ಹಂಪಿಯ ಮಾತಂಗ ಪರ್ವತದಿಂದ ಪ್ರವಾಸಿಗರು ಸೂರ್ಯೋದಯ ವೀಕ್ಷಣೆ

Ravi Talawar
ಹಂಪಿಯ ಮಾತಂಗ ಪರ್ವತದಿಂದ ಪ್ರವಾಸಿಗರು ಸೂರ್ಯೋದಯ ವೀಕ್ಷಣೆ
WhatsApp Group Join Now
Telegram Group Join Now

ವಿಜಯನಗರ: 2025ನೇ ವರ್ಷದ ಮೊದಲನೇ ದಿನದ ಸೂರ್ಯೋದಯವನ್ನು ಪ್ರವಾಸಿಗರು ವೀಕ್ಷಣೆ ಮಾಡಿ ಧನ್ಯರಾದರು. ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಐತಿಹಾಸಿಕ ಸ್ಥಳ ಹಂಪಿಯ ಮಾತಂಗ ಪರ್ವತದಿಂದ ಪ್ರವಾಸಿಗರು ಸೂರ್ಯೋದಯ ವೀಕ್ಷಣೆ ಮಾಡಿದರು.

ಡಿಸೆಂಬರ್​​​​​​​ ಅಂತ್ಯದಲ್ಲಿ ವಿಪರೀತ ಚಳಿ ಇದ್ದರೂ ಸಹ ಪ್ರವಾಸಿಗರು ಸೂರ್ಯೋದಯ ವೀಕ್ಷಣೆಗಾಗಿ ಇಂದು ಮುಂಜಾನೆಯೇ ಪರ್ವತ ಹತ್ತಿ ಕಾದಿರುವುದು ವಿಶೇಷವಾಗಿತ್ತು. ಅದರಲ್ಲಿ ವ್ಯಕ್ತಿಯೊಬ್ಬರು ಬರೀ ಮೈಯಲ್ಲೇ ಪರ್ವತದ ಮೇಲೆ ಕುಳಿತು ಧ್ಯಾನ ಮಾಡುವ ಮೂಲಕ ಗಮನ ಸೆಳೆದರು.

WhatsApp Group Join Now
Telegram Group Join Now
Share This Article