Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸರ್ವಜ್ಞ ವಿದ್ಯಾಪೀಠದಲ್ಲಿ ವಿದ್ಯಾರ್ಥಿಗಳಲ್ಲಿ ಮತದಾನ ಜಾಗೃತಿ

ಶಾಲಾ ಸಂಸತ್ತ ರಚನೆ


ತಾಳಿಕೋಟೆ,ಜು,೦೯ :  ಪಟ್ಟಣದ ಸರ್ವಜ್ಞ ವಿದ್ಯಾಪೀಠ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಸನ್ ೨೦೨೬ ೨೭ ನೇ ಸಾಲಿನ ಶಾಲಾ ಸಂಸತ್ ಚುನಾವಣೆ ಸೋಮವಾರ ಯಶಸ್ವಿಯಾಗಿ ಜರಗಿತು. 
     ವಿದ್ಯಾರ್ಥಿಗಳಲ್ಲಿ ಮತದಾನ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಚುನಾವಣೆಯನ್ನು ತಂತ್ರಜ್ಞಾನ ಬಳಸಿ ಸುಗಮವಾಗಿ ನಡೆಸಲಾಯಿತು. ಮತದಾನ ಜಾಗೃತಿಯ ಕುರಿತು ಸಂಸ್ಥಾಪಕ ಅಧ್ಯಕ್ಷರಾದ ಸಿದ್ದನಗೌಡ ಮಂಗಳೂರ ವಿದ್ಯಾರ್ಥಿಗಳಿಗೆ ಮನ ಮುಟ್ಟವ ಹಾಗೆ ತಿಳಿಸಿದರು. 
      ಮತಗಟ್ಟೆ ಅಧಿಕಾರಿಯಾಗಿ ಶಾಲೆಯ ಮುಖ್ಯಗುರುಗಳಾದ ಸಂತೋಷ್ ಪವಾರ ಕಾರ್ಯನಿರ್ವಹಿಸಿದರು. ಸಹಾಯಕರಾಗಿ ರಾಜು ಜವಳಗೇರಿ, ಬಸವರಾಜ ಚಳ್ಳಗಿ, ಶಾಂತಗೌಡ ಬಿರಾದಾರ, ಮತ್ತು ಶಾಲೆಯ ಸರ್ವ ಸಿಬ್ಬಂದಿ ವರ್ಗದವರು ಕಾರ್ಯನಿರ್ವಹಿಸಿದರು.  
       ಮತದಾನದ ನಂತರ ನಡೆದ ಮತ ಎಣಿಕೆ ಕಾರ್ಯವನ್ನು ನೆರವೇರಿಸಿ ಚುನಾವಣೆಯಲ್ಲಿ ಕನ್ನಡ ಮಾಧ್ಯಮದಲ್ಲಿ, ನಾಲ್ಕನೇ ತರಗತಿ ಪ್ರತಿನಿಧಿಯಾಗಿ ಶ್ರೇಯಾ ಕುಂಬಾರ, ೫ನೇ ತರಗತಿಗೆ ಸಮರ್ಥ ಚಳೇಕಾರ, ೬ನೇ ತರಗತಿಗೆ ಅಭಿಷೇಕ್ ಚಿನಗುಡಿ, ೭ನೇ ತರಗತಿಯಲ್ಲಿ ಸಮರ್ಥ ಬನ್ನಿ, ೮ನೇ ತರಗತಿಗೆ ನಿರೀಕ್ಷಿತ ಚಿನಗುಡಿ, ೯ನೇ ತರಗತಿ ವಿಭಾಗದಲ್ಲಿ ಅ ವಿಭಾಗದಲ್ಲಿ  ಸೃಷ್ಟಿ ಬಿರಾದಾರ, ಬಿ ವಿಭಾಗದಲ್ಲಿ ಶಿವಕುಮಾರ ಪೂಜಾರಿ, ೧೦ನೇ ತರಗತಿ ಅ ವಿಭಾಗದಲ್ಲಿ ಯಶ್‌ರಾಜ್ ರಾಥೋಡ್, ಬಿ ವಿಭಾಗದಲ್ಲಿ ಚನ್ನಬಸವ ಸಜ್ಜನ್ ಆಯ್ಕೆಯಾದರು. ಆಂಗ್ಲ ಮಾಧ್ಯಮ ವಿಭಾಗದಲ್ಲಿ ನಾಲ್ಕನೇ ತರಗತಿಯಲ್ಲಿ ನಾನಾಗೌಡ ದೇಸಾಯಿ, ೫ನೇ ತರಗತಿಯಲ್ಲಿ ಹುಜೆರ್ ಹಚ್ಚಾಳ, ೬ನೇ ತರಗತಿಯಲ್ಲಿ, ಸಂಗೀತ ದುಮಗೊಂಡಿ, ನಾರಾಯಣ ಸಿಂಗ್ ದೇವಿ, ೭ನೇ ತರಗತಿಯಲ್ಲಿ ಸಮರ್ಥ್ ಹೂಗಾರ, ೮ನೇ ತರಗತಿಯಲ್ಲಿ ಚನ್ನಬಸವ ಚಣಗಿ, ೯ನೇ ತರಗತಿ ಅ ವಿಭಾಗದಲ್ಲಿ ಆರಾಧ್ಯ ಗೋನಾಳ, ಬಿ ವಿಭಾಗದಲ್ಲಿ ಆದಿನಾಥ ಜೋಶಿ, ೧೦ನೇ ತರಗತಿ ಶ್ರೇಯಾ ಕದಂ, ಬಿ ವಿಭಾಗದಲ್ಲಿ ಸಚಿನ್ ಬಾಗೇವಾಡಿ ವಿದ್ಯಾರ್ಥಿಗಳು ಆಯ್ಕೆಯಾದರು. 
      ಆಯ್ಕೆಯಾದ ಎಲ್ಲ ವಿದ್ಯಾರ್ಥಿಗಳಿಗೆ ಶಾಲಾ ಸಂಸತ್ ಚುನಾವಣೆಯ ಪ್ರಮಾಣ ವಚನವನ್ನು ಬೋಧಿಸಲಾಯಿತು. ಮತ್ತು ವಿದ್ಯಾರ್ಥಿಗಳಿಗೆ ವಿವಿಧ ಖಾತೆಗಳನ್ನು ಹಂಚಿಕೆ ಮಾಡಲಾಯಿತು.

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ