Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಆರ್ ವೈ ಎಂಸಿ  ಕಾಲೇಜಿನಲ್ಲಿ ಮಹಿಳಾ  ಆರೋಗ್ಯ ಜಾಗೃತಿ ಕಾರ್ಯಕ್ರಮ









ಬಳ್ಳಾರಿ, ಏ.04: ಇತ್ತೀಚೆಗೆ ಮಹಿಳಾ ಆರೋಗ್ಯ ಸುದ್ದಿಗಳು ರೋಗ ತಡೆಗಟ್ಟುವಿಕೆಯಲ್ಲಿ ಗಮನಾರ್ಹ ಪ್ರಗತಿಗಳ ಮೇಲೆ ಕೇಂದ್ರೀಕರಿಸುತ್ತಿವೆ. ಇದರಲ್ಲಿ ಎಂಡೊಮೆಟ್ರಿಯೋಸಿಸ್ ಆರಂಭಿಕ ಗುರುತಿಸುವಿಕೆಯ ಅಧ್ಯಯನಗಳು ಸೇರಿವೆ. ಪ್ರಮುಖ ಪ್ರವೃತ್ತಿಗಳು ಭಾರತದಲ್ಲಿ ಆರೋಗ್ಯ ಸೇವೆಯ ಪ್ರವೇಶವನ್ನು ಸುಧಾರಿಸುವುದು ಸೇರಿವೆ

ಎಂದು ಹೆಸರಾಂತ ಪ್ರಸೂತಿ ಮತ್ತು  ಸ್ತ್ರೀರೋಗ ತಜ್ಞ ವೈದ್ಯ ಡಾ.ಬಿ.ಕೆ.ಅನುಪಮ ಸುಂದರ್  ಹೇಳಿದರು.

ಅವರು  ನಗರದ  ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮಹಿಳಾಕೋಶ ಹಾಗೂ ಬಳ್ಳಾರಿಯ  ಪ್ರಸೂತಿ ಸಮಾಜದ (ಎಫ್ ಒಜಿಎಸ್) ಆಶ್ರಯದಲ್ಲಿ  ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ಹಮ್ಮಿಕೊಂಡಿದ್ದ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ,

ಎಂಡೊಮೆಟ್ರಿಯೋಸಿಸ್ ಧೀರ್ಘಕಾಲದ, ಆಗಾಗ್ಗೆ  ನೋವಿನಿಂದ ಕೂಡಿದ ಖಾಯಿಲೆಯಾಗಿದೆ. ಸಂತಾನೋತ್ಪತ್ತಿ ವಯಸ್ಸಿನ ಸುಮಾರು ಶೇ.10 ರಷ್ಟು ಮಹಿಳೆಯರ ಮೇಲೆ ಪರಿಣಾಮ ಬೀರುತ್ತಿದೆ. ಇದು ತೀವ್ರ ಮುಟ್ಟಿನ ನೋವು, ಧೀರ್ಘಕಾಲದ ಶ್ರೇಣಿಯ ನೋವು, ಬಂಜೆತನ ಮತ್ತು ಆಯಾಸಕ್ಕೆ ಕಾರಣವಾಗಲಿದೆ. ಇದು ಆಗಾಗ್ಗೆ ಆತಂಕ, ಖಿನ್ನತೆ ಸೇರಿದಂತೆ ಜೀವನದ ಗುಣಮಟ್ಟಕ್ಕೆ ಗಮನಾರ್ಹ, ದೀರ್ಘಕಾಲೀನ  ಅಡ್ಡಿಯನ್ನುಂಟು ಮಾಡಲಿದೆ. ಸಕಾಲಿಕ ತಡೆಗಟ್ಟುವಿಕೆಯ ಕ್ರಮಗಳನ್ನು ಅನುಸರಿಸುವುದರಿಂದ ಎದುರಾಗುವ ನಾನಾ ತೊಂದರೆಗಳಿಂದ ಮುಕ್ತರಾಗಬಹುದು ಎಂದರು.

ಇನ್ನೊಬ್ಬ ಪ್ರಸೂತಿ, ಸ್ತ್ರೀರೋಗ ತಜ್ಞ ವೈದ್ಯರಾದ ಡಾ.ಲಕ್ಷ್ಮೀ ಪಾವನ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಮಹಿಳಾ ಕೋಶದ ಸಂಯೋಜಕಿ ಡಾ.ಎಂ.ಎಸ್.ಶೋಭಾ ಸೇರಿದಂತೆ ಇತರರಿದ್ದರು.


























Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ