ಮಹಿಳೆಯರು ಸಮಾನ ಹಕ್ಕುಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಅಂಬೇಡ್ಕರ್‌ರ ಕೊಡುಗೆ ಅಪಾರ : ಮಠಮತಿ

Pratibha Boi
ಮಹಿಳೆಯರು ಸಮಾನ ಹಕ್ಕುಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಅಂಬೇಡ್ಕರ್‌ರ ಕೊಡುಗೆ ಅಪಾರ : ಮಠಮತಿ
WhatsApp Group Join Now
Telegram Group Join Now
ಸಂಕೇಶ್ವರ : ಮಹಿಳೆಯರು ಸಮಾನ ಹಕ್ಕುಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಡಾ.ಬಿ.ಆರ್. ಅಂಬೇಡ್ಕರ್‌ ಅವರು ನಡೆಸಿದ ಹೋರಾಟ ಹಾಗೂ ನೀಡಿದ ಕೊಡುಗೆ ಅಪಾರವಾದುದು’ ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶೀತಲ ಮಠಮತಿ ಹೇಳಿದರು.
ಸಮೀಪದ ಬಾಡ ಗ್ರಾಮದಲ್ಲಿ ಡಾ! ಬಿ ಆರ್ ಅಂಬೇಡ್ಕರ್ ಅವರ 135 ನೇ ಜಯಂತಿಯವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ಇನ್ನೋರ್ವ ಅತಿಥಿಗಳಾದ ಬಿ ಎಸ್ ದಾದುಗೊಳ ಮಾತನಾಡಿ, ಭಾರತಕ್ಕೆ ಅಂಬೇಡ್ಕರ್ ಅವರ ಕೊಡುಗೆ ಅವರ ಶಿಕ್ಷಣ ಮತ್ತು ಅವರ ಹೋರಾಟದ ಕುರಿತು, ಕನ್ನಡದಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಿದರು.
ಗಣ್ಯರಿಂದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸತ್ಕಾರಿಸಲಾಯಿತು.
ಬಾಡ ಗ್ರಾಮದ ಮುಖಂಡರಾದ ಸಿಕಂದರ್ ಸನದಿ, ರಾಜು ಹಿಂಗ್ಲಜೆ, ಸದಾಶಿವ ಜಾಡರ, ಮಾರುತಿ ಸಾವರತ್ಕರ, ಶಿವಾನಂದ ಆಲುರೆ, ವಿಶಾಲ ಒಡ್ಡಗೊಳ ಕಿರಣ ಬಡಿಗೇರ, ಪ್ರಶಾಂತ ನಾಗಯಿಗೊಳ, ಪ್ರದೀಪ ಸಂಕಪಗೊಳ, ಧೀರಜ ಕಾವಳಿಕಟ್ಟಿ, ಚೇತನ ಒಡ್ಡಗೊಳ, ಪ್ರತಾಪ ನಾಗಯಿಗೊಳ ಈ ಕಾರ್ಯಕ್ರಮದ ಮುಂದಾಳತ್ವ ವಹಿಸಿದ್ದು ಕಾರ್ಯಕ್ರಮವನ್ನು ವಿರುಪಾಕ್ಷಿ ವಡ್ಡಗೊಳ ನಿರೂಪಿಸಿದರು.
WhatsApp Group Join Now
Telegram Group Join Now
Share This Article