ಮಕ್ಕಳೊಂದಿಗೆ ಮಗುವಾದ ಸಂತೋಷ್ ಲಾಡ್

Hasiru Kranti
ಮಕ್ಕಳೊಂದಿಗೆ ಮಗುವಾದ ಸಂತೋಷ್ ಲಾಡ್
WhatsApp Group Join Now
Telegram Group Join Now

ಕೊಪ್ಪಳ : ಜಿಲ್ಲೆಯ ಶಹಪುರ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಶೈಕ್ಷಣಿಕ ಪ್ರವಾಸ ಕೈಗೊಂಡಿದ್ದರ ಹಿನ್ನೆಲೆಯಲ್ಲಿ ಬೆಂಗಳೂರಿನ ನಾಡದೊರೆ ಕೆಂಪೇಗೌಡ ಅಂತಾರಾಷ್ಟಿçÃಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಈ ವೇಳೆ ರಾಜ್ಯ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಮಕ್ಕಳೊಂದಿಗೆ ಬೆರೆತು ಮಗುವಾಗಿ ಮುದ ನೀಡಿದ ಪ್ರಸಂಗ ನಡೆದಿದೆ.

ಸಂತೋಷ್ ಲಾಡ್ ಅವರು ತಮ್ಮ ಕರ್ತವ್ಯಕ್ಕಾಗಿ ಬೆಂಗಳೂರಿನ ವಿಮಾನ ನಿಲ್ದಾಣದ ಮೂಲಕ ಶಿವಮೊಗ್ಗಕ್ಕೆ ತೆರಳುತ್ತಿದ್ದರು. ವಿಮಾನ ನಿಲ್ದಾಣದಲ್ಲಿ ಯಾವೂರು ನಿಮ್ಮದು? ಏನು ಓದುತ್ತಿದ್ದೀರಿ? ಎಂದು ಮಕ್ಕಳೊಂದಿಗೆ ಕುಶಲೋಪರಿ ವಿಚಾರಿಸುತ್ತ ನೆಲದಲ್ಲಿಯೇ ಕುಳಿತುಕೊಂಡರು. ಚೆನ್ನಾಗಿ ಓದಬೇಕು, ಆರೋಗ್ಯ ಕಾಪಾಡಿಕೊಳ್ಳಬೇಕು. ನೀವು ಎಷ್ಟೆಷ್ಟು ಮಾರ್ಕ್ಸ್ ತೆಗೆದುಕೊಳ್ತೀರಿ? ಅಂತ ನಿಮ್ಮ ಶಾಲೆಗೆ ಬಂದು ನಾನು ಚೆಕ್ ಮಾಡ್ತೀನಿ ಅಂತ ಹೇಳಿದರು. ಬಳಿಕ ಮಕ್ಕಳೊಂದಿಗೆ ಫೋಟೋ ತೆಗೆಸಿಕೊಂಡು ಬೆಂಗಳೂರಿನಿAದ ಶಿವಮೊಗ್ಗಕ್ಕೆ ಪ್ರಯಾಣ ಬೆಳೆಸಿದರು.

ಅಂದಹಾಗೆ, ಶಹಪುರ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ದೇವರಾಜ್, ಸಹ ಶಿಕ್ಷಕರಾದ ಶರಣಪ್ಪ, ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಹುಲ್ಲೇಶ್ ಸಿಂದೋಗಿ ನೇತೃತ್ವದಲ್ಲಿ ೪೦ಕ್ಕೂ ಹೆಚ್ಚು ಮಕ್ಕಳು ಗ್ರಾಮದಿಂದ ಕಿರ್ಲೋಸ್ಕರ್ ಗೆ ತೆರಳಿ ಅಲ್ಲಿಂದ ಬೂದುಗುಂಪಾ ದನಕನದೊಡ್ಡಿ ರೇಲ್ವೆ ಸ್ಟೇಷನ್ ಮೂಲಕ ಯಶವಂತಪುರ ಎಕ್ಸ್ಪ್ರೆಸ್ ರೈಲು ಮೂಲಕ ಪ್ರಯಾಣ ಬೆಳೆಸಿದರು. ತುಮಕೂರಿನಲ್ಲಿ ಸಿದ್ಧಗಂಗಾ ಮಠ ದರ್ಶನ ಮಾಡಿ ಬಳಿಕ ಬಸ್ ಮೂಲಕ ಬೆಂಗಳೂರಿನ ಡಾ.ರಾಜ್, ಪಾರ್ವತಮ್ಮ ರಾಜಕುಮಾರ್, ಅಪ್ಪು, ಅಂಬರೀಷ್ ಅವರ ಸಮಾಧಿ ವೀಕ್ಷಣೆ ಮಾಡಿದರು. ಬಳಿಕ ಇಸ್ಕಾನ್ ಟೆಂಪಲ್, ನೆಹರು ತಾರಾಲಯ, ವಿಧಾನಸೌಧ ವೀಕ್ಷಣೆ ಮಾಡಿದರು.

ಒಟ್ಟಿ ಐದು ದಿನದ ಶೈಕ್ಷಣಿಕ ಪ್ರವಾಸದಲ್ಲಿ ಬಸ್ ಮೂಲಕ ಸುತ್ತೂರ ಮಠ, ನಂಜನಗೂಡು ಶ್ರೀ ನಂಜುAಡೇಶ್ವರ ದೇವಸ್ಥಾನ ದರ್ಶನದ ಬಳಿಕ ಫ್ಯಾಂಟಸಿ ವಾಟರ್ ಪಾರ್ಕ್ ನಲ್ಲಿ ಮಕ್ಕಳು ಪುಲ್ ಎಂಜಾಯ್ ಮಾಡಿದರು. ಬಳಿಕ ಶ್ರೀ ಚಾಮುಂಡೇಶ್ವರಿ ಅಮ್ಮನವರ ದರ್ಶನ ಪಡೆದು, ಚಾಮರಾಜೇಂದ್ರ ಮೃಗಾಲಯ, ಮೈಸೂರು ಅರಮನೆ, ಪ್ಯಾಲೇಸ್ ದೀಪಗಳ ವೀಕ್ಷಣೆ ಮಾಡಿದರು.

ಮಕ್ಕಳ ಶೈಕ್ಷಣಿಕ ಪ್ರವಾಸಕ್ಕೆ ಕೊಪ್ಪಳ ಜಿಲ್ಲೆಯ ಜನಪ್ರತಿನಿಧಿಗಳು, ಸ್ಥಳೀಯ ಜನಪ್ರತಿನಿಧಿಗಳು, ಗ್ರಾಮಸ್ಥರು, ಪೋಷಕರು, ಕಿರ್ಲೋಸ್ಕರ್ ಸಂಸ್ಥೆಯ ವ್ಯವಸ್ಥಾಪಕರು ಹೆಚ್ಚಿನ ಸಹಕಾರ ನೀಡಿದ್ದು ಐದು ದಿನದ ಪ್ರವಾಸದಲ್ಲಿ ಮಕ್ಕಳು ಸಂಭ್ರಮಿಸಿದರು ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article