Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಯುವಕರು ದುಶ್ಚಟಗಳಿಂದ ದೂರ ಇರಿ:ಸಿಪಿಐ ಮಠಪತಿ 

ಬೈಲಹೊಂಗಲ: ಯವಕರು ದುಷ್ಟರಿಂದ ದೂರವಿದ್ದು ಕಾನೂನುಗಳನ್ನು ಪಾಲಿಸಿ ಹಿರಿಯರಿಗೆ ಗೌರವ ನೀಡಿ ಒಳ್ಳೆಯ ವಿದ್ಯಾಭ್ಯಾಸ ಮಾಡಿದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಮುರಗೋಡ ಠಾಣೆಯ‌ ಸಿಪಿಅಯ್  ಆಯ್.ಎಮ್.ಮಠಪತಿ ಯುವಕರಿಗೆ ತಿಳಿ ಹೇಳಿದರು.

 ಸಮೀಪದ ಹೊಸೂರ ಗ್ರಾಮದ ಡಾ. ಅಂಬೇಡ್ಕರ್ ದಲಿತ ಕಾಲೋನಿಯಲ್ಲಿ ನಡೆದ ಎಸ್ಸಿ.ಎಸ್ಟಿ ಕುಂದುಕೊರತೆ ಸಭೆಯಲ್ಲಿ ಮಾತನಾಡಿ, ಇಂದಿನ ಯುವಕರು ಮೋಜು ಮಸ್ತಿಗಾಗಿ ಕಾಲೇಜುಗಳಿಗೆ ಬೈಕ್ ಮೇಲೆ ಹೆಲ್ಮೇಟ್ ಇಲ್ಲದೆ ತೆರಳುವದು ಗುಂಪುಗಾರಿಕೆ, ಪುಂಡರ ಹಾಗೂ ಮಾದಕ ವ್ಯಸನಿಗಳ ಗೆಳೆತನ ಬೇಳೆಸಿಕೊಂಡು ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿರುವದು ರಸ್ತೆಯ ಅಪಘಾತಗಳಲ್ಲಿ ಪ್ರಾಣ ಹಾನಿ, ಅಂಗಾಗಗಳ ಊನ ಮಾಡಿಕೊಂಡು ಸಮಾಜದಲ್ಲಿ ಒಳ್ಳೆಯ ಪ್ರಜೆಗಳಾಗಿ ಸ್ಮಾರಕವಾಗದೆ ಮಾರಕವಾಗುತ್ತಿರುವದು ಕಳವಳಕಾರಿಯಾಗಿದೆ. ಮಕ್ಕಳನ್ನು ಶಾಲೆ ಕಾಲೇಜುಗಳಿಗೆ ಕಳಿಸುವದಷ್ಟೆ ಪಾಲಕರ ಕಾರ್ಯವಾಗದೆ ಅವರ ಮೇಲೆ‌ನಿಗಾ ಇಟ್ಟು ಅವರ ಚಲನವಲನಗಳನ್ನು ಗಮನಿಸಿ ಅವರಿಗೆ ಪಾಲಕರು ಮಾರ್ಗದರ್ಶನ ಮಾಡಬೇಕು ಇಲ್ಲವಾದರೆ ಪ್ರತಿನಿತ್ಯ ಠಾಣೆಗೆ ಬರುವ ಪ್ರಕರಣಗಳಲ್ಲಿ ತಂದೆ ತಾಯಿಯರನ್ನು ಹೊರಹಾಕಿ ಅವರ ವೃದ್ದಾಪ‌ ಜೀವನದಲ್ಲಿ ಮುಳ್ಳಾಗುತಿದ್ದಾರೆ ಅಲ್ಲದೆ ಸಮಾಜಘಾತುಕ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವದು ಹೆಚ್ಚಾಗುತ್ತಿದೆ ಎಂದರು.

  ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ ಮಾತನಾಡಿ, ಸರ್ಕಾರ ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಅತಿ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡುತಿದ್ದು ಆರ್ಥಿಕ ಸಾಹಯ ಪಡೆದುಕೊಂಡು ತಮ್ಮ ಭವಿಷ್ಯ ಕಟ್ಟಿಕೊಳ್ಳಬೇಕು. ಯಾವ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಶಿಕ್ಷಣವೇ ಸರ್ವ ಸಮಸ್ಯೆಗಳಿಗೆ ಪರಿಹಾರವಾಗಬಲ್ಲದು. ಎಸ್.ಎಸ್.ಎಲ್.ಸಿ. ಪಿಯುಸಿ, ಪದವಿ ಪೂರೈಸಿದ ವಿದ್ಯಾರ್ಥಿಗಳು ತಮ್ಮ ಉನ್ನತ ಶಿಕ್ಷಣದಡಿಗೆ ಗಮನ ಹರಿಸಬೇಕು. ಆದೂ ಸಾಧ್ಯವಾಗದೆ ಇದ್ದಲ್ಲಿ ಸ್ವ ಉದ್ಯೋಗ ಕೈಗೊಳ್ಳಲು ತರಬೇತಿ ಪಡೆದು ಸರ್ಕಾರದ ಸಾಹಯಧನದಲ್ಲಿ ಉದ್ಯಮಿಗಳಾಗಿ ಇತರರಿಗೆ ಉದ್ಯೋಗ ನಿಡುವತ್ತ ಗಮನ ಹರಿಸಬೇಕೆಂದರು.

ಈ ಸಂದರ್ಭದಲ್ಲಿ ದಲಿತ ಕಾಲೋನಿಯ ಜನತೆ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಅವುಗಳಿಗೆ ಪರಿಹಾರ ಕಂಡುಕೊಂಡರು.

ಫುಂಡಲಿಕ ಇಂಗಳಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮುಖ್ಯಮಂತ್ರಿ ಪ್ರಶಸ್ತಿ ವಿಜೇತ ಸಿಪಿಆಯ್ ಆಯ್.ಎಮ್. ಮಠಪತಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿ ಮಧುಮತಿ ಜುಮೇತ್ರಿ ಅವರನ್ನು ಸತ್ಕರಿಸಲಾಯಿತು.

ಕಾರ್ಯಕ್ರಮದಲ್ಲಿ ಪೋಲಿಸ್ ಸಿಬ್ಬಂದಿಗಳಾದ

ಎಫ್.ಎಮ್.ಮದ್ಲಿ, ಸುರೇಶ ಹುಂಬಿ, ಗ್ರಾಪಂ ಉಪಾಧ್ಯಕ್ಷ ಬಸವರಾಜ ಪೆಂಟೇದ, ಗ್ರಾಪಂ ಸದಸ್ಯರಾದ ಅಪ್ಪು ಈಳಿಗೇರ, ಮುಶೆಪ್ಪ ಜಡಿ, ಬಸವ್ವ ಗಾಣಿಗೇರ,  ಜಯಶ್ರೀ ಇಂಗಳಗಿ, ಮಡಿವಾಳಪ್ಪ ಕಮತಗಿ, ಮಲ್ಲಿಕಾರ್ಜುನ ಕರಡಿಗುದ್ದಿ,  ಸಂಜು ಪಾಟೀಲ, ಸುರೇಶ ಬಾಳೆಕುಂದರಗಿ ವೇದಿಕೆ ಮೇಲಿದ್ದರು.

ಕಾರ್ಯಕ್ರಮದಲ್ಲಿ ನ್ಯಾಯವಾದಿ ಸಂಜು ಜುಮೇತ್ರಿ,  ಅಕ್ಷಯ ಗಡ್ಡಿ, ಹಣಮಂತ ಮಲಮೇತ್ರಿ, ಶಂಕರ ಹಿರುನವರ, ಶೋಭಾ ಮಲಮೇತ್ರಿ, ಸುಧಾ ಹಿರುನವರ, ಮನಿಕಂಠ ಮಲಮೇತ್ರಿ ರಾಮಪ್ಪ ಹಿರೂನವರ, ಶಿವಪ್ಪ ಹಿರೂನವರ, ಸುನಂದಾ ಗಡ್ಡಿ  ಸೇರಿದಂತೆ ಇನ್ನಿತರು ಇದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ