ಘಟಪ್ರಭಾ: ಇಲ್ಲಿನ ಪ್ರತಿಷ್ಠಿತ ದಿ. ಮಲ್ಲಾಪೂರ ಅರ್ಬನ್ ಕೋ ಆಪ ಕ್ರೆಡಿಟ್ ಬ್ಯಾಂಕ ಲಿ. ಘಟಪ್ರಭಾ ಇದರ ಅಧ್ಯಕ್ಷರಾಗಿ ರಮೇಶ ಮಲ್ಲಪ್ಪ ತುಕ್ಕಾನಟ್ಟಿ ಹಾಗೂ ಉಪಾಧ್ಯಕ್ಷರಾಗಿ ಹೊನ್ನಜ್ಜ ಚ. ಕೋಳಿ ಇವರು ಎರಡನೇ ಭಾರಿಗೆ ಅವಿರೋಧವಾಗಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ಬ್ಯಾಂಕಿನ ಅಧ್ಯಕ್ಷ ರಮೇಶ ತುಕ್ಕಾನಟ್ಟಿ ಮಾತನಾಡಿ ಬ್ಯಾಂಕಿನ ಸರ್ವಂಗಿನ ಅಭಿವೃದ್ಧಿಗೆ ಆಡಳಿತ ಮಂಡಳಿಯ ಸಹಕಾರದೊಂದಿಗೆ ಶ್ರಮಿಸುವದಾಗಿ ಹೇಳಿದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿ ನಿರ್ದೇಶಕರಾದ ಸುಭಾಸಚಂದ್ರ ಶೆ. ಕಾಡದವರ, ರಾಜಶೇಖರ ಗೊ. ತುಕ್ಕಾನಟ್ಟಿ, ಮಹಾದೇವ ಕಾ. ಬಟನೂರೆ, ಶ್ರೀಶೈಲ ಮ. ಮಗದುಮ್ಮ, ಸತೀಶ ಬೀ ಹತ್ತರವಾಟ, ಮಹಾವೀರ ಕಾ ಹುಲ್ಲೋಳಿ, ಶ್ರೀಮತಿ ರೇವಕ್ಕ ಶಂ. ಕಮತ, ಶ್ರೀಮತಿ ಶೃತಿ ಮಂ. ಮಟಗಾರ, ಆನಂದ ದುಂ. ಕಬಾಡಗಿ, ಕಲ್ಲೋಳೆಪ್ಪಾ ಹ. ಜಮಖಂಡಿ, ರಾಮಪ್ಪ ಬ. ನಾಯಿಕ, ವ್ಯವಸ್ಥಾಪಕರಾದ ರಮೇಶ ಮುರಗೋಡ, ಪಿಕೆಪಿಎಸ್ ಅಧ್ಯಕ್ಷ ಮುತ್ತಣ್ಣ ಹತ್ತರವಾಟ,ಡಾ. ಬಾಳಪ್ಪ ತುಪ್ಪದ, ಜಿ ಎಸ್. ರಜಪೂತ, ಮಲ್ಲಪ್ಪ ಬನನ್ನವರ, ಚನ್ನಬಸ್ಸು ಅಂಗಡಿ, ಶ್ರೀಕಾಂತ ಮಹಾಜನ, ಬಸಪ್ಪ ಜಿರಲಿ, ಗಂಗಾಧರ ಮುನ್ನೊಳಿ, ಅಲ್ಲಪ್ಪ ಹುಕ್ಕೇರಿ, ಬಸವರಾಜ ಬಾಗೇವಾಡಿ, ರಾಮಣ್ಣ ಕ. ತುಕ್ಕಾನಟ್ಟಿ, ಉಮೇಶ ತುಕ್ಕಾನಟ್ಟಿ ಸೇರಿದಂತೆ ಘಟಪ್ರಭಾ, ಮಲ್ಲಾಪುರ ಪಿ ಜಿ ಪಟ್ಟಣದ ಮುಖಂಡರು, ಸಹಕಾರಿ ಮುಖಂಡರು, ಸಿಬ್ಬಂದಿ ಪಾಲ್ಗೊಂಡಿದ್ದರು.