ಬಳ್ಳಾರಿ,ಜೂ.22:: ಯೋಗವೇ ಆರೋಗ್ಯಕರ ಜೀವನದ ಆಧಾರವಾಗಿದ್ದು, ಇಂದಿನ ಒತ್ತಡ ಭರಿತ ಜೀವನದಲ್ಲಿ ಯೋಗಭ್ಯಾಸವು ಮಾನಸಿಕ ನೆಮ್ಮದಿ ,ಏಕಾಗ್ರತೆ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.ಪ್ರತಿಯೊಬ್ಬರೂ ಪ್ರತಿದಿನ ಸ್ವಲ್ಪ ಸಮಯವನ್ನು ಯೋಗಕ್ಕೆ ಮೀಸಲಿಟ್ಟರೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ವೈದ್ಯ ಡಾ.ಹರೀಶ್ ತಿಳಿಸಿರು.
ಶ್ರೀ ವಾಸವಿ ಎಜ್ಯುಕೇಷನ್ ಟ್ರಸ್ಟ್ನ ಶ್ರೀ ವಾಸವಿ ವಿದ್ಯಾಲಯದಲ್ಲಿ ಭಾನುವಾರ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಲ್ಲಿಯೇ ಯೋಗವನ್ನು ಅಭ್ಯಾಸ ಮಾಡುವುದಿರಿಂದ ಶಿಸ್ತು,ಏಕಾಗ್ರತೆ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಬೆಳೆಸಿಕೊಳ್ಳಬಹುದು. ಯೋಗವು ಭಾರತದ ಅಮೂಲ್ಯ ಪರಂಪರೆಯಾಗಿದ್ದು, ಇಂದು ವಿಶ್ವದಾದ್ಯಂತ ಅದರ ಮಹತ್ವವನ್ನು ಎಲ್ಲರೂ ಗುರುತಿಸುತ್ತಿದ್ದಾರೆ. ಎಲ್ಲರೂ ಯೋಗವನ್ನು ತಮ್ಮ ದಿನನಿತ್ಯದ ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಂಡು ಆರೋಗ್ಯ ವಂತ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಕರೆ ನೀಡಿದರು.
ಯುವ ಜನತೆ ಯೋಗದ ಮಹತ್ವವನ್ನು ಅರಿತು ನಿಯಮಿತವಾಗಿ ಅಭ್ಯಾಸ ಮಾಡಬೇಕು ಮತ್ತು ಅಂತರಾಷ್ಟ್ರೀಯ ಯೋಗ ದಿನಾಚರಣೆಯಂತಹ ಕಾರ್ಯಕ್ರಮಗಳು ಯೋಗದ ಬಗ್ಗೆ ಜಾಗೃತಿ ಮೂಡಿಸಲು ಸಹಕಾರಿಯಾಗುತ್ತವೆ ಎಂದು ಶ್ರೀ ವಾಸವಿ ಎಜ್ಯುಕೇಷನ್ ಟ್ರ‍್ಟಸ್ಟ್ ನ ಉಪಾಧ್ಯಕ್ಷ ಜೀತೇಂದ್ರ ಪ್ರಸಾದ್ ರವರು ಹೇಳಿದರು.
ವಿದ್ಯಾರ್ಥಿನಿ ಬುಶ್ರಾ ಫಾತಿಮಾ ಯೋಗದ ಮಹತ್ವದ ಕುರಿತು ಮಾತಾನಾಡಿ ,ಯೋಗವು ದೇಹ ಮತ್ತು ಮನಸ್ಸನ್ನು ಆರೋಗ್ಯವಾಗಿಡುವ ಉತ್ತಮ ಮಾರ್ಗವಾಗಿದೆ ಎಂದು ಉಪನ್ಯಾಸ ನೀಡಿದರು.
ಮುಖ್ತ ಅತಿಥಿಗಳು,ಆಡಳಿತ ವರ್ಗ, ಮುಖ್ಯೋಪಾಧ್ಯರಾದ ವೀರೇಶ್. ಯು , ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಸಿಂಚನ ಮತ್ತು. ಅನನ್ಯ ಪ್ರಾರ್ಥನೆ ಸಲ್ಲಿಸಿದರು. ವಿದ್ಯಾರ್ಥಿನಿ ಹರಿಣಿ ಸ್ವಾಗತ ಕೋರಿದರು. ತನುಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು. ಸಿಂಚನ ವಂದನಾರ್ಪಣೆಯನ್ನು ನೆರೆವೇರಿಸಿದರು.
ಖ್ಯಾತ ತಜ್ಞರು ಹಾಗೂ ಮಕ್ಕಳ ಮೂಳೆ ಮತ್ತು ಕೀಲುಗಳ ಸಮಸ್ಯೆಗಳ ಚಿಕಿತ್ಸೆಯಲ್ಲಿ ಪರಿಣಿತಿ ಹೊಂದಿರುವ ಡಾ. ಹರೀಶ್ ರವರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಿ, ಅಭಿನಂದಿಸಲಾಯಿತು.
\