ಭಾನುವಾರ ಪಟ್ಟಣದ ಚಿಂಚಲಿ ರಸ್ತೆಯಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ನೂತನ ಕಟ್ಟಡದ ಭೂಮಿ ಪೂಜೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಮನುಷ್ಯನಿಗೆ ಬರುವ ಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು. ಆಧುನಿಕ ತಂತ್ರಜ್ಞಾನ ಇಂದಿನ ಯುಗದಲ್ಲಿ ಎಲ್ಲರೂ ಒತ್ತಡ ಜೀವನ ನಡೆಸುತ್ತಿದ್ದು, ಇದರಿಂದ ಮುಕ್ತರಾಗಲು ಬ್ರಹ್ಮಕುಮಾರಿಸ್ ಅಂತಹ ಧ್ಯಾನ ಕೇಂದ್ರಗಳು ಹೆಚ್ಚಾಗಬೇಕು ಎಂದರು.
ಬಿಕೆ ಅಂಬಿಕಾ ಅಕ್ಕನವರು ಮಾತನಾಡಿ, ಭವಬಂಧನದಿಂದ ಮುಕ್ತಗೊಳಿಸುವ ಪರಮಾತ್ಮನ ಮನೆಯನ್ನು ರಾಯಬಾಗ ಪಟ್ಟಣದಲ್ಲಿ ಕಟ್ಟಡ ಕಟ್ಟುತ್ತಿರುವುದು ಸಂತೋಷದ ವಿಷಯ. ಪ್ರತಿಯೊಬ್ಬರು ಧ್ಯಾನ ಮಾಡಿಕೊಂಡು ನಮ್ಮ ಜೀವನ ಶ್ರೇಷ್ಠ ಮಾಡಿಕೊಳ್ಳಬೇಕೆಂದು ಹೇಳಿದರು.
ಬ್ರಹ್ಮಕುಮಾರೀಸ್ ನೂತನ ಕಟ್ಟಡ ನಿರ್ಮಾಣ ಭೂಮಿ ಪೂಜೆ ಕಾರ್ಯಕ್ರಮಕ್ಕೆ ವಿಧಾನ ಪರಿಷತ್ತ ಮಾಜಿ ಸದಸ್ಯ ವಿವೇಕರಾವ ಪಾಟೀಲ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಅಶೋಕ ಅಂಗಡಿ, ರಾಯಬಾಗ ಕೇಂದ್ರದ ಬಿಕೆ ಪುಷ್ಪಾ, ಬಿಕೆ ಮೀರಾ, ಬಿಕೆ ಸುವರ್ಣಾ, ಬಿಕೆ ಸುಮಂಗಲಾ, ಶಶಿಕಾಂತ ಕುಲಗುಡೆ, ಬಿ.ಎಮ್.ಮಾಳಿ, ಎ.ಬಿ.ಮಂಗಸೂಳೆ, ಧರೆಪ್ಪ ಮಿರ್ಜೆ, ಎಚ್.ಎ.ಭಜಂತ್ರಿ, ಅಪ್ಪಾಸಾಹೇಬ ಮುಗಳಖೋಡ, ಲಗಮಣ್ಣ ಪಾಟೀಲ ಸೇರಿ ಅನೇಕರು ಇದ್ದರು.