ಧಾರವಾಡ ,08 : ಧಾರವಾಡ ರಂಗಾಯಣದ ನೂತನ ನಿರ್ದೇಶಕರಾಗಿ ಝಕೀರ ನದಾಫ ನೇಮಕಗೊಂಡಿದ್ದು ಧಾರವಾಡ ರಂಗಾಯಣದ ಸುವರ್ಣ ಸಾಂಸ್ಕøತಿಕ ಸಮುಚ್ಛಯ ಸಭಾಭವನಲ್ಲಿ ಪತ್ರಿಕಾಗೋಷ್ಠಿ ಜರುಗಿಸಿ, ಮಾತನಾಡಿದರು.
ರಂಗಾಯಣದ ನಾಟಕ, ಕಲಾ ಕಾರ್ಯಕ್ರಮಗಳನ್ನು ಮತ್ತಷ್ಟು ಪ್ರಬಲವಾಗಿ ನಡೆಸಿ ಯುವ ಪ್ರತಿಭೆಗಳಿಗೆ ವೇದಿಕೆ ಒದಗಿಸುವ ಮೂಲಕ ಧಾರವಾಡದ ಸಾಂಸ್ಕøತಿಕ ಚಟುವಟಿಕೆಗಳನ್ನು ಹೆಚ್ಚಿಸಲಾಗುವುದು ಎಂದು ಅವರು ಹೇಳಿದರು.
ಧಾರವಾಡದಲ್ಲಿ ಜಿಲ್ಲಾ ಮಟ್ಟದ ಕಾಲೇಜು ರಂಗೋತ್ಸವವನ್ನು ನಡೆಸಬೇಕೆಂದು ಕೊಂಡಿದ್ದೇವೆ. ಅದೇ ರೀತಿ ರಂಗಧ್ವನಿಯನ್ನು ಮತ್ತೆ ಪ್ರಾರಂಭಿಸುವ ಉದ್ದೇಶವನ್ನು ಸಹ ಹಾಕಿಕೊಂಡಿದ್ದೇವೆ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ರಂಗಭೂಮಿಯಿಂದ ಬಹುಭಾಷಾ ನಾಟಕೋತ್ಸವಗಳನ್ನು ಕೂಡ ಆಯೋಜಿಸುವ ಯೋಜನೆಗಳಿವೆ. ಜನರು ಹೇಗೆ ಸಿನಿಮಾಗಳಿಗೆ ಪ್ರೋತ್ಸಾಹ, ಬೆಂಬಲಗಳನ್ನು ಸೂಚಿಸುತ್ತಾರೆಯೋ ಅದೇ ರೀತಿ ನಾಟಕ ಮತ್ತು ರಂಗಭೂಮಿಗೆ ಜನರು ಪ್ರೋತ್ಸಾಹವನ್ನು ನೀಡಿದರೆ, ರಂಗಭೂಮಿಯನ್ನು ಮತ್ತಷ್ಟು ಉತ್ತುಂಗ ಮಟ್ಟಕ್ಕೆ ತೆಗೆದುಕೊಂಡು ಹೋಗುವುದಕ್ಕೆ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ರಂಗಾಯಣದ ಆಡಳಿತಾಧಿಕಾರಿ ಶಶಿಕಲಾ ಹುಡೇದ ಅವರು ಉಪಸ್ಥಿತರಿದ್ದರು.