Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವಿದ್ಯಾರ್ಥಿಗಳಿಗೆ ಶೂನ್ಯ ನೆರಳು ದಿನ ಕಾರ್ಯಕ್ರಮ 

ಬಾಗಲಕೋಟೆ, ಮೇ ೦೫ : ಉಪ ಪ್ರಾದೇಶಿಕ ವಿeನ ಕೇಂದ್ರ ಹಾಗೂ ಬ್ರಿಲಿಯಂಟ್ ಅಕಾಡೆಮಿ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಶೂನ್ಯ ನೆರಳು ದಿನದ ಕಾರ್ಯಕ್ರಮವನ್ನು ಬ್ರಿಲಿಯಂಟ್ ಅಕಾಡೆಮಿಯ ಕಾರ್ಯದರ್ಶಿ ಆನಂದ ರಾಠೋಡ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 
ನಂತರ ಮಾತನಾಡಿದ ಆನಂದ ರಾಠೋಡ ಅವರು ಶೂನ್ಯ ನೆರಳಿನ ದಿನದ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ತಿಳಿಸುವ ಮಾಹಿತಿಯನ್ನು ವಿದ್ಯಾರ್ಥಿಗಳು ವಿವರವಾಗಿ ತಿಳಿದುಕೊಂಡು ಖಗೋಳ ವಿಜ್ಞಾನದಲ್ಲಿ ಆಸಕ್ತಿಯನ್ನು ಹೆಚ್ಚಿಸಿಕೊಳ್ಳಬೇಕೆಂದು ಕರೆ ನೀಡಿದರು. ಸದರಿ ಕಾರ್ಯಕ್ರಮದ ತಮ್ಮ ವಿದ್ಯಾ ಸಂಸ್ಥೆಯನ್ನು ಆಯ್ಕೆ ಮಾಡಿಕೊಂಡಿದ್ದಕ್ಕಾಗಿ ಕೇಂದ್ರದ ಸಿಬ್ಬಂದಿಗಳಿಗೆ ಧನ್ಯವಾದಗಳನ್ನು ಸಲ್ಲಿಸಿದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ವಿಜಯಕುಮಾರ ಕೆ, ವಿಜ್ಞಾನ ಶಿಕ್ಷಕರು, ಶಂಕ್ರಪ್ಪ ಸಕ್ರಿ ಪ್ರೌಢಶಾಲೆ, ಬಾಗಲಕೋಟೆ ರವರು ಮಾತನಾಡಿ ಶೂನ್ಯ ನೆರಳಿನ ದಿನದ ಸ್ವಾರಸ್ಯಕರ ಮಾಹಿತಿಗಳನ್ನು ವಿವರವಾಗಿ ತಿಳಿಸಿದರು. ಅದರಂತೆ, ಖಗೋಳ ವಿಜ್ಞಾನಕ್ಕೆ ಸಂಬಂಧಿಸಿದಂತೆ ವಿವಿಧ ಆಕಾಶ ಕಾಯಗಳು, ನಕ್ಷತ್ರ ಪುಂಜಗಳ ಅಧ್ಯಯನದ ಬಗ್ಗೆ ಅರ್ಥೈಹಿಸಿದರು. ಕಾರ್ಯಕ್ರಮದಲ್ಲಿ ಒಟ್ಟು ೬೪ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸೂರ್ಯನ ಚಲನೆಯನ್ನು ವಿಶೇಷ ಸೂರ್ಯ ಮಸೂರಗಳನ್ನು ಬಳಸಿಕೊಂಡು ನೋಡಲಾಯಿತು. ಮಧ್ಯಾಹ್ನ ೧೨.೨೪ ಘಂಟೆಗೆ ಸೂರ್ಯನ ಕಿರಣಗಳು ಲಂಬವಾಗಿ ಬೀಳುವ ಮೂಲಕ ಸಂಭವಿಸಿದ ಶೂನ್ಯ ನೆರಳನ್ನು ಪ್ರಾಯೋಗಿಕ ಚಟುವಟಿಕೆಯ ಮೂಲಕ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ತಿಳಿಸಿಕೊಡಲಾಯಿತು. ಕಾರ್ಯಕ್ರಮದಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಕ್ಯೂರೇಟರ್ ಈರಣ್ಣ ಬುಳ್ಳಾ, ತಾಂತ್ರಿಕ ಸಹಾಯಕ ಆಸೀಫ ಬಾಗವಾನ ಸೇರಿದಂತೆ ಇತರರು ಉಪಸ್ಥಿತರಿದ್ದರು. 

 

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪಂಚಮಸಾಲಿ ಮಠದಲ್ಲಿ ಯಾವುದೇ ಸಭೆ, ಸಮಾರಂಭ ನಡೆಸುವಂತಿಲ್ಲ; ಬಿಎನ್​​ಎಸ್ 163 ಅಡಿ ನೋಟಿಸ್​ ಜಾರಿ ಅತ್ತೆಗೆ ಚಾಕು ಇರಿದ ಅಳಿಯಸಿಗ್ನಲ್ ಗಳಲ್ಲಿ ನೆರಳು ಛಾವಣಿ: ಸಾರ್ವಜನಿಕರ ಮೆಚ್ಚುಗೆ  ಲಕ್ಷ್ಮೀ ತಾಯಿ ಫೌಂಡೇಶನ್ ವತಿಯಿಂದ ಆರ್ಥಿಕ ನೆರವುಮಹಾತ್ಮ ಗಾಂಧಿ ನರೇಗಾ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಜಿಪಂ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ ಸೂಚನೆಗರ್ಭಿಣಿಯರ ಆರೈಕೆ, ಸುರಕ್ಷೆತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಸೂಚನೆಪಂಚರಾಜ್ಯ ಫಲಿತಾಂಶ ಹಿನ್ನೆಲೆ ಸಿರುಗುಪ್ಪದಲ್ಲಿ ಬಿಜೆಪಿ ಸಂಭ್ರಮಾಚರಣೆರೈಲ್ವೆ ಹೋರಾಟಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದಿಂದ ಬೆಂಬಲಜಮಖಂಡಿಯಲ್ಲಿ ಕಾಂಗ್ರೆಸ್‌ ವಿಜಯೋತ್ಸವ; ಜನಪರ ಆಡಳಿತಕ್ಕೆ ಮನ್ನಣೆ - ಆನಂದ ನ್ಯಾಮಗೌಡಜಮಖಂಡಿಯಲ್ಲಿ ರಂಭಾಪುರಿ ಜಗದ್ಗುರುಗಳ ದಸರಾ ದರ್ಬಾರ- ಶಾಸಕ ಜಗದೀಶ ಗುಡಗುಂಟಿ