ಕನಕದುರ್ಗಮ್ಮ ಗುಡಿ ಅಂಡರ್’ಪಾಸ್ ಕಾಮಗಾರಿ ಶೀಘ್ರ ಪೂರ್ಣ: ಶಾಸಕ ನಾರಾ ಭರತ್ ರೆಡ್ಡಿ

Ravi Talawar
ಕನಕದುರ್ಗಮ್ಮ ಗುಡಿ ಅಂಡರ್’ಪಾಸ್ ಕಾಮಗಾರಿ ಶೀಘ್ರ ಪೂರ್ಣ: ಶಾಸಕ ನಾರಾ ಭರತ್ ರೆಡ್ಡಿ
WhatsApp Group Join Now
Telegram Group Join Now
ಬಳ್ಳಾರಿ, ಜ.28: ಬಳ್ಳಾರಿ ನಗರದ ಕನಕದುರ್ಗಮ್ಮ ಗುಡಿ ಬಳಿಯ ಅಂಡರ್’ಪಾಸ್ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ಕೆಲವೇ ದಿನಗಳಲ್ಲಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳ್ಳಲಿದೆ ಎಂದು ಶಾಸಕ ನಾರಾ ಭರತ್ ರೆಡ್ಡಿ ತಿಳಿಸಿದ್ದಾರೆ.
ಸೋಮವಾರ ಸಂಜೆ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಬಾಕಿ ಉಳಿದಿರುವ ಕೆಲಸದ ಬಗ್ಗೆ ಮಾಹಿತಿ ಪಡೆದರು.
ಸದರಿ ಅಂಡರ್’ಪಾಸ್’ನ ಮಧ್ಯೆ ಮೇಲ್ಭಾಗದಲ್ಲಿ ರೆಲ್ವೆ ಟ್ರ್ಯಾಕ್ ಇದ್ದು  ಆ ಭಾಗದ ಕಾಮಗಾರಿಯು ವಿಳಂಬ ಆಗಿದ್ದು, ಅದಕ್ಕೆ ಸಂಬಂಧಿಸಿ ರೈಲ್ವೆ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದು, ಕಾಮಗಾರಿ ಪೂರ್ಣಗೊಳಿಸಲು ಸಹಕರಿಸುವಂತೆ ಸೂಚಿಸಿದರು.
ವಿದ್ಯುತ್ ದೀಪ ಅಳವಡಿಕೆ ಮಾತ್ರ ಬಾಕಿ ಇರುವುದಾಗಿ ಅಧಿಕಾರಿಗಳು ತಿಳಿಸಿದರು.
ಕಾಮಗಾರಿಯ ಕಾಲಮಿತಿಯು 6 ತಿಂಗಳ ಅವಧಿಯಾಗಿದ್ದು, ಎರಡೇ ತಿಂಗಳ ಅವಧಿಯಲ್ಲಿ ಬಹುತೇಕ ಪೂರ್ಣಗೊಳಿಸಲಾಗಿದೆ. ಆದರೆ ಕಾಮಗಾರಿ ವಿಳಂಬ ಆಗುತ್ತಿದೆ ಎಂಬುದು ನಿರಾಧಾರ ಎಂದು ಶಾಸಕ ನಾರಾ ಭರತ್ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.
ಒಂದು ವಾರದ ಒಳಗೆ ಕಾಮಗಾರಿ ಪೂರ್ಣಗೊಂಡು, ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗವುದು. ಸಾರ್ವಜನಿಕರು, ಸಂಘ ಸಂಸ್ಥೆಗಳು ಸಹಕರಿಸುವಂತೆ ಅವರು ಕೋರಿದ್ದಾರೆ.
WhatsApp Group Join Now
Telegram Group Join Now
Share This Article