Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನೀವು ಡಿಜೇಬಲ್ ಅಲ್ಲ, ಡಿಫ್ರೆಂಟ್ಲಿ ಏಬಲ್ ಪರ್ಸನ್ಸ್: ಎಸ್ ಪಿ ಶೋಭ ರಾಣಿ 

ಬಳ್ಳಾರಿ ಆ 12 : ನಿಮ್ಮನ್ನು ಡಿಸೇಬಲ್ ಪರ್ಸನ್ಸ್ ಎಂದು ಕರೆಯಲು ನನಗೆ ಮನಸ್ಸಿಲ್ಲ ನೀವು ಡಿಫ್ರೆಂಟ್ಲಿ ಏಬಲ್ಡ್ ಪರ್ಸನ್ ಆಗಿದ್ದೀರಿ ನಿಮಗೆ ವಿಶೇಷವಾದ ಜ್ಞಾನ ಮತ್ತು ಶಕ್ತಿ ಇದೆ ಅದನ್ನು ಬಳಸಿಕೊಂಡು ಸಮಾಜದಲ್ಲಿ ಗುರುತಿಸಿಕೊಳ್ಳಬೇಕು, ಸಮರ್ಥನಂ ಅಂಗವಿಕಲರ ಕಲ್ಯಾಣ ಸಂಸ್ಥೆ ವತಿಯಿಂದ ಇಂದು ತಾವು ಪಡೆದಂತ ಸಾಧನ ಸಲಕರಣೆಗಳನ್ನು ಉಪಯೋಗಿಸಿಕೊಂಡು ತಮ್ಮ ಜೀವನದಲ್ಲಿ ಏನನ್ನಾದರೂ ಸಾಧಿಸಲು ಪ್ರಯತ್ನಿಸಬೇಕೆಂದು ಬಳ್ಳಾರಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶೋಭಾ ರಾಣಿ ವಿ. ಜೆ  ಕಿವಿಮಾತು ಹೇಳಿದರು.


 ಅವರು ನಗರದ ರಾಕ್ ಗಾರ್ಡನ್ ಹೋಟೆಲ್ ಸಭಾಂಗಣದಲ್ಲಿ ಸಮರ್ಥನಮ್ ಅಂಗವಿಕಲರ ಕಲ್ಯಾಣ ಸಂಸ್ಥೆ ವತಿ ಮತ್ತು ಮೆಡ್ರಿಚ್ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ   ವಿಕಲಚೇತನರ ಸಾಧನ ಸಲಕರಣೆಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.


 ಜಿಲ್ಲಾ ಪಂಚಾಯತ್ ಸಿಇಓ ಮೊಹಮ್ಮದ್ ಹ್ಯಾರಿಸ್ ಮಾತನಾಡಿ, ಎಸ್ಪಿ ಮೇಡಂ ತಿಳಿಸಿದಂತೆ , ನೀವು ಅಶಕ್ತರಲ್ಲ ನಿಮ್ಮ ಪ್ರತಿಯೊಬ್ಬರಲ್ಲಿ ವಿಶೇಷವಾದ ಶಕ್ತಿ ಇದೆ, ನಿಮಗೆ ಯಾರದೇ ಅನುಕಂಪ ಬೇಕಿಲ್ಲ ಅವಕಾಶ ಸಿಕ್ಕಲ್ಲಿ ನಿಮ್ಮ ಜೀವನವನ್ನು ನೀವೇ ರೂಪಿಸಿಕೊಳ್ಳಲು ಮಾನಸಿಕವಾಗಿ ಗಟ್ಟಿಯಾಗಿದ್ದು ಶಕ್ತರಾಗಿದ್ದೀರಿ, ಎಷ್ಟೋ ಜನ ದೈಹಿಕವಾಗಿ ಸಬಲರಿದ್ದರೂ ಸಹ ಸೋಮಾರಿಗಳಾಗಿ ಕಾಲ ಹರಣ ಮಾಡುತ್ತಿದ್ದಾರೆ ಅಂತವರಿಗೆ ನೀವು ಮಾದರಿ ಎಂದು ಅಭಿಪ್ರಾಯಪಟ್ಟರು.


 ಈ ಸಂದರ್ಭದಲ್ಲಿ ಪೋಲಾ ರಾಧಾಕೃಷ್ಣ, ನಿತೀಶ್ ಕಟಾರಿಯ ಸಂಗೀತ್ ಶರ್ಮಾ ರೇಣುಕಾದೇವಿ ಕಟಾರಿಯ ಗೌತಮಿ ವಿಶೇಷ ಚೇತನರ ಕಲ್ಯಾಣ ಅಧಿಕಾರಿ  ಗೋವಿಂದಪ್ಪ ಸೇರಿದಂತೆ ಇತರರಿದ್ದರು.

 ಈ ಸಂದರ್ಭದಲ್ಲಿ ಶಿವರಾಮ ದೇಶಪಾಂಡೆ ಪ್ರಸ್ತಾವಿಕ ಮಾತುಗಳು ನಾಡಿದರು. ಪೊಲೀಸ್ ಅಧೀಕ್ಷಕರು ಸಾಂಕೇತಿಕವಾಗಿ ಕೆಲವರಿಗೆ ಸಾಧನ ಸಲಕರಣೆಗಳನ್ನು ವಿತರಿಸಿದರು. ಪ್ರೇಮಕುಮಾರಿ ಪ್ರಾರ್ಥಿಸಿದರೆ, ಗೌತಮಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ನೂರಾರು ವಿಕಲಚೇತನರಿಗೆ ಕ್ಯಾಲಿಪರ್ಸ್ ವೀಲ್ ಚೇರ್, ಊರುಗೋಲು ಕುರ್ಚಿ ಸೇರಿದಂತೆ ವಿವಿಧ ಸಾಧನ ಸಲಕರಣೆಗಳನ್ನು ಸಮರ್ಥನಂ ವಿಕಲಚೇತನರ ಕಲ್ಯಾಣ ಸಂಸ್ಥೆ ವತಿಯಿಂದ ವಿತರಿಸಲಾಯಿತು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ