Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬೆಳಗಾವಿಯಲ್ಲಿ "ವಿಜನ್ ಕರ್ನಾಟಕ 2025' ಈ ಪ್ರದರ್ಶನ ಜ್ಞಾನದ ಜಾತ್ರೆ: ಸಂಸದ ಜಗದೀಶ್‌ ಶೆಟ್ಟರ್‌

ಬೆಳಗಾವಿ ದಿ. 11 : ಪ್ರದರ್ಶನಗಳು ಜಾತ್ರೆಯಂತಿರುತ್ತವೆ. ಹೊಸದನ್ನು ನೋಡಲು ಜನರು ಮುಗಿಬೀಳುತ್ತಾರೆ. ಆದರೆ, ನಾವು ದಿಲ್ಲಿಯಲ್ಲಿಯ 'ಪ್ರಯಾಶ ಎಕ್ಸಿಬಿಷನ್ ಆ್ಯಂಡ್ ಪ್ರಮೋಶನ' ಇವರ ಸಹಕಾರದಿಂದ ಹಮ್ಮಿಕೊಂಡ ಈ 'ವಿಜನ್ ಕರ್ನಾಟಕ 2025'ಪ್ರದರ್ಶನ ಎಂದರೆ ಜ್ಞಾನದ ಜಾತ್ರೆಯಾಗಿದೆ ಎಂದು ಸಂಸದರಾದ ಜಗದೀಶ ಶೆಟ್ಟರರು ಅಭಿಪ್ರಾಯಪಟ್ಟರು.

ಇಲ್ಲಿಯ ಕೆ.ಎಲ್.ಇ. ಶಿಕ್ಷಣ ಸಂಸ್ಥೆಯ ಕನ್ವೆನ್ನನ ಸೆಂಟರನಲ್ಲಿ ಆಯೋಜಿಸಲಾಗಿದ್ದ ವಿಜನ್ ಕರ್ನಾಟಕ 2025 ರ ಮಹಾ ಪ್ರದರ್ಶನದ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ಸಂಸದರು ಹೀಗೆ ಹೇಳಿದರು. ಈ ಸಂದರ್ಭದಲ್ಲಿ ಕೆ. ಎಲ್.ಇ. ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷರಾದ ಪ್ರಭಾಕರ ಕೋರೆ, ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಅಭಯ ಪಾಟೀಲ, ಧಾರವಾಡ- ಹುಬ್ಬಳ್ಳಿ ಪಶ್ಚಿಮ ವಿಧಾನಸಭೆ ಮತಕ್ಷೇತ್ರದ ಶಾಸಕರಾದಅರವಿಂದ ಬೆಲ್ಲದ, ಮಾಜಿ ಸಂಸದರಾದ.ಮಂಗಳಾ ಅಂಗಡಿ, ಉಪಮಹಾಪೌರರಾದ ವಾಣಿ ವಿಲಾಸ ಜೋಶಿ, ಮಾಜಿ ಶಾಸಕರಾದ ಎಂ. ಎಲ್ ಮುತ್ತೆನ್ನವರ, ಮಾಜಿ ಶಾಸಕರಾದ.ಸಂಜಯ ಪಾಟೀಲ, ಮಾಜಿ ಶಾಸಕರಾದ.ವಿ. ಐ. ಪಾಟೀಲ, ಬೆಳಗಾವಿ ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷರಾದ ಶ್ರೀ.ಸುಭಾಷ ಪಾಟೀಲ, ನಗರ ಜಿಲ್ಲಾಧ್ಯಕ್ಷರಾದ ಶ್ರೀಮತಿ.ಗೀತಾ ಸುತಾರ, ನಗರಸೇವಕರಾದ ಹನುಮಂತ ಕೊಂಗಾಲಿ, ಬೆಳಗಾವಿ ಬಿಜೆಪಿ ಮಹಾನಗರ ಜಿಲ್ಲೆಯ ಕಾರ್ಯದರ್ಶಿ ನಾಗರಾಜ ಪಾಟೀಲ, ನಗರ ಸೇವಕ ರಾಜಶೇಖರ ದೋಗಿ, ಆರ್‌.ಬಿ.ಐ ಉಪ ಪ್ರಧಾನರಾದ.ಅಗ್ರವಾಲ, ಜಿಐಎಸ್‌ ಡೆಪ್ಯುಟಿ ಡೈರೆಕ್ಟರ ಡಾ. ನಂದಗೋಪಾಲ ಮತ್ತು ಪ್ರಯಾಸ ಎಕ್ಸಿಬಿಷನ್ನಿನ ಅಧ್ಯಕ್ಷರಾದ ಶ್ರೀ.ವನೀಶ ಗುಪ್ತಾ ಇವರು ವೇದಿಕೆಯ ಮೇಲೆ ಪ್ರಮುಖ ಅತಿಥಿಗಳಾಗಿ ಉಪಸ್ಥಿತರಿದ್ದರು. ಮೊದಲನೆ ದಿನ ಬೆಳಗಾವಿಯಲ್ಲಿಯ ವಿವಿಧ ಶಾಲಾ ಮಹಾವಿದ್ಯಾಲಯಗಳಿಂದ ಐದು ಸಾವಿರ ವಿದ್ಯಾರ್ಥಿಗಳು ಭೇಟಿ ಕೊಟ್ಟರು.

 

 

ಮೊದಲಿಗೆ ಸಂಸದರಾದ ಜಗದೀಶ ಶೆಟ್ಟರ್ ಅವರು ತಮ್ಮ ಅಮೃತ ಹಸ್ತದಿಂದ ಭವ್ಯಪ್ರದರ್ಶನದ ದೀಪ ಪ್ರಜ್ವಲನೆ ಮಾಡಿ ಪ್ರದರ್ಶನವನ್ನು ಉದ್ಘಾಟಿಸಿದರು. ಮೂರು ದಿನಗಳವರೆಗೆ ನಡೆಯುವ ಈ ಪ್ರದರ್ಶನದ ಮೊದಲನೆ ದಿನ ಬೆಳಗಾವಿ ನಗರದಲ್ಲಿಯ ವಿವಿಧ ಶಾಲಾ ಕಾಲೇಜುಗಳಿಂದ ಐದು ಸಾವಿರ ವಿದ್ಯಾರ್ಥಿಗಳು ಭೇಟಿ ಕೊಟ್ಟರು. ಡಿ.ಆ‌ರ್.ಡಿ.ಎ.ಯ ಸ್ಟಾಲ್‌ ನಲ್ಲಿ ಇಡಲಾದ ಸಂಪೂರ್ಣವಾಗಿ ಭಾರತದಲ್ಲಿಯೇ ತಯಾರಿಸಲ್ಪಟ್ಟ ಶಸ್ತ್ರಾಸ್ತ್ರ ಮತ್ತು ಹೆಲಿಕಾಪ್ಟರಗಳನ್ನು ನೋಡಿ ವಿದ್ಯಾರ್ಥಿಗಳು ಬೆರಗಾದರು. ಬಿ.ಐ.ಎಸ್‌ ಅಧಿಕಾರಿಗಳು ವಸ್ತುಗಳನ್ನು ಖರೀದಿಸುವಾಗ ಹೇಗೆ ಜಾಗರೂಕರಾಗಿರಬೇಕೆಂದು ಮಾಹಿತಿ ಕೊಟ್ಟರೆ, ಆರ್‌.ಬಿ.ಐನ ಅಧಿಕಾರಿಗಳು ಸೈಬರ್ ಫ್ರಾಡ್ ದಿಂದ ಸುರಕ್ಷಿತವಾಗಿರಲು ಸೂಚಿಸಿದರು. ಹೀಗೆ 60ಕ್ಕೂ ಹೆಚ್ಚು ವಿವಿಧ ಕೇಂದ್ರೀಯ ಖಾತೆಯ ವಿದ್ಯಾರ್ಥಿಗಳು ಮಾಹಿತಿ ಪಡೆದರು. ಈ ಪ್ರದರ್ಶನದ ಮೊದಲ ದಿನ ಅಭೂತಪೂರ್ವ ಯಶಸ್ಸು ಪಡೆಯಿತು.ಈ ಪ್ರದರ್ಶನ 13ನೇ ತಾರೀಖಿನವರೆಗೆ ನಡೆಯಲಿದೆ.

 

ಈ ಸಮಯದಲ್ಲಿ ಮಾತನಾಡುವಾಗಿ ಕೆ.ಎಲ್.ಇ. ಸಂಸ್ಥೆಯ ಶ್ರೀ.ಪ್ರಭಾಕರ್ ಕೋರೆಯವರು ಈ ರೀತಿಯ ಜ್ಞಾನ ಭಂಡಾರದ ಪ್ರದರ್ಶನವನ್ನು ಬೆಳಗಾವಿಯಲ್ಲಿ ಆಯೋಜಿಸಿದ್ದಕ್ಕಾಗಿ ಶೆಟ್ಟರ್ ರವರಿಗೆ ಮತ್ತು ಪ್ರಯಾಸ್ ಎಕ್ಸಿಬಿಷನ್ನಿನ ಶ್ರೀ.ವನೀಶ್ ಗುಪ್ತಾರವನ್ನು ಶ್ಲಾಘಿಸಿ ಗೌರವಿಸಿದರು. ಇದರ ಹೊರತಾಗಿ ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾದಿಂದ ಭಾರತವು ಸರ್ವಾಂಗೀಣವಾಗಿ ವಿಕಸಿತಗೊಳ್ಳುತ್ತಿದೆ ಎಂದು ಹೇಳಿದರು. ಅದರಂತೆಯೇ, ಶಾಸಕರಾದ ಶ್ರೀ‌.ಅಭಯ ಪಾಟೀಲರು ಈ ಪ್ರದರ್ಶನವು ನಮ್ಮ ನಗರದ ವಿದ್ಯಾರ್ಥಿಗಳ ಜ್ಞಾನಭಂಡಾರಕ್ಕೆ ಅಮೂಲ್ಯ ಪ್ರೋತ್ಸಾಹನ ಕೊಟ್ಟಂತಾಗಿದೆ ಎಂದು ಹೇಳಿದರು.

 

ಮೊದಲಿಗೆ ದಿಶಾ ಶೆಟ್ಟಿ ಇವರು ಭರತನಾಟ್ಯಂ ಮೂಲಕ ಮನಮೋಹಕವಾಗಿ ಶ್ರೀ ಗಣೇಶನಿಗೆ ವಂದಿಸುತ್ತ ನರ್ತನ ಮಾಡಿದರು. ಡಾ. ರಾಜೇಶ್ವರಿ ಹಿರೇಮಠ ಇವರ 'ಬೆಳ್ಳಿಚುಕ್ಕಿ' ತಂಡವು ಕರ್ನಾಟಕದ ನಾಡಗೀತೆ ಹಾಡುವುದರೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಸುನಿತಾ ದೇಸಾಯಿ ಅವರು ಸೂತ್ರ ಸಂಚಾಲನೆ ಮಾಡಿದರೆ, ಪ್ರಯಾಸನ ಜ್ಯೋತಿಕಾ ಇವರು ವಂದನಾರ್ಪಣೆ ತಿಳಿಸಿದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ