Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಯೋಗವು ಆಧ್ಯಾತ್ಮಿಕ ಸಂಕಲ್ಪ ಶಕ್ತಿ ವೃದ್ಧಿಸುವಲ್ಲಿ ಸಹಕಾರಿ: ಸಾಹಿತಿ ಸಂಗಮೇಶ ಬದಾಮಿ

ವಿಜಯಪುರ, ಏಪ್ರಿಲ್10: - ಯೋಗವು ಸಾವಿರಾರು ವರ್ಷಗಳಿಂದ ದೇಶ ವಿದೇಶಗಳಲ್ಲಿ ಎಲ್ಲ ಕಡೆಗೂ ಆವರಿಸಿದೆ. ಯೋಗಾಸನದಿಂದ ಹಲವಾರು ದೈಹಿಕ, ಮನಸ್ಸಿನ ಏಕಾಗ್ರತೆ, ಮಾನಸಿಕ ತೊಂದರೆಗಳನ್ನು ನಿವಾರಿಸಿಕೊಳ್ಳಬಹುದು. ಇದು ಆಧ್ಯಾತ್ಮಿಕ ಸಂಕಲ್ಪ ಶಕ್ತಿ ವೃದ್ಧಿಸುವಲ್ಲಿ ಸಹಕಾರಿಯಾಗಿದೆ ಎಂದು ಸಾಹಿತಿ
ಸಂಗಮೇಶ ಬದಾಮಿಯವರು ಹೇಳಿದರು.

ನಗರದ ಗಗನ ಮಹಲ್ ಉದ್ಯಾನವನ ಆವರಣದಲ್ಲಿ ನಡೆದ ದೆಹಲಿಯ ಭಾರತೀಯ ಯೋಗ ಸಂಸ್ಥಾನದ ೫೮ನೇಯ ಸ್ಥಾಪನಾ ದಿವಸ ಸಮಾರೋಪ
ಸಮಾರಂಭದಲ್ಲಿ ಮಾತನಾಡುತ್ತಾ, ವಿಶ್ವದಾದ್ಯಂತ ಯೋಗ ಜೀವನದ ಬಗ್ಗೆ ಅರಿಯಲು ನಾವೆಲ್ಲಾ ಉತ್ಸುಕರಾಗಿದ್ದೇವೆ. ಪ್ರಾಪಂಚಿಕ ಸಂಗತಿಯಲ್ಲಿ ಸಿಕ್ಕು
ಬಳಲುತ್ತಿರುವ ಜನರಿಗೆ ಇಂದು ಯೋಗ ಅವಶ್ಯಕವಾಗಿದೆ. ಇದರಿಂದ ಮಾನಸಿಕ ನೆಮ್ಮದಿ ಮತ್ತು ಆಧ್ಯಾತ್ಮಿಕ ಉನ್ನತಿ ಸಾಧಿಸಬಹುದು. ನಿಯಮಿತ
ಯೋಗಾಭ್ಯಾಸದಿಂದ ಸಾಕಷ್ಟು ಪ್ರಯೋಜನೆಗಳಿವೆ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಈಶ್ವರ ಯೋಗಾ ಕೇಂದ್ರದ ಶಿಕ್ಷಕ ವಿ.ಎಸ್. ಹಿರೇಮಠ ಮಾತನಾಡಿ, ಯೋಗವನ್ನು ತಪ್ಪದೇ ಮಾಡಬೇಕು. ಯೋಗ ಸಾಧನೆಗೆ ಮುಖ್ಯವಾಗಿ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾದಿಗಳೆಂದು ೮ ಅಷ್ಟಾಂಗ ಯೋಗಗಳ ವಿದ್ಯೆಯನ್ನು ಅನುಸರಿಸಿ ದೈವತ್ವ ಪಡೆದು ಜೀವನ ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಹೇಳಿದರು.

ಯೋಗ ಶಿಕ್ಷಕ ಆನಂದ ಬುತಡಾ ಯೋಗಾಸನದ ಮಹತ್ವ ವಿವರಿಸಿ ಪದ್ಮಾಸನ, ತಾಡಾಸನ, ಅರ್ಧಚಕ್ರಾಸನ, ಯೋಗ ಮುದ್ರಾಸನ, ಕೋನಾಸನ,
ನಗು, ಧ್ಯಾನ, ಕಪಾಲಬಾತಿ, ಪ್ರಾಣಾಯಾಮ ಆಸನಗಳ ಮಾರ್ಗದರ್ಶನ ನೀಡುತ್ತಾ ಭಾರತೀಯ ಯೋಗ ಸಂಸ್ಥಾನದ ಸಾಧನಾ ಕೇಂದ್ರಗಳಾದ
ಗಗನ ಮಹಲ್ ಉದ್ಯಾನ ಡಾ. ನಾಗೂರ ಆಯುರ್ವೇದ ಕಾಲೇಜ ಕ್ಯಾಂಪಸ್, ಅಡವಿ ಶಂಕರಲಿಂಗೇಶ್ವರ ಕಾಲೋನಿ ಉದ್ಯಾನದಲ್ಲಿ ಕಳೆದ ೮ ವರ್ಷಗಳಿಂದ ಉಚಿತವಾಗಿ ಯೋಗಾಸನ ನಡೆಸುತ್ತಾ ಬರುತ್ತಿದೆ ಎಂದರು.

ರಶ್ಮಿ ಪತ್ತಾರ, ಮಹಾದೇವಿ ಪತ್ತಾರ ಅವರಿಂದ ಸರಸ್ವತಿ ವಂದನ ಜರುಗಿತು. ಮಹೇಶ ಮೇತ್ರಿ, ರಾಜೇಶ ಪೋಳ, ಸದಾಶಿವ ಜಾಧವ, ಶ್ರೀಮತಿ ಮಹಾದೇವಿ
ದುಲಂಗೆ, ಸಂಜು ಮುದವಿ, ಪ್ರದೀಪ ಪತ್ತಾರ, ವಿಶ್ವನಾಥ ಚೌಕಿಮಠ, ಸಂತೋಷ ಮಾನೆ, ದಿನೇಶ ಕೋರವಾಲ, ಶ್ರೀಮತಿ ಕಲಾವತಿಬಾಯಿ, ಶ್ರೀಮತಿ ಬದಾಮಿಬಾಯಿ ಉಪಸ್ಥಿತರಿದ್ದರು. ಶ್ರೀಶೈಲ ದುಲಂಗೆ ಕಾರ್ಯಕ್ರಮ ನಿರ್ವಹಿಸಿದರು. ಯೋಗಾಸನ ಶಿಬಿರದಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಮಹಿಳೆಯರು,
ಹಿರಿಯರು ಪಾಲ್ಗೊಂಡಿದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ