ಬೈಲಹೊಂಗಲ: ಜನಸೇವೆ ಮಾಡುವ ಅವಕಾಶಗಳು ದೊರೆತಾಗ ಸಮಾಜದ ಕಟ್ಟ ಕಡೆಯ ವ್ಯಕ್ತಿಯವರೆಗೆ ಯಾವದೊ ಒಂದು ರೂಪದಲ್ಲಿ ನಮ್ಮ ಸೇವೆ ಮುಟ್ಟಿದಾಗ ಆ ಸ್ಥಾನಕ್ಕೆ ಮತ್ತು ಆ ಸ್ಥಾನ ಹೊಂದಿದ ವ್ಯಕ್ತಿಗೆ ಗೌರವ ದೊರೆಯುತ್ತದೆ ಎಂದು ಜಿಲ್ಲಾ ಯುನಿಯನ್ ನಿರ್ದೇಶಕ, ಕೆಎಮ್ಎಫ್ ಅಧ್ಯಕ್ಷ ನ್ಯಾಯವಾದಿ ಈಶ್ವರಚಂದ್ರ ಇಂಗಳಗಿ ಹೇಳಿದರು.
ಸಮೀಪದ ಹೊಸುರ ಗ್ರಾಮದ ಕೆಎಮ್ಎಫ್ ಆಡಳಿತ ಮಂಡಲಿಯಿಂದ ಗುರುವಾರ ನೈಋತ್ಯ ರೈಲ್ವೆ ವಿಭಾಗದ ಡಿಅರ್ ಯುಸಿಸಿ ನಿರ್ದೇಶಕರಾಗಿ ಆಯ್ಕೆಯಾದ ಎಪ್.ಎಸ್.ಸಿದ್ದನಗೌಡರ ಹಾಗೂ ಸವದತ್ತಿ ತಾಲೂಕಾ ಕೃಷಿಕ ಸಮಾಜದ ಅಧ್ಯಕ್ಷರಾಗಿ ಆಯ್ಕೆಯಾದ ಉಮೇಶ ಬೋಳೆತ್ತಿನ ಅವರ ಸತ್ಕಾರ ಸಭೆಯಲ್ಲಿ ಮಾತನಾಡಿ, ಗ್ರಾಮದ ವಿದ್ಯಾವಂತ ಯುವಕರು ರಾಜಕೀಯದಲ್ಲಿ ಧುಮಿಕಿದಾಗ ಶ್ರದ್ದೆ ವಿಶ್ವಾಸದಿಂದ ಪರಿಶ್ರಮಪಟ್ಟರೆ ಉನ್ನತ ಸ್ಥಾನಮಾನ ತಾನಾಗಿಯೆ ಹುಡಕಿಕೊಂಡು ಬರುತ್ತವೆ. ರಾಜಕಾರಣಿಗಳು ಗ್ರಾಮೀಣ ಮಟ್ಟದಲ್ಲಿ ಜನರ ಸೇವೆಯೊಂದಿಗೆ ಸದಾ ಚಟುವಟಿಕೆಯೆಂದಿರಬೇಕು. ನಮ್ಮೂರಿನ ಯುವಕರು ಉನ್ನತ ಸ್ಥಾನಕ್ಕೆ ಎರುತ್ತಿರುವದು ಸಂತಸ ತಂದಿದೆ ಎಂದರು.
ಸಂಘದ ಉಪಾಧ್ಯಕ್ಷ ಬಸವರಾಜ ಮೂಗಬಸವ ಮಾತನಾಡಿ, ಅಧಿಕಾರಕ್ಕೆ ಎರಿದಾಗ ತಮ್ಮ ಮತ್ತು ತಮ್ಮ ಸಂಬಧಿಗಳ ಸೇವೆಗಿಂತ ನೊಂದವರ ಕಣ್ಣಿರು ಒರೆಸುವತ್ತ ನಮ್ಮ ಚಿತ್ತವಿರಬೇಕು. ಅಂತಹ ಪ್ರಾಮಾಣಿಕ ಸೇವೆಗೆ ನಮ್ಮೂರಿನ ಇಬ್ಬರು ಯುವಕರು ಈಸ್ಥಾನಕ್ಕೆ ಮುಟ್ಟಿದ್ದಾರೆ. ನಾವೆಲ್ಲರೂ ಪಕ್ಷ ಬೇದ ಮರೆತು ಅವರ ಏಳಿಗೆಗೆ ಸಹಕಾರ ನೀಡೊಣ ಎಂದರು.
ಸತ್ಕಾರ ಸ್ವೀಕರಿಸಿದ ನೈಋತ್ಯ ರೈಲ್ವೆ ವಿಭಾಗದ ನಿರ್ದೇಶಕ ಎಫ್.ಎಸ್.ಸಿದ್ದನಗೌಡರ, ತಾಲ್ಲೂಕಾ ಕೃಷಿಕ ಸಮಾಜ ಅಧ್ಯಕ್ಷ ಉಮೇಶ ಬೋಳೆತ್ತಿನ ಅವರನ್ನು ಸತ್ಕರಿಸಲಾಯಿತಿ ಕಾರ್ಯಕ್ರಮದಲ್ಲಿ ಕೆಎಮ್ಎಫ್ ನಿರ್ದೇಶಕರಾದ ಅಶೊಕ ಬೂದಿಹಾಳ, ಬಸವರಾಜ ಕರಡಿಗುದ್ದಿ, ಉದಯ ಬೂದಿಹಾಳ, ಮಂಜುಗೌಡ ಪಾಟೀಲ್, ಮಹಾದೇವ ಕಮತಗಿ, ಶಂಕರ ಮಸಗುಪ್ಪಿ, ದುಂಡಪ್ಪ ಪಣದಿ, ಬಸವರಾಜ ವಿವೇಕಿ, ಸಿಈಓ ಶಂಕರ ಕಳ್ಳಿ, ಲಕ್ಷ್ಮಣ ಹಜರೆ ಇದ್ದರು.,,,,