Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಭಾರತ ವಿಜಯಶಾಲಿಯಾಗಲಿ ; ಯೋಧರಿಗೆ ಒಳಿತಾಗಲಿ: ದೆವರಲ್ಲಿ ವಿಶೇಷ ಪೂಜೆ



ಜಗತ್ತಿಗೆ ಇಂದು ಭಾರತದ ಶಕ್ತಿ ಸಾಮರ್ಥ್ಯದ ಅರಿವು : ಡಾ.ವೀರಣ್ಣ ಚರಂತಿಮಠ 

ಬಾಗಲಕೊಟೆ: ದೇಶದ ಸಮರ್ಥ ನಾಯಕ ಹಾಗೂ ಸಮರ್ಥ ಸೈನಿಕರಿಂದ ಅಪರೇಷನ್ ಸಿಂಧೂರ್ ಮೂಲಕ ಜಗತ್ತಿಗೆ ಭಾರತದ ಶಕ್ತಿ ಸಾಮರ್ಥ್ಯ ಗೋತ್ತಾಗಿದೆ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.

ಅವರು ಭಾರತೀಯ ಜನತಾ ಪಕ್ಷ ನಗರ ಮಂಡಳವತಿಯಿಂದ ಶ್ರೀ ಕಣವಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ಪಾಕ್ ವಿರುದ್ದ ಯುದ್ದದಲ್ಲಿ ಭಾರತ ಜಯಶಾಲಿಯಾಗಲಿ, ದೇಶದ ವೀರ ಯೋಧರಿಗೆ ಶಕ್ತಿ ತುಂಬಿ ಆತ್ಮಸ್ಥೈರ್ಯ ಬಲಗೊಳ್ಳಲಿ, ಯೋಧರಿಗೆ ಹಾಗೂ ಯೋಧರ ಕುಟುಂಬಕ್ಕೂ ದೇವರ ಅನುಗ್ರಹ ಇರಲೆಂದು ವೀರಭದ್ರೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿ ಮಾತನಾಡಿದರು.

ಸುಮಾರು ೭೫ ವರ್ಷಗಳಿಂದ ಈ ಮಗ್ಗಲ ಮುಳ್ಳು ಪಾಕಿಸ್ತಾನ ಒಂದಿಲ್ಲಾ ಒಂದು ಕಾರಣದಿಂದ ಭಾರತ ತಂಟೆಗೆ ಬರುತ್ತಿತ್ತು, ಆದರೆ ಇವತ್ತು ಸತ್ತ ಹಾವು ಆದಂಗ ಆಗಿದೆ, ಅದು ಒಂದು ದೇಶ ಎಂಬ ಭಾವನೆನೆ ಇಲ್ಲದಾಗಿದೆ, ಆದರೆ ಭಾರತದ ನೇತೃತ್ವ ಬಹಳ ಸದೃಡವಾಗಿದೆ, ಪ್ರಧಾನ ಮಂತ್ರಿಗಳು ಅತಿ ಸೂಕ್ಷಾತ್ಮಿ ಸೂಕ್ಷ್ಮ ವಿಚಾರಗಳನ್ನು ತೆಗೆದುಕೋಂಡು, ಎಲ್ಲ ರೀತಿ ದಾಳಿಯನ್ನು ಭಾರತ ಮಾಡಿದೆ, ಪಾಕಿಸ್ತಾನದ ೧೫ ಪ್ರಮುಖ ನಗರ ಮೇಲೆ ದಾಳಿ ಮಾಡಿ ಅವರ ಉತ್ತರಕ್ಕೆ ತಕ್ಕ ಪತ್ಯುತ್ತರ ಕೋಡುವಲ್ಲಿ ಭಾರತ ಯಶಸ್ವಿಯಾಗಿದೆ, ಈ ಭಾರಿ ಮಾತ್ರ ಪಾಕಿಸ್ತಾನ ಛಿದ್ರ ಛಿದ್ರವಾಗುವಲ್ಲಿ ಎರಡು ಮಾತಿಲ್ಲಾ, ಪಾಕಿಸ್ತಾನದ ಹುಟ್ಟನ್ನು ಅಡಗಿಸುವಲ್ಲಿ ಯಾವುದೆ ಸಂಶಯವಿಲ್ಲ, ಪ್ರಧಾನ ಮಂತ್ರಿಗಳು, ಗೃಹ ಸಚಿವರು, ರಕ್ಷಾ ಮಂತ್ರಿಗಳು, ಮೂರು ಸೇನಾ ಮುಖ್ಯಸ್ಥರು ಕೂಡಿಕೊಂಡು ಎಲ್ಲರೂ ವಾರ್ ರೂಮ್ ನಲ್ಲಿ ಕುಳಿತು ಸತತ ಮಾನೆಟ್ರಿಂಗ್ ಮಾಡತಿದ್ದರು, ಮಿಸಲೆಗಳನ್ನು ಆಕಾಶದಲ್ಲಿಯೇ ಹೊಡೆದಾಕಿದರು, ಯಾರಿಗೂ ಕೂಡಾ ಹಾನಿಯಾಗದಂತೆ ಜಾಗೃತವಹಿಸಿದ್ದರು, ಅತ್ಯಾಧುನಿಕ ತರಬೇತಿಯನ್ನು ನಮ್ಮ ಸೈನಿಕರು ಹೊಂದಿದ್ದಾರೆ, ವಿಶ್ವಕ್ಕೆ ಭಾರತದ ತಾಕತ್ತು ಗೊತ್ತಾಗಿದೆ, ಒಬ್ಬ ಸದೃಡ ಪ್ರಧಾನಿಯಿದ್ದರೆ ದೇಶ ಯಶಸ್ವಿಯಾಗಿ ನಡೆಯುತ್ತದೆ ಎಂಬುದಕ್ಕೆ ಇದು ಉದಾರಣೆಯಾಗಿದೆ ಎಂದರು.

ರಾಜ್ಯ ಸಭಾ ಸದಸ್ಯ ನಾರಾಯಣಸಾ ಭಾಂಡಗೆ ಮಾತನಾಡಿ ಪಾಕಿಸ್ತಾನದ ಜೋತೆ ಇದು ಭಾರತದ ಕೋನೆ ಯುದ್ದವಾಗಿದೆ, ಜಗತ್ತಿನ ನಕಾಶದಿಂದಲೆ ಪಾಕಿಸ್ತಾನವನ್ನು ಕಿತ್ತುಹಾಕುವ ಸಂಕಲ್ಪ ಮಾಡಿದ್ದಾರೆ, ನಮ್ಮ ಸೈನೀಕರ ಎಷ್ಟು ಪ್ರಶಂಶೆ ಮಾಡಿದರು ಕಡಿಮೆ, ಯಾವುದೆ ನಾಗರಿಕರನ್ನು ಹೊಡಿಯದೆ ಬರಿ ಉಗ್ರ ಹಾಗೂ ಉಗ್ರರ ಕ್ಯಾಂಪಗಳ ಮೇಲೆ ದಾಳಿ ಮಾಡಿದ್ದು ಇಡಿ ಜಗತ್ತೆ ಮೆಚ್ಚಿಕೊಳ್ಳುತ್ತಿದೆ, ಜಗತ್ತು ಭಾರತದ ಜೋತಗೆ ಇದೆ, ಜೋತಗೆ ಭಾರತದೊಳಗಿನ ಅನೇಕ ದೇಶದ್ರೋಹಿಗಳ ವಿರುದ್ದವವು ಹೋರಾಡಬೇಕಿದೆ, ಬರುವಂತ ದಿನಗಲ್ಲಿ ಉಗ್ರಗಾಮಿ ಎಂಬ ಪದವೆ ನಿರ್ನಾಮವಾಗುತ್ತದೆ ಎಂದರು.

ಮುಖಂಡರಾದ ಜಿ.ಎನ್. ಪಾಟೀಲ. ಡಾ.ಎಂ.ಎಸ್.ದಡ್ಡೆನ್ವರ, ಬಸವರಾಜ ಹುನಗುಂದ, ಉಮೇಶ ಹಂಚಿನಾಳ.ಶ್ರೀಧರ ನಾಗರಬೇಟ್ಟ, ರಾಜು ನಾಯ್ಕರ, ನಗರಸಭೇ ಅಧ್ಯಕ್ಷೆ ಸವಿತಾ ಲಂಕೆನ್ನವರ, ಯಲಪ್ಪ ನಾರಾಯಣಿ, ಭಾಗೀರತಿ ಪಾಟೀಲ, ಭುವನೇಶ್ವರಿ ಕುಪ್ಪಸ್ತ, ಲಕ್ಷ್ಮೀ ನಾರಯಣ ಕಾಸಟ, ಬಸವರಾಜ ಯಂಕಂಚಿ, ಸಂಗಣ್ಣ ಶಿರೂರ, ಮಲ್ಲಿಕಾರ್ಜುನ ಮಠ, ಸಂಗಪ್ಪ ಕುಪ್ಪಸ್ತ, ಪರಮೇಶ್ವರ ಮದೂರ, ಕಲ್ಲಪ್ಪ ಭಗವತಿ, ಕ್ಯಾಪ್ಟನ್ ಅರ್ಜುನ ಕೋರಿ, ರಾಜು ದಂಡಿಗಿ, ಮಾನೆಶ ಅಂಬಿಗೇರ, ನೀಲಪ್ಪ ಬೇವೂರ, ಶಂಕರ ತೇಲಕರ, ಶಂಕರ ಅರಷಿಣಗುಡಿ, ಶ್ರೀಶೈಲ ಗಾಣಿಗೇರ, ಅಂಬಾಜಿ ಜೋಷಿ, ಚೆನ್ನಯ್ಯ ಹಿರೇಮಠ, ದ್ಯಾವಪ್ಪ ರಾಕುಂಪಿ, ರೇಖಾ ಕಲಬುರಗಿ, ಸುಜಾರ ಮಜ್ಜಗಿ, ಪ್ರೇಮಾ ಅಂಬಿಗೇರ, ಅನಿತಾ ಸರೋಧೆ, ಮುತ್ತಣ್ಣ ಕುರಬರ, ಚಂದ್ರಕಾಂತ ಖಾತೆದಾರ, ಚಂದ್ರು ರಾಮವಡಗಿ, ಅಶೋಕ ಪವಾರ, ನಾಗರಾಜ ನಾರಾಯಣಕರ, ರವಿ ನಾಯಕ್, ದೂಳಪ್ಪ ಕೊಪ್ಪದ,ಆನಂದ ಕೋಟಗಿಸೇರಿದಂತೆ ಅನೇಕರು ಇದ್ದರು.

ಪೋಟೋ ೦೧ -೦೨ ಶ್ರೀ ಕಣವಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ಪಾಕ್ ವಿರುದ್ದ ಯುದ್ದದಲ್ಲಿ ಭಾರತ ಜಯಶಾಲಿಯಾಗಲಿ, ದೇಶದ ವೀರ ಯೋಧರಿಗೆ ಶಕ್ತಿ ತುಂಬಿ ಆತ್ಮಸ್ಥೈರ್ಯ ಬಲಗೊಳ್ಳಲಿ, ಯೋಧರಿಗೆ ಹಾಗೂ ಯೋಧರ ಕುಟುಂಬಕ್ಕೂ ದೇವರ ಅನುಗ್ರಹ ಇರಲೆಂದು ವೀರಭದ್ರೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಲಾಯಿತು.

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ