ಯೋಗ ದೈಹಿಕ, ಮಾನಸಿಕ ಶಕ್ತಿ : ರಾಘವೇಂದ್ರ ನೀಲಣ್ಣವರ
ಮುಧೋಳ:ಜೂ.೨೮.,ತಾಲೂಕಿನ ಇಂಗಳಗಿ ಗ್ರಾಮದ ಶ್ರೀ ವಿಶ್ವೇಶ್ವರ ವಿದ್ಯಾ ವರ್ಧಕ ಸೊಸೈಟಿ (ರಿ) ಲಾರ್ಡ್ ಪ್ಯಾಲೇಸ್ ಇಂಟರ್ನ್ಯಾ?ನಲ್ ಪಬ್ಲಿಕ್ ಸ್ಕೂಲ್ (ಸಿ.ಬಿ.ಎಸ್.ಇ) ಇಂಗಳಗಿ ಮತ್ತು ಕಲ್ಪವೃಕ್ಷ ಮಾಡರ್ನ್ ಇಂಟರ್ನ್ಯಾ?ನಲ್ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಇಂಗಳಗಿ ಆಶ್ರಯದಲ್ಲಿ ಶನಿವಾರ ದಂದು ೧೧ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಜರಗಿತು.
ಯೋಗ ಗುರುಗಳಾದ ರಾಘವೇಂದ್ರ ನೀಲಣ್ಣವರ ಪ್ರಾಣಾಯಾಮದ ಅಭ್ಯಾಸವು ನಾಡಿಗಳನ್ನು ಶುದ್ದಿಗೊಳಿಸಿ. ಮಾನಸಿಕ ಸ್ಥಿರತೆಯನ್ನು ಹೆಚ್ಚಿಸುತ್ತದೆ.ಪ್ರಾಣಾಯಾಮ ಮತ್ತು ಧ್ಯಾನದ ಅಭ್ಯಾಸ, ಅಧ್ಯಾತ್ಮಿಕವಾಗಿ ನಿಮ್ಮನ್ನು ಉನ್ನತ ಮನಸ್ಥಿತಿಯಲ್ಲಿಡಲು ಸಹಾಯ ಮಾಡುತ್ತದೆ ಹಾಗೂ ನಿಮ್ಮ ಬುದ್ಧಿಶಕ್ತಿಯ ಮೇಲೆಯೂ ಪ್ರಭಾವ ಬೀರುತ್ತದೆ.ಯೋಗಾಭ್ಯಾಸವು ನಿಮ್ಮ ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಉತ್ತಮಗೊಳಿಸಿ, ರೋಗಮುಕ್ತ ದೇಹವನ್ನಾಗಿ ಪರಿವರ್ತಿಸಿ, ದೈಹಿಕ, ಮಾನಸಿಕ, ಬೌದ್ಧಿಕ, ಭಾವನಾತ್ಮಕ, ಆಧ್ಯಾತ್ಮಿಕವಾಗಿ ಶಕ್ತಿನೀಡಿ ಸವಾಂಗೀಣ ಹಾಗೂ ಸರ್ವತೋಮುಖ ಬೆಳವಣೆಗೆಗೆ ಯೋಗ ಸಹಾಯ ಮಾಡುತ್ತದೆ ಎಂದು ತಿಳಿಸಿ, ಸೂರ್ಯ ನಮಸ್ಕಾರ,ಆಸನ, ಪ್ರಾಣಾಯಾಮ,ಧ್ಯಾನ ಮತ್ತು ಕ್ರಿಯೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಆಡಳಿತ ಮಂಡಳಿಯವರು ನೀಡಿದ ಗೌರವದ ಸನ್ಮಾನವನ್ನು ಸ್ವೀಕರಿಸಿದರು.
ಸಂಸ್ಥೆಯ ಅಧ್ಯಕ್ಷರಾದ ನಾರಾಯಣ ನಾಯಕ, ಮುಖ್ಯೋಪಾಧ್ಯಾಯರಾದ ಇಮ್ರಾನ್ ಹುದ್ದಾರ,ವಸಂತ ಪಟಗಾರ ರಾ?ತ್ಥಾನ ಪರಿ?ತ್ತಿನ ಉಪನ್ಯಾಸಕರಾದ ಶ್ರೀನಿವಾಸ ಪಾಟೀಲ,ಶಿಕ್ಷಕ ಸಿಬ್ಬಂದಿಗಳಾದ ಅಶೋಕ ಕಟ್ಟಿಮನಿ, ಶಶಿಧರ ಮಠಪತಿ, ವಿಠ್ಠಲ ಗುರವ, ಸಲೀಂ ಫಡಕೆ, ಸಚಿನ ಬಡಿಗೇರ, ರಾಘವೇಂದ್ರ ಕನಕರಡ್ಡಿ,ಫಾರೂಕ ಸಬಸಾಗರ, ಕಮಲಾ ಗೊರವರ, ಭಾರತಿ ನಾಯಕ, ಸವಿತಾ ಪಾಟೀಲ, ಸವಿತಾ ಗುಲಗಾಲಜಂಬಗಿ, ಸುನಂದಾ ರಾಟೊಡ, ಕರಿ? ರಟೋಡ, ಗೀತಾ ನಾವಿ, ದುರ್ಗಾ ನಡುವಿನಮನಿ, ಶಂಕ್ರಮ್ಮ ಅಳದಾಳ, ರಶ್ಮಿ ಪೂಜಾರ, ಅಶ್ವಿನಿ ಕಡಪಟ್ಟಿ, ಅಶ್ವಿನಿ ಮಾದಿ,ರಸೂಲಬಿ ಜಮಾದಾರ ಮತ್ತು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.