*ಬಳ್ಳಾರಿ, ಆ.28: ರಾಜ್ಯಸಭಾ ಸದಸ್ಯರು ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಡಾ. ಸೈಯ್ಯದ್ ನಾಸೀರ್ ಹುಸೇನ್ ಅವರು ಇಂದು ನಗರದ ‘ಶಾಂತಿಧಾಮ’ಕ್ಕೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಸಂಸದರ ಪ್ರಾದೇಶಾಭಿವೃದ್ಧಿ ಅನುದಾನ (MPLAD) ಅಡಿಯಲ್ಲಿ ಸರ್ಕಾರಿ ಕಿವುಡ ಮತ್ತು ಮೂಕ ಬಾಲಕರ ಶಾಲೆ ಹಾಗೂ ಸರ್ಕಾರಿ ಬಾಲಕಿಯರ ಬಾಲ ಮಂದಿರದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು.
ಶಾಂತಿಧಾಮ ಕೇಂದ್ರದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಈ ಯೋಜನೆಯಡಿ ಶಾಲೆ ಹಾಗೂ ಬಾಲ ಮಂದಿರದ ಮೂಲಸೌಕರ್ಯ ಅಭಿವೃದ್ಧಿ, ಕಟ್ಟಡ ದುರಸ್ತಿ ಹಾಗೂ ಇತರೆ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.
ನಿರಾಶ್ರಿತರು, ವಿಶೇಷ ಚೇತನ ಮಕ್ಕಳ ಕಲ್ಯಾಣಕ್ಕೆ ತಮ್ಮ ಅನುದಾನದ ಮೂಲಕ ನಿರಂತರವಾಗಿ ನೆರವು ನೀಡುವುದಾಗಿ ಅವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶಾಂತಿಧಾಮದ ಪದಾಧಿಕಾರಿಗಳು, ಅಧಿಕಾರಿಗಳು, ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.