ಧಾರವಾಡ: 2024-25 ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ. ಗುಣಮಟ್ಟದ ಕಡಲೆಕಾಳು ಉತ್ಪನ್ನವನ್ನು ಪ್ರತಿ ಕ್ವಿಂಟಾಲ್ಗೆ ರೂ. 5,650 ರಂತೆ ಧಾರವಾಡ ಜಿಲ್ಲೆಯ ರೈತರಿಂದ ಮಾತ್ರ ಖರೀದಿಸಲು ಸರ್ಕಾರದಿಂದ ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, ಜಿಲ್ಲೆಯ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾ ಟಾಸ್ಕಪೋರ್ಸ್ ಸಮಿತಿಯ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಸರ್ಕಾರ ಆದೇಶ ಹೊರಡಿಸಿದ ದಿನದಿಂದ ಖರೀದಿ ಕೇಂದ್ರಗಳಲ್ಲಿ ರೈತರ ಅಗತ್ಯ ದಾಖಲೆಗಳೊಂದಿಗೆ ನೋಂದಣಿಯನ್ನು ಮಾಡಿಕೊಳ್ಳಲಾಗುತ್ತಿದೆ. ರೈತರ ನೋಂದಣಿ ಕಾಲಾವಧಿಯನ್ನು 80 ದಿನಗಳವರೆಗೆ ಅಂದರೆ ಜನವರಿ 23, 2025 ದಿಂದ ಎಪ್ರೀಲ್ 12, 2025 ರವರೆಗೆ ಹಾಗೂ ಖರೀದಿ ಅವಧಿಯನ್ನು 90 ದಿನಗಳವರೆಗೆ ಅಂದರೆ ಜನವರಿ 23, 2025 ರಿಂದ ಎಪ್ರೀಲ್ 22, 2025 ರವರೆಗೆ ನಿಗದಿಪಡಿಸಲಾಗಿದೆ. ನೊಂದಣಿ ಕಾರ್ಯದ ಜೊತೆಗೆ ಖರೀದಿ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ. ಸರ್ಕಾರಿ ರಜೆ ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ಕಡಲೆಕಾಳು ಉತ್ಪನ್ನವನ್ನು ಖರೀದಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಕಡಲೇಕಾಳು ಪ್ರತಿ ಎಕರೆಗೆ ನಾಲ್ಕು ಕ್ವಿಂಟಾಲ್ನಂತೆ ಪ್ರತಿ ರೈತರಿಂದ ಗರಿಷ್ಠ 20 ಕ್ವಿಂಟಾಲ್ ಪ್ರಮಾಣದ ಎಫ್ಎಕ್ಯೂ ಗುಣಮಟ್ಟದ ಕಡಲೆಕಾಳು ಉತ್ಪನ್ನವನ್ನು ಸರ್ಕಾರದ ಬೆಂಬಲ ಬೆಲೆ ಪ್ರತಿ ಕ್ವಿಂಟಾಲ್ಗೆ ರೂ.5,650 ರಂತೆ ಖರೀದಿಸಲಾಗುವದೆಂದು ಅವರು ಹೇಳಿದರು.
*ಉತ್ಪನ್ನ ಖರೀದಿಸಲು ಅಗತ್ಯ ದಾಖಲೆ:* ಎಫ್.ಎ.ಕ್ಯೂ ಗುಣಮಟ್ಟದ ಕಡಲೆಕಾಳು ಉತ್ಪನ್ನಗಳನ್ನು ಮಾರಾಟ ಮಾಡಲು ರೈತರು ನೋಂದಣಿಗಾಗಿ ತಮ್ಮ ಆಧಾರ ಗುರುತಿನ ಚೀಟಿಯ ಮೂಲ ಪ್ರತಿ ಹಾಗೂ ಅದರ ನಕಲು ಪ್ರತಿ, ಪಹಣಿ ಪತ್ರಿಕೆಯಲ್ಲಿರುವ ಹೆಸರಿನ ರೈತರ ಆಧಾರ ಸಂಖ್ಯೆ ಜೋಡಣೆಗೊಂಡ ಬ್ಯಾಂಕ್ ಖಾತೆ ಪಾಸ್ ಪುಸ್ತಕದ ನಕಲು ಪ್ರತಿಯನ್ನು ಸಲ್ಲಿಸಬೇಕು.
*ಕಡಲೆಕಾಳು ಉತ್ಪನ್ನ ಖರೀದಿಗೆ ಅನುಸರಿಸುವ ಕ್ರಮ:* ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಖರೀದಿಸುವ ಕಡಲೆಕಾಳು ಉತ್ಪನ್ನವು ನಿರ್ಧಿಷ್ಠಪಡಿಸಿದ ಎಫ್.ಎ.ಕ್ಯೂ ಗುಣಮಟ್ಟ ಹೊಂದಿರಬೇಕು. ಕಡಲೆಕಾಳು ಚೆನ್ನಾಗಿ ಒಣಗಿರಬೇಕು, ತೇವಾಂಶವು ಶೇ.14 ಕ್ಕಿಂತ ಕಡಿಮೆ ಇರಬೇಕು. ಕಡಲೆಕಾಳು ಉತ್ಪನ್ನವು ಗುಣಮಟ್ಟದ ಗಾತ್ರ, ಬಣ್ಣ ಮತ್ತು ಆಕಾರವನ್ನು ಹೊಂದಿರಬೇಕು. ಗಟ್ಟಿಯಾಗಿರಬೇಕು ಮತ್ತು ಮಣ್ಣಿನಿಂದ ಬೇರ್ಪಡಿಸಲ್ಪಟ್ಟು ಸ್ವಚ್ಛವಾಗಿರಬೇಕು.
ಕಡಲೆಕಾಳು ಉತ್ಪನ್ನವನ್ನು ಸಾಣಿಗೆಯಿಂದ ಸ್ವಚ್ಛಗೊಳಿಸಿರಬೇಕು. ಕ್ರಿಮಿಕೀಟಗಳಿಂದ ಮುಕ್ತವಾಗಿರಬೇಕು. ರೈತರಿಗೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದವರು ನೀಡುವ ಗೋಣಿ ಚೀಲದಲ್ಲಿ 50 ಕೆ.ಜಿ. ಪ್ರಮಾಣದಲ್ಲಿ ತುಂಬಬೇಕು.
*ಕಡಲೆಕಾಳು ಖರೀದಿ ಕೇಂದ್ರಗಳ ವಿವರ:* ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ನೇರವಾಗಿ ಎಫ್.ಎ.ಕ್ಯು ಗುಣಮಟ್ಟದ ಕಡಲೆಕಾಳು ಉತ್ಪನ್ನ ಖರೀದಿಸಲು ಜಿಲ್ಲೆಯ ಐದು ತಾಲೂಕುಗಳ 24 ಸ್ಥಳಗಳಲ್ಲಿ ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ.
ಧಾರವಾಡ ತಾಲೂಕಿನಲ್ಲಿ ಧಾರವಾಡದ ಟಿ.ಎ.ಪಿ.ಸಿ.ಎಮ್.ಸಂಘ (9916259625) ದಿಂದ ಧಾರವಾಡ ಎ.ಪಿ.ಎಮ್.ಸಿ ಮಾರುಕಟ್ಟೆಯಲ್ಲಿ, ಉಪ್ಪಿನಬೇಟಗೇರಿಯ ಪಿ.ಕೆ.ಪಿ.ಎಸ್ಸಂಘ (9620048221), ದಿಂದ ಉಪ್ಪಿಬೇಟಗೇರಿಯಲ್ಲಿ, ಮೊರಬದ ಕೆ.ಎಸ್.ಎಫ್.ಪಿ.ಓ (9620107330) ಮೂಲಕ ಹೆಬ್ಬಳ್ಳಿಯಲ್ಲಿ, ಹುಬ್ಬಳ್ಳಿ ತಾಲೂಕಿನಲ್ಲಿ ಟಿ.ಎ.ಪಿ.ಸಿ.ಎಮ್.ಎಸ್ (6360506861)ದಿಂದ ಎ.ಪಿ.ಎಮ್.ಸಿ ಹುಬ್ಬಳ್ಳಿಯಲ್ಲಿ, ಬ್ಯಾಹಟ್ಟಿ ಪಿ.ಕೆ.ಪಿ.ಎಸ್ (9986211378)ದಿಂದ ಬ್ಯಾಹಟ್ಟಿಯಲ್ಲಿ, ಪಿ.ಕೆ.ಪಿ.ಎಸ್ ಕೋಳಿವಾಡ (9945846878)ದಿಂದ ಕೋಳಿವಾಡದಲ್ಲಿ, ಹೆಬಸೂರ ಪಿ.ಕೆ.ಪಿ.ಎಸ್ (9945894870)ದಿಂದ ಹೆಬಸೂರದಲ್ಲಿ, ನೂಲ್ವಿ ಪಿ.ಕೆ.ಪಿ.ಎಸ್ (9900896952)ದಿಂದ ನೂಲ್ವಿಯಲ್ಲಿ, ನವಲಗುಂದ ತಾಲೂಕಿನಲ್ಲಿ ಹೆಬ್ಬಾಳ ಪಿ.ಕೆ.ಪಿ.ಎಸ್ (9449065613)ದಿಂದ ಹೆಬ್ಬಳದಲ್ಲಿ, ತಿರ್ಲಾಪೂರ ಪಿ.ಕೆ.ಪಿ.ಎಸ್ (8494801475)ದಿಂದ ತಿರ್ಲಾಪೂರದಲ್ಲಿ, ಆರೇಕುರಹಟ್ಟಿ ಪಿ.ಕೆ.ಪಿ.ಎಸ್ (9845822903)ದಿಂದ ಆರೇಕುರಹಟ್ಟಿಯಲ್ಲಿ, ಮೊರಬ ಎಫ್.ಪಿ.ಓ (9380871883)ದಿಂದ ಶಿರೂರದಲ್ಲಿ, ಮೊರಬದ ಕೆ.ಎಸ್.ಎಫ್.ಪಿ.ಓ (9620107330)ದಿಂದ ಶಿರಕೋಳದಲ್ಲಿ, ಮೊರಬದ ಪಿ.ಕೆ.ಪಿ.ಎಸ್ (7204821271)ದಿಂದ ಮೊರಬದಲ್ಲಿ, ಹಾಳಕುಸುಗಲ್ ಪಿ.ಕೆ.ಪಿ.ಎಸ್ (8123836380)ದಿಂದ ಹಾಳಕುಸುಗಲ್, ನವಲಗುಂದ ಪಿ.ಕೆ.ಪಿ.ಎಸ್ (9886491644) ನವಲಗುಂದಲ್ಲಿ, ಬೆಳವಟಗಿಯ ಪಿ.ಕೆ.ಪಿ.ಎಸ್ (6363463089)ದಿಂದ ಬೆಳವಟಗಿಯಲ್ಲಿ, ಅಣ್ಣಿಗೇರಿ ಟಿ.ಎ.ಪಿ.ಸಿ.ಎಮ್.ಎಸ್ (8861008191)ದಿಂದ ನವಲಗುಂದ ಎ.ಪಿ.ಎಮ್.ಸಿಯಲ್ಲಿ ಹಾಗೂ ಅಣ್ಣಿಗೇರಿ ತಾಲೂಕಿನಲ್ಲಿ ಅಣ್ಣಿಗೇರಿ ಟಿ.ಎ.ಪಿ.ಸಿ.ಎಮ್.ಎಸ್(8861008191)ದಿಂದ ಅಣ್ಣಿಗೇರಿ ಎ.ಪಿ.ಎಮ್.ಸಿಯಲ್ಲಿ, ಅಣ್ಣಿಗೇರಿ ಪಿ.ಕೆ.ಪಿ.ಎಸ್(7760184669)ದಿಂದ ಅಣ್ಣಿಗೇರಿ ಎ.ಪಿ.ಎಮ್.ಸಿಯಲ್ಲಿ ಹಾಗೂ ಕುಂದಗೋಳ ತಾಲೂಕಿನಲ್ಲಿ ಯರಗುಪ್ಪಿ ಪಿ.ಕೆ.ಪಿ.ಎಸ್ (9845169206)ದಿಂದ ಯರಗುಪ್ಪಿಯಲ್ಲಿ, ಯಲಿವಾಳ ಪಿ.ಕೆ.ಪಿ.ಎಸ್ (9945163891)ದಿಂದ ಯಲಿವಾಳದಲ್ಲಿ, ಯರಗುಪ್ಪಿ ಪಿ.ಕೆ.ಪಿ.ಎಸ್(9845169206) ದಿಂದ ಎ.ಪಿ.ಎಮ್.ಸಿ ಕುಂದಗೋಳದಲ್ಲಿ, ಹಾಗೂ ಯರೇಬೂದಿಹಾಳ ಪಿ.ಕೆ.ಪಿ.ಎಸ್ (9742553167) ದಿಂದ ಯರೇಬೂದಿಹಾಳ ಗ್ರಾಮದಲ್ಲಿ ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಧಾರವಾಡ, ಹುಬ್ಬಳ್ಳಿ, ಕುಂದಗೋಳ, ನವಲಗುಂದ, ಅಣ್ಣಿಗೇರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಯವರನ್ನು ಅಥವಾ ಕೃಷಿ ಮಾರುಕಟ್ಟೆ ಇಲಾಖೆಯ ಉಪನಿರ್ದೇಶಕ (9741164416) ರನ್ನು ಅಥವಾ ಹುಬ್ಬಳ್ಳಿ ಕ.ರಾ.ಸ.ಮಾ.ಮಹಾಮಂಡಳದ ಶಾಖಾ ವ್ಯವಸ್ಥಾಪಕರನ್ನು (ದೂ.ಸಂ.:0836-2004419) ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.