RYMEC ನಲ್ಲಿ ಮೂರು ದಿನಗಳ  ಜನರೇಟಿವ್ ಎಐ ಕಾರ್ಯಾಗಾರ ಯಶಸ್ವಿ

MK HasiruKranti
RYMEC ನಲ್ಲಿ ಮೂರು ದಿನಗಳ  ಜನರೇಟಿವ್ ಎಐ ಕಾರ್ಯಾಗಾರ ಯಶಸ್ವಿ
WhatsApp Group Join Now
Telegram Group Join Now
ಬಳ್ಳಾರಿ, ಏ.19..: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ಇಂಜಿನಿಯರಿಂಗ್  ಕಾಲೇಜಿನ ಕಂಪ್ಯೂಟರ್ ಸೈನ್ಸ್ (AI & ML) ವಿಭಾಗದ ವತಿಯಿಂದ “ಜನರೇಟಿವ್ ಎಐ: ಮಾದರಿಗಳು, ಪ್ರಾಂಪ್ಟಿಂಗ್ ಮತ್ತು ಡಿಪ್ಲಾಯ್ಮೆಂಟ್” ವಿಷಯದ ಮೇಲೆ 3 ದಿನಗಳ ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು ಎಂದು ಕಾಲೇಜಿನ ಕಾಲೇಜಿನ ಆಡಳಿತ ಮಂಡಳಿ ತಿಳಿಸಿದೆ.
ಈ ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಹೆಚ್. ಮಹಾಬಲೇಶ್ವರಪ್ಪ ಉದ್ಘಾಟಿಸಿ ಮಾತನಾಡಿ, ಇಂತಹ ಕಾರ್ಯಾಗಾರಗಳು ವಿದ್ಯಾರ್ಥಿಗಳಲ್ಲಿ ನವೀನ ತಾಂತ್ರಿಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಅತ್ಯಂತ ಸಹಕಾರಿ ಎಂದು ಹೇಳಿದರು. ವಿಭಾಗದ ಮುಖ್ಯಸ್ಥರಾದ ಡಾ. ಸಾಯಿ ಮಾಧವಿ ಡಿ ಅವರು ಕಾರ್ಯಾಗಾರದ ಉದ್ದೇಶ ಮತ್ತು ಮಹತ್ವವನ್ನು ವಿವರಿಸಿದರು.
ಕಾರ್ಯಾಗಾರದಲ್ಲಿ ತಜ್ಞರಾದ  ಮಲ್ಲೇಶ್ ವಿ.ಎಸ್. ಅವರು ಜನರೇಟಿವ್ ಎಐ ತಂತ್ರಜ್ಞಾನ, ಪ್ರಾಂಪ್ಟಿಂಗ್ ವಿಧಾನಗಳು ಹಾಗೂ ಡಿಪ್ಲಾಯ್ಮೆಂಟ್ ಕುರಿತು ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಜನೇಕುಂಟೆ ಬಸವರಾಜ್ ಹಾಗೂ ಕಾರ್ಯದರ್ಶಿಗಳಾದ ಡಾ. ಅರವಿಂದ ಪಟೇಲ್ ಅವರು ಕಾರ್ಯಕ್ರಮಕ್ಕೆ ಶುಭಾಶಯಗಳನ್ನು ಕೋರಿದರು.
  AI & ML ವಿಭಾಗದ ಅಧ್ಯಾಪ ಡಾ. ಬಸವರಾಜ್ ಕುಸಮ್ಮನವರ್, ಪ್ರೊ. ಗಂಗಾಧರ ಜಿ.ಎಚ್., ಡಾ. ಶಿಲ್ಪಾ ಪಾಟೀಲ್, ಪ್ರೊ. ಸುಮನಾ ಸಿ.ಎಂ., ಪ್ರೊ. ಇ.ಎನ್.ವಿ. ರಾಜೇಶ್  ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಕಾರ್ಯಕ್ರಮದ ಅಂತ್ಯದಲ್ಲಿ ಭಾಗವಹಿಸಿದವರಿಗೆ ಪ್ರಮಾಣಪತ್ರ ವಿತರಣೆ ನಡೆಯಿತು. ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
WhatsApp Group Join Now
Telegram Group Join Now
Share This Article