Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಯುವಜನೋತ್ಸವ ಭವಿಷ್ಯದ ಮೈಲಿಗಲ್ಲಾಗಬೇಕು - ಡಾ. ಎಚ್. ಕೆ. ಪಾಟೀಲ

ಸನ್ಮಾರ್ಗ ಪದವಿ ಪೂರ್ವ ಕಾಲೇಜ ಹಾಗೂ ಲಾಯನ್ಸ ಶಿಕ್ಷಣ ಸಂಸ್ಥೆ ಸಂಯೋಗದಲ್ಲಿ ಗದಗ ಜಿಲ್ಲಾ ಮಟ್ಟದ ಯುವಜನೋತ್ಸವ

ಗದಗ: ಯುವ ಜನಾಂಗಕ್ಕೆ ಯುವಜನೋತ್ಸವ ಕೇವಲ ಮೋಜು ಮಸ್ತಿಗಾಗಿ ಮಾತ್ರವಲ್ಲ, ಅದು ಅವರ ಉಜ್ವಲ ಭವಿಷ್ಯದ ಸೂಚಕ ಹಾಗೂ ಜೀವನ ಮೌಲ್ಯಗಳಿಗೆ ದಾರಿ ದೀಪವಾಗಬಲ್ಲದು ಎಂಬುದನ್ನು ಸಮಕಾಲೀನ ಯುವಪೀಳಿಗೆ ಅರ್ಥೈಸಿಕೊಂಡಾಗ ಈ ಯುವಜನೋತ್ಸವಕ್ಕೆ ಒಂದು ಸಾರ್ಥಕ್ಯ ಬರಲು ಸಾಧ್ಯ ಎಂದು, ಮಾನ್ಯ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಡಾ.ಎಚ್.ಕೆ.ಪಾಟೀಲ ಅಭಿಪ್ರಾಯಪಟ್ಟರು.

ಕರ್ನಾಟಕ ಸರ್ಕಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಗದಗ, ನಿಮ್ಹಾನ್ಸ್, ಬೆಂಗಳೂರು, ನೆಹರು ಯುವ ಕೇಂದ್ರ, ಗದಗ. ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ, ಗದಗ, ಲಾಯನ್ಸ್ ಶಿಕ್ಷಣ ಸಂಸ್ಥೆ, ಗದಗ. ಸನ್ಮಾರ್ಗ ಪದವಿ ಪೂರ್ವ ಮಹಾವಿದ್ಯಾಲಯ, ಗದಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ೨೦೨೫ನೇ ಸಾಲಿನ ಯುವಜನೋತ್ಸವವನ್ನು ಸಸಿಗೆ ನೀರುಣಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಸಚಿವರು ಜಿಲ್ಲೆಯಲ್ಲಿ ಯುವಕ ಮಂಡಳಗಳ ಸಂಖ್ಯೆಯನ್ನು ಹೆಚ್ಚಿಸುವ, ಹಾಗೆಯೇ ಅವುಗಳ ಮೂಲಕ ರಚನಾತ್ಮಕ ಚಟುವಟಿಕೆಗಳನ್ನು ಮಾಡುವ ಉದ್ದೇಶ ತಮಗಿದೆ ಎಂದೂ, ಅದನ್ನು ಸಾರ್ಥಕಪಡಿಸುವಲ್ಲಿ ಯುವಜನ ಸಬಲೀಕರಣ ಇಲಾಖೆ ಪ್ರಯತ್ನ ಮಾಡಲಿ ಎಂದು ಆಶಿಸಿದರು. ಹಾಗೆಯೇ ಭವ್ಯ ಭಾರತವನ್ನು ರೂಪಿಸುವ ಯುವಜನಾಂಗ ಮಾದಕ ವಸ್ತುಗಳತ್ತ ಆಕರ್ಷಿತರಾಗದೇ ಸನ್ಮಾರ್ಗದಲ್ಲಿ ನಡೆದಾಗ ಅವರ ಉಜ್ವಲ ಭವಿಷ್ಯ ಹಾಗೂ ರಾಷ್ಟ್ರದ ಉತ್ಥಾನ ಸುಲಭ ಸಾಧ್ಯ ಎನ್ನುವ ತಮ್ಮ ಅಭಿಪ್ರಾಯಕ್ಕೆ ಸಾಕಷ್ಟು ಅಂಕಿ ಅಂಶಗಳನ್ನು ನೀಡುವ ಮೂಲಕ ಯುವಜನರ ಮನವನ್ನು ಪರಿವರ್ತಿಸುವ ಸಫಲ ಪ್ರಯತ್ನಗೈದರು. ಜೊತೆಗೆ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಸ್ಫರ್ಧಾಳುಗಳು ತಮ್ಮ ತಮ್ಮ ವಿಭಾಗಗಳಲ್ಲಿ ಯಶಸ್ಸನ್ನು ಪಡೆಯಲಿ ಎಂದು ಹಾರೈಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ ರವಿಕಾಂತ ಅಂಗಡಿ, ಜಿಲ್ಲಾಧ್ಯಕ್ಷರು, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ, ಗದಗ ಇವರು ಯುವ ಕಲಾವಿದರಿಗೆ ಸೂಕ್ತ ಗೌರವ ಪ್ರಶಸ್ತಿಗಳನ್ನು ದೊರಕಿಸಿ ಕೊಡುವಲ್ಲಿ ಸಚಿವರ ಸಹಾಯವನ್ನು ಆಪೇಕ್ಷಿಸುವುದರ ಜೊತೆಗೆ ಸಚಿವರ ಮಾರ್ಗದರ್ಶನ, ನಮ್ಮ ಸಮಾರಂಭಕ್ಕೆ ಅತ್ಯಂತ ಅಗತ್ಯ, ಆ ರೀತಿಯ ಸಹಾಯ, ಸಹಕಾರ ಯಾವತ್ತೂ ಇರಲಿ ಎಂದು ಆಶಿಸಿದರು.

ಶ್ರೀ ಅಕ್ಬರಸಾಬ ಬಬರ್ಚಿ. ಮಾನ್ಯ ಅಧ್ಯಕ್ಷರು, ನಗರಾಭಿವೃದ್ಧಿ ಪ್ರಾಧಿಕಾರ, ಗದಗ-ಬೆಟಗೇರಿ. ಶ್ರೀ ಬಿ. ಬಿ. ಅಸೂಟಿ, ಮಾನ್ಯ ಅಧ್ಯಕ್ಷರು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ, ಗದಗ. ಶ್ರೀ ಡಾ. ಜೆ.ಸಿ ಶಿರೋಳ, ಕಾರ್ಯದರ್ಶಿಗಳು, ಲಾಯನ್ಸ್ ಶಿಕ್ಷಣ ಸಂಸ್ಥೆ, ಗದಗ. ಶ್ರೀ ರವಿಕಾಂತ ಅಂಗಡಿ, ಜಿಲ್ಲಾಧ್ಯಕ್ಷರು, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ, ಗದಗ. ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.

ಶ್ರೀ ಮಹಮ್ಮದಶಫೀ ಯರಗುಡಿ ಕಾರ್ಯಕ್ರಮವನ್ನು ನಿರೂಪಿಸಿದರೆ ಡಾ. ಶರಣು ಗೋಗೇರಿ ಸ್ವಾಗತಿಸಿದರು. ಪ್ರೊ. ಹೇಮಂತ ದಳವಾಯಿ ಸರ್ವರನ್ನು ವಂದಿಸಿದರು. ವೇದಿಕೆಯ ಮೇಲೆ ಉಪಸ್ಥಿತರಿದ್ದ ಸ್ಟುಡೆಂಟ್ ಏಜ್ಯುಕೇಶನ್ ಸೊಸೈಟಿಯ ಅಧ್ಯಕ್ಷರಾದ ಶ್ರೀ ರಾಜೇಶ ಕುಲಕರ್ಣಿ, ಆಡಳಿತಾಧಿಕಾರಿಯಾದ ಶ್ರೀ ಎಮ್. ಸಿ. ಹಿರೇಮಠ. ಹಾಗೂ ಪ್ರಾಚಾರ್ಯರಾದ ಶ್ರೀ ಪ್ರೇಮಾನಂದ ರೋಣದ ಹಾಗೂ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಸಯ್ಯದ ಮತೀನ್ ಮುಲ್ಲಾ, ಶ್ರೀ ರೋಹಿತ ಒಡೆಯರ, ಶ್ರೀ ರಾಹುಲ್ ಒಡೆಯರ, ಶ್ರೀ ಪುನೀತ ದೇಶಪಾಂಡೆ. ಮತ್ತು ಲಾಯನ್ಸ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಯಾದ ಶ್ರೀಮತಿ ಜಿ.ಬಿ. ಬೇವಿನಕಟ್ಟಿ, ಲಾಯನ್ಸ ಕ್ಲಬ್ ಅಧ್ಯಕ್ಷರಾದ ಶ್ರೀ ರಾಜು ವೆರ್ಣೆಕರ, ಹಾಗೂ ಲಾಯನ್ಸ ಕ್ಲಬ್ ಖಜಾಂಚಿಯವರಾದ ಶ್ರೀ ರೇಣಕಾಪ್ರಸಾದ ಹಿರೇಮಠ.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ