Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಸಿಗೆ ನೀರು ಹಾಕಿ ಜೈ ಜವಾನ ರೈತ ದಿನ ಆಚರಣೆ.





ಕಲ್ಲೋಳಿ.ಪಟ್ಟಣದ  ಶ್ರೀ ಮಹಾಲಕ್ಷ್ಮೀ ಪಿಕೆಪಿಎಸ್ ಸಭಾಂಗಣದಲ್ಲಿ ಮಂಗಳವಾರ ಡಿ-23 ರಂದು ನಡೆದ ಜೈ ಕಿಸಾನ್ ದಿವಸ ರೈತ ದಿನಾಚರಣೆಯನ್ನು ನಮ್ಮ ರೈತ,ನಮ್ಮ ಹೆಮ್ಮೆ ಕಾರ್ಯಕ್ರಮಕ್ಕೆ  ಬಸವರಾಜ ಕಡಾಡಿ ಸಸಿಗೆ ನೀರು ಉಣಿಸುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ದೇಶದ ಮಾಜಿ ಪ್ರಧಾನ ಮಂತ್ರಿ ಚೌದರಿ ಚರಣಸಿಂಗ ಅವರು ಭಾರತದ ರೈತರು ಹಾಗೂ ಗ್ರಾಮೀಣ ಜನರ ಹಿತಕ್ಕಾಗಿ, ಭೂ ಸುಧಾರಣೆಗಳಿಗಾಗಿ ಹೋರಾಡಿದ ನಾಯಕರೆಂದು ಹೆಸರುವಾಸಿಯಾಗಿದ್ದಾರೆ ಅವರ ಹೆಸರಿನಲ್ಲಿ ರೈತ ದಿನಾಚರಣೆ ಮಾಡುತ್ತಿರುವುದು ನಮಗೆ ಹೆಮ್ಮೆ ಅನಿಸುತ್ತದೆ ಎಂದರು. ರೈತರು ಸಾವಯವ ಕ್ರಷಿಗೆ ಹೆಚ್ಚು ಮಹತ್ವ ಕೊಡಬೇಕು,ರಸಗೊಬ್ಬರ ಬಳಕೆ ಮಾಡಬೇಕೆಂದು ಕರೆ ನೀಡಿದರು.

ಮುಖ್ಯ ಅತಿಥಿಗಳಾಗ ಅರಭಾವಿ ಕ್ರಷಿ ಅಧಿಕಾರಿ ಪರಸಪ್ಪ ಹುಲಗಬಾಳಿ ಮಾತನಾಡಿ ರೈತರು ರಸಗೊಬ್ಬರ ಬಳಕೆ ಕಡಿಮೆ ಮಾಡಿ ಸೆಗಣಿ ಗೊಬ್ಬರ ಬಳಕೆಗೆ ಮಹತ್ವ ನೀಡಬೇಕು,ಪ್ರತಿಯೊಬ್ಬ ರೈತರು ಹೆಚ್ಚು ಬೆಳೆಗಳು ತೆಗೆಯಬೇಕೆಂದರೆ ಮಣ್ಣಿನ ಪರೀಕ್ಷೆ ಮಾಡಿಸಬೇಕು ಎಂದರು. ಕ್ರಷಿ ಇಲಾಖೆಯ ಸವಲತ್ತುಗಳ ಬಗ್ಗೆ ರೈತರಿಗೆ ತಿಳಿಸಿದರು.ರೈತರು ಸಣ್ಣರೈತರಿಗೆ ಅನುಕೂಲವಾಗು ಯೋಜನೆಗಳಿಗೆ ಅನುಕೂಲ ಕಲ್ಪಸಬೇಕೆ ಒತ್ತಾಯಿಸಿದರು. ಜುವಾರಿ ಕಂಪನಿ ಅಧಿಕಾರಿ ಕ್ರಷ್ಣಾ ಕುಲಕರ್ಣಿ,ಶ್ರೀಕಾಂತ ಹುಣಸಿಕಟ್ಟಿ ಮಾತನಾಡಿದರು

ಪ್ರಗತಿ ಪರ ರೈತರಾದ ಪ್ರಭು ಕಡಾಡಿ, ರಮೇಶ ಕಡಲಗಿ,ಅಡಿವೆಪ್ಪ ಕುರಬೇಟ,ಆನಂದ ಹೆಬ್ಬಾಳ,ಕಿರಣ ಕಡಾಡಿ,ತುಕಾರಾಮ ಪಾಲ್ಕಿ,ಸಿದ್ದಪ್ಪ ಹೆಬ್ಬಾಳ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.

ಹುಬ್ಬಳಿ ಪಾರಾದೀಪ್ ಫಾಸ್ಪೇಟ್ ಹಾಗೂ ಜುವಾರಿ ಫಾರ್ಮಹಬ್,ಶ್ರೀ ಅಲ್ಲಮಪ್ರಭು ಫರ್ಟಿಲೈಜರ್ ಕಲ್ಲೋಳಿ ಇವರ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು

ರಾಹುಲ ಕಡಾಡಿ ಸ್ವಾಗತಿಸಿದರು,ಮಲ್ಲಿಕಾರ್ಜುನ ಜಕಾತಿ ಕಾರ್ಯಕ್ರಮ ನಿರೂಪಿಸಿದರು.ಆನಂದ ಬಿಳಗಿ ವಂದಿಸಿದರು.







Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ನದಾಫ್-ಪಿಂಜಾರ ಸಂಘ ತಾಲೂಕ ಘಟಕದ ಕಚೇರಿ ಉದ್ಘಾಟನೆ ಟ್ರಕ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ : ಅಕ್ಕ-ತಮ್ಮ ದಾರುಣ ಸಾವುತಾಲೂಕಾ ಅಧಿಕಾರಿಗಳ ಸಾಮಾನ್ಯ ಸಭೆ; ರೈತರಿಗೆ ಬೀಜ, ಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಿ: ಬಸವರಾಜ್ ಅಡವಿಮಠ್ ಸೂಚನೆಕೊಪ್ಪಳ ಕಾರ್ಯನಿರತ ಪತ್ರಕರ್ತರ ಸಂಘದ ಸಭೆನೂತನ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಅಭಿನಂದಿಸಿದ ಲಕ್ಷ್ಮೀ  ಹೆಬ್ಬಾಳಕರ.ಸಿದ್ದರಾಮಯ್ಯ ಭೇಟಿ ಮಾಡಿ ಧನ್ಯವಾದ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಸತ್ಕರಿಸಿದ ಯುವ ಮುಖಂಡ  ರಾಹುಲ  ಜಾರಕಿಹೊಳಿ.ಸಚಿವ ಸತೀಶ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ ಬೇಟಿ ಪರಸ್ಪರ ಶುಭ ಕೋರಿಕೆಗ್ಲೋಬಲ್ ಕ್ಯಾಪೆಬಿಲಿಟಿ ಸೆಂಟರ್‌ಗಳ ಬೆಳವಣಿಗೆಗೆ ಉತ್ತೇಜನ*ಶರಣು ಕಾರ್ಯಾಲಯ ಆರಂಭಿಸುವ ಮೂಲಕ ಬಡವರ ಕಣ್ಣಿರು ಒರೆಸುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ : ಬಳಗಾನೂರು ಶ್ರೀಗಳು,,*