Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಆರೋಗ್ಯವಂತ ಸಮಾಜಕ್ಕಾಗಿ ಯೋಗ, ಪ್ರಾಣಾಯಾಮ, ಧ್ಯಾನ ಶಿಬಿರದ ಉದ್ದೇಶ : ಶಾಸಕ ಲಕ್ಷ್ಮಣ ಸವದಿ

ಅಥಣಿ,ಜೂ,೧೯: ತಾಲೂಕಾ ಆಡಳಿತ, ಪತಂಜಲಿ ಯೋಗ ಪೀಠ ಹರಿದ್ವಾರ ಅಥಣಿ ಶಾಖೆ, ಸರಕಾರಿ, ಅನುದಾನಿತ, ಅನುದಾನ ರಹಿತ ಶಾಲಾ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ಜೂನ್ ೨೧ ರಂದು ೧೧ ನೇ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಮುಂಜಾನೆ ೬ ಗಂಟೆಗೆ ಯೋಗ, ಪ್ರಾಣಾಯಾಮ, ಧ್ಯಾನ ಶಿಬೀರ ಸ್ಥಳೀಯ ಎಸ್.ಎಸ್.ಎಮ್.ಎಸ್ ಕಾಲೇಜ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಲಕ್ಷ್ಮಣ ಸವದಿ ತಿಳಿಸಿದರು.
ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿದ್ದರು. ಎಲ್ಲರಿಗೂ ಯೋಗ ಶಿಬಿರದಲ್ಲಿ ಪತಂಜಲಿ ಯೋಗ ಪೀಠದ ಅಂತಾರಾಷ್ಟ್ರೀಯ ಯೋಗ ಗುರು ಮತ್ತು ರಾಜ್ಯ ವರೀಷ್ಠ ಪ್ರಭಾರಿಗಳಾದ ಭವರಲಾಲ್ ಆರ್ಯ ಅವರು ಮಾರ್ಗದರ್ಶನ ಮಾಡುವರು ಎಂದ ಅವರು ಅಧ್ಯಕ್ಷತೆಯನ್ನು ಪುರಸಭಾ ಅಧ್ಯಕ್ಷೆ ಶಿವಲೀಲಾ ಬುಟಾಳಿ ವಹಿಸುವರು, ಮುಖ್ಯ ಅತಿಥಿಗಳಾಗಿ ತಹಶೀಲ್ದಾರ ಸಿದರಾಯ ಭೋಸಗಿ, ಅತಿಥಿಗಳಾಗಿ ಡಾ.ಮಲ್ಲಿಕಾರ್ಜುನ ಹಂಜಿ ಆಗಮಿಸುವರು ಎಂದರು.ರೋಗ ಮುಕ್ತ ಮತ್ತು ಸಧೃಢ, ಆರೋಗ್ಯವಂತ ಸಮಾಜ ನಿರ್ಮಾಣದ ಉದ್ದೇಶದಿಂದ ಮತ್ತು ಯೋಗದ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದ ಅವರು ಸುಮಾರು ೩೦೦೦ ಸಾವಿರ ಸಾಮಥ್ರ್ಯದ ಈ ಮೈದಾನದಲ್ಲಿ ಯೋಗಾಸಕ್ತರ ಅನಕೂಲಕ್ಕಾಗಿ ಎಲ್.ಇ.ಡಿ ಸ್ಕೀನ್ ವ್ಯವಸ್ಥೆ ಮಾಡಲಾಗಿದೆ ಎಂದರು.ಪತಂಜಲಿ ಯೋಗ ಪೀಠದ ರಾಜ್ಯ ವರೀಷ್ಠ ಪ್ರಭಾರಿ ಭವರಲಾಲ್ ಆರ್ಯ ಮಾತನಾಡಿ, ಯೋಗ ಒಂದು ದಿನದ ಹಬ್ಬ ಆಗಬಾರದು ಇದು ಜೀವನದ ಒಂದು ಭಾಗವಾಗಬೇಕು ಎಂದ ಅವರು ಯೋಗ, ಪ್ರಾಣಾಯಾಮ ಮತ್ತು ಧ್ಯಾನ ಶಿಬಿರವನ್ನು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಶಾಸಕ ಲಕ್ಷ್ಮಣ ಸವದಿ ಉದ್ಘಾಟಿಸುವರು. ಅಥಣಿಯ ಎಲ್ಲ ವಾರ್ಡಗಳಲ್ಲಿ ಒಂದೊಂದು ಯೋಗ ಕೇಂದ್ರ ನಿರ್ಮಿಸುವ ಗುರಿ ನಮ್ಮದಾಗಿದ್ದು, ಈ ನಮ್ಮ ಯೋಜನೆಗೆ ಸ್ಥಳೀಯ ಶಾಸಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದ ಅವರು ಶಿಬಿರದಲ್ಲಿ ಪಾಲ್ಗೊಳ್ಳುವವರು ಸಡಿಲವಾದ ಬಟ್ಟೆ ಧರಿಸಿ ಬರಬೇಕು ಮತ್ತು ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವವರು ತಮ್ಮ ವೈದ್ಯರ ಸಲಹೆ ಪಡೆದು ಬರಬೇಕು ಎಂದರು. ಸುದ್ದಿಗೋಷ್ಠಿಯಲ್ಲಿ ಎಸ್.ಕೆ.ಹೊಳೆಪ್ಪನವರ, ಶಿವಾನಂದ ಬುರ್ಲಿ, ಶಿವಾನಂದ ಮಾಲಗಾಂವಿ, ಎ.ಬಿ.ಪಾಟೀಲ, ಬಾಳಕೃಷ್ಣ ಕೊಳೇಕರ, ಅಪ್ಪಾಸಾಹೇಬ ಅಲಿಬಾದಿ, ರಾಮಣ್ಣಾ ಧರಿಗೌಡರ, ಅಪ್ಪಾಸಾಹೇಬ ತಾಂಬಟ, ಡಾ.ವಿನಾಯಕ ಚಿಂಚೋಳಿಮಠ, ಸುರೇಶ ಚಿಕ್ಕಟ್ಟಿ, ಶೇಖರಪ್ಪ ಗೊರಜನಾಳ, ಸದಾಶಿವ ಮುದಗೌಡರ, ಪುರಸಭಾ ಸದಸ್ಯ ರಾಜಶೇಖರ ಗುಡೋಡಗಿ ,ರಾಮನಗೌಡಾ ಪಾಟೀಲ,ಶಿವರುದ್ರಪ್ಪ ಗುಳಪ್ಪನ್ನವರ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ