₹2.45 ಕೋಟಿ ತೆರಿಗೆ ಬಾಕಿ: ಮಾಲ್‌ಗೆ ಬೀಗ

MK HasiruKranti
₹2.45 ಕೋಟಿ ತೆರಿಗೆ ಬಾಕಿ: ಮಾಲ್‌ಗೆ ಬೀಗ
WhatsApp Group Join Now
Telegram Group Join Now
ಬಳ್ಳಾರಿ19..: ಮಹಾನಗರ ಪಾಲಿಕೆಗೆ ನಾಲ್ಕು ವರ್ಷಗಳ ತೆರಿಗೆ ಬಾಕಿ ಉಳಿಸಿಕೊಂಡಿದ್ದ ಎಸ್‌ಎಲ್‌ಎನ್‌ ಮಾಲ್‌ಗೆ ಪಾಲಿಕೆ ಅಧಿಕಾರಿಗಳು ಶುಕ್ರವಾರ ಬೀಗ ಹಾಕಿದರು.ತೆರಿಗೆ, ಹಿಂದಿನ ಬಾಕಿ, ಬಡ್ಡಿ ಸೇರಿ ₹2.45 ಕೋಟಿ ಹಣವನ್ನು ಎಸ್‌ಎಲ್‌ಎನ್‌ ಮಾಲ್‌ ಪಾವತಿಸಬೇಕಿದೆ. ತೆರಿಗೆ ಬಾಕಿ ಪಾವತಿ ಸಂಬಂಧ ಎಸ್‌ಎಲ್‌ಎನ್‌ ಮಾಲ್‌ಗೆ ಈಗಾಗಲೇ ನೋಟಿಸ್‌ ನೀಡಲಾಗಿದೆ, ತಗಾದೆ ನೋಟಿಸ್‌ಗಳನ್ನೂ ನೀಡಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಹೇಳಿದರು.
ವರ್ಷದ ಹಿಂದೆಯೂ ಮಾಲ್‌ಗೆ ಬೀಗ ಹಾಕಲಾಗಿತ್ತು. ಆಗ ₹37 ಲಕ್ಷ ಪಾವತಿ ಮಾಡಿ, ಉಳಿಕೆ ಹಣ ಪಾವತಿಸುವ ಭರವಸೆ ನೀಡಿತ್ತು. ಆದರೆ, ಪ್ರಸಕ್ತ ವರ್ಷ ಮಾರ್ಚ್‌ ತಿಂಗಳು ಪೂರ್ಣಗೊಂಡರೂ ತೆರಿಗೆ ಪಾವತಿ ಮಾಡದ ಕಾರಣಕ್ಕೆ ಅಧಿಕಾರಿಗಳು ಈ ಕ್ರಮ ಜರುಗಿಸಿದ್ದಾರೆ.
WhatsApp Group Join Now
Telegram Group Join Now
Share This Article