತರಿದ್ದು ಮಾತನಾಡಿದ ಅವರು ನಮ್ಮ ದೇಶಿ ಗೋಮಾತೆ ಪರಂಪರೆಯನ್ನು ಮುಂದುವರಿಸುವ ಕುರಿತು ಮತ್ತು ಸಂಪೂರ್ಣ ಗೋ ಹತ್ಯೆ ನಿಷೇಧವನ್ನು ಜಾರಿಗೊಳಿಸಬೇಕೆಂದು ಮಾತನಾಡಿದರು,
ಈ ಕಾರ್ಯಕ್ರಮದ ಪ್ರಸ್ತಾವಿಕ ನುಡಿಯನ್ನು ಶ್ರೀ ಸಂತೋಷ ಅಕ್ಕಿ ಸಹ ಮುಖ್ಯಸ್ಥರು ಸ್ವರಾಷ್ಟ್ರ ಎಂಟರ್ ಪ್ರೈಸಸ್ ಗದಗ ಮಾತನಾಡಿದ ಇವರ “ ಗೋವು ಭೂಮಿಯ ಮೇಲಿನ ಪರಮ ಜೀವಿ ಮತ್ತು ಅತ್ಯಂತ ಪವಿತ್ರವಾದುದು. ಎಲ್ಲಾ ದಾನಗಳಿಗಿಂತ ಗೋ ದಾನವು ಶ್ರೇಣo ಷ್ಠವಾದುದು.” ಪ್ರಸ್ತುತ ಸಮಾಜದ ಆರೋಗ್ಯವನ್ನು ನಿಯಂತ್ರಣಗೊಳಿಸಬೇಕಾದರೆ ದೇಶಿ ಸಂಸ್ಕೃತಿಯನ್ನು ದೇಶಿ ಮಣ್ಣಿನ ಫಲವತ್ತತೆಯನ್ನು ಕಾಪಾಡುವಲ್ಲಿ ಮಲೆನಾಡು ಗಿಡ್ಡ ಹಸುವಿನ ಪಾತ್ರ ಬಹುದೊಡ್ಡದು ಎಂದು ಮಾತನಾಡಿದರು.
ಅಧ್ಯಕ್ಷತೆಯನ್ನು ಶ್ರೀ ಅಶೋಕ ಅಕ್ಕಿ , ಮುಖ್ಯಸ್ಥರು, ಸ್ವರಾಷ್ಟ್ರ ಎಂಟರ್ ಪ್ರೈಸಸ್, ನಗರದ ಗಣ್ಯ ಉದ್ಯಮಿಗಳಾದ ಶ್ರೀ ದೀಪಚಂದ ಬಾಗಮಾರ, ಶ್ರೀ ಆರ್ ಡಿ ಕಡ್ಲಿಕೊಪ್ಪ, ಶ್ರೀ ಜಗನ್ನಾಥ ಭಾಂಡಗೆ, ಶ್ರೀ ಕಿಚಡಿ ಕೊಟ್ರೇಶ ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಮಲೆನಾಡು ಗಿಡ್ಡ ತಳಿ ಹಸುಗಳನ್ನ ಉಚಿತವಾಗಿ ಪಡೆದ ಫಲಾನುಭವಿಗಳು ಸಂತಸಪಟ್ಟರು.


