Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಹಿಳಾ ಸ್ವಸಹಾಯ ಸಂಘದ ಸದಸ್ಯೆಯರಿಗೆ ೨೫ ಲಕ್ಷ ವಂಚಿಸಿ ಮಹಿಳೆ ಪರಾರಿ

ಕಾಗವಾಡ:ಪಟ್ಟಣದಲ್ಲಿ ಮಹಿಳೆಯೋರ್ವಳು ಮಹಿಳಾ ಸ್ವಸಹಾಯ ಸಂಘದ ಸದಸ್ಯೆಯರನ್ನ ವಂಚಿಸಿ ಸುಮಾರು ೨೫ ಲಕ್ಷ ರೂಪಾಯಿ ವಂಚಿಸಿ ಪರಾರಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಪಟ್ಟಣದ ಮಿನಾಕ್ಷಿ ತೇಲಿ ಇವಳು ಕಳೆದ ಹತ್ತು ಇಪ್ಪತ್ತು ವರ್ಷಗಳಿಂದ ಮಹಿಳೆಯರಿಗೆ ಸ್ವಸಹಾಯ ಸಂಘಗಳ ಮುಖಾಂತರ ಸಾಲ ಕೊಡಿಸುವ ಏಜೆಂಟಳಾಗಿ ಕಾರ್ಯನಿರ್ವಹಿಸುತ್ತಾ ಮಹಿಳೆಯರ ವಿಶ್ವಾಸ ಗಳಿಸಿ ಈಗ ತನ್ನ ಮಗನಿಗೆ ನೌಕರಿಗಾಗಿ ಹಣ ಹೊಂದಿಸಬೇಕೆಂದು ನಂಬಿಸಿ ಅನೇಕ ಮಹಿಳೆಯರ ಹೆಸರಿನಲ್ಲಿ ಸಾಲ ಪಡೆದುಕೊಂಡು ಸುಮಾರು ಇಪ್ಪತ್ತು ಐದು ಲಕ್ಷಗಳೊಂದಿಗೆ ಪರಾರಿಯಾಗಿದ್ದಾಳೆ.

ಹಣ ಕಳೆದುಕೊಂಡ ಮಹಿಳೆಯರು ಈ ಕುರಿತು ಪಟ್ಟಣದ ಪ್ರಮುಖರಿಗೆ ಮತ್ತು ಕಾಗವಾಡ ಪೋಲಿಸರಿಗೆ ಲಿಖಿತ ರೂಪದಲ್ಲಿ ದೂರು ಸಲ್ಲಿಸಿ ನ್ಯಾಯ ಒದಗಿಸಿಕೊಡಬೇಕೆಂದು ಕೇಳಿ ಮೂರು ತಿಂಗಳಾದರೈ ಯಾವದೇ ಪ್ರಯೋಜನವಾಗಿಲ್ಲ.ನೊಂದ ಮಹಿಳೆಯರು ಈಗ ಮಾಧ್ಯಮದವರೊಂದಿಗೆ ಮಾತನಾಡಿ,ಹಣ ಕಳೆದುಕೊಂಡ ಬಗ್ಗೆ ವಿವರಣೆ ನೀಡಿದ್ದು ತಮಗೆ ನ್ಯಾಯ ಕೊಡಿಸಬೇಕೆಂದು ಅವಲತ್ತುಕೊಂಡಿದ್ದಾರೆ.

ಈ ಮಧ್ಯೇ ಹಣದೊಂದಿಗೆ ಪರಾರಿಯಾಗಿರುವ ಮಹಿಳೆಯು ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಆಕೆಯ ಮಗನನ್ನು ಸಂಪರ್ಕಿಸಿದಾಗ ನಮ್ಮ ತಾಯಿ ನನ್ನ ನೌಕರಿಗಾಗಿ ಹಣ ನೀಡಿದ್ದು ನಿಜ ಆದರೆ ಕೇವಲ ನಾಲ್ಕು ಮಹಿಳೆಯರ ಸಂಘದ ಹಣ ಮಾತ್ರ ನೀಡಿರುತ್ತಾಳೆ ಬಾಕಿ ಮಹಿಳೆಯರು ನೀಡಿದ ಹಣ ವಿಷಯ ನನಗೆ ಗೊತ್ತಿಲ್ಲ ಎಂದು ಜಾರಿಕೊಳ್ಳುತ್ತಿದ್ದಾನೆ.ಈ ಪ್ರಕರಣದಲ್ಲಿ ಸುಮಾರು ಹದಿನೈದು ಮಹಿಳೆಯರು ತಮ್ಮ ಹೆಸರಿನಲ್ಲಿ ಐವತ್ತರಿಂದ ಒಂದೂವರೆ ಲಕ್ಷದವರೆಗೆ ಸಾಲ ತೆಗೆದು ವಂಚಕಿ ಮಹಿಳೆಯರಿಗೆ ನೀಡಿರುವದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ.

ಸಂಭಂಧಪಟ್ಟ ಅಧಿಕಾರಿಗಳು,ಪೋಲಿಸ್ ಅಧಿಕಾರಿಗಳು ವಂಚಕ ಮಹಿಳೆಯನ್ನು ಹಿಡಿದು ನೊಂದ ಮಹಿಳೆಯರಿಗೆ ನ್ಯಾಯ ಕೊಡುವರೇ ಕಾಯ್ದು ನೋಡಬೇಕಿದೆ.ಜೊತೆಗೆ ಕಳೆದ ಕೆಲ ದಶಕಗಳಿಂದ ಗ್ರಾಮೀಣ ಭಾಗದಲ್ಲಿ ಮಹಿಳಾ ಸ್ವಸಹಾಯ ಸಂಘದ ಹೆಸರಿನಲ್ಲಿ ವಂಚನೆ ಪ್ರಕರಣಗಳು ಹೆಚ್ಚುತ್ತಿದ್ದು,ಸರ್ಕಾರ ಸ್ವಸಹಾಯ ಸಂಘಳಿಗೆ ಕಟ್ಟುನಿಟ್ಟಿನ ಕಾನೂನು ರೂಪಿಸುವ ಅಗತ್ಯವಿದೆ.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ