Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮುಕ್ಕಾದ ದೇವರ ಫೋಟೋಗಳನ್ನು ಶಾಸ್ತ್ರೋಕ್ತವಾಗಿ ವಿಸರ್ಜನೆ ಮಾಡಿ: ವೀರೇಶ ಹಿರೇಮಠ

ಬೆಳಗಾವಿ,ಏಪ್ರಿಲ್ 10:  : ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಚ ಭಾರತದ ಕಲ್ಪನೆಯಂತೆ ಬೆಳಗಾವಿ ಸರ್ವಲೋಕಾ ಸೇವಾ ಫೌಂಡೇಶನ್   ಸಂಸ್ಥಾಪಕ, ಅಧ್ಯಕ್ಷ ವೀರೇಶ ಬಸಯ್ಯ ಹಿರೇಮಠ ನೇತೃತ್ವದಲ್ಲಿ ಮುಕ್ಕಾದ ದೇವರ ಫೋಟೋಗಳನ್ನು  ಗಿಡ, ಮರಗಳ ಕೆಳಗಡೆ ಇಡುವ ಬದಲು ಶಾಸ್ತ್ರೋಕ್ತವಾಗಿ ಅದನ್ನು ವಿಸರ್ಜನೆ ಮಾಡಬೇಕೆಂದು ಜನರಲ್ಲಿ ಜಾಗೃತಿ‌ ಮೂಡಿಸಿ ನಗರದ ಪ್ರಮುಖ ಸ್ಥಳಗಳಲ್ಲಿ ಬಿತ್ತಿ ಪತ್ರ ಹಚ್ಚುವ ಮೂಲಕ ಮಾದರಿಯಾಗಿದ್ದಾರೆ.


ದೇವರ ಫೋಟೋಗಳನ್ನು ಖುಷಿಯಿಂದ ತಂದು ‌ಮನೆಯಲ್ಲಿ ಪೂಜೆ ಮಾಡುವುದು ಸರ್ವೇಸಾಮಾನ್ಯ. ಆದರೆ ಅದೇ ಫೋಟೋ ಮುಕ್ಕಾದಾಗ ಅದನ್ನು ಮರ, ಗಿಡದ ಕೆಳಗಡೆ ಅನಾಥವಾಗಿ ಇಡುವುದು ಸರಿಯಲ್ಲ. ಪ್ರತಿಯೊಬ್ಬರೂ ತಮ್ಮ ಕರ್ತವ್ಯ ಮೆರೆಯಬೇಕು. ಸ್ವತಃ ತಾವೇ ಮುಕ್ಕಾದ ಫೋಟೋಗಳನ್ನು ವಿಧಿ ವಿಧಾನಗಳ ಮೂಲಕ ವಿಸರ್ಜನೆ ಮಾಡುವುದು ಉತ್ತಮ ಎಂದು ವೀರೇಶ ಬಸಯ್ಯ ಹಿರೇಮಠ ಜನರಿಗೆ ಕರೆ ನೀಡಿದರು.



ಫೋಟೋ ವಿಸರ್ಜನೆ ಮಾಡುವಾಗ ಜನರು ಫೋಟೋದಲ್ಲಿರುವ ಗಾಜು ಮತ್ತು ಕಟ್ಟಿಗೆಯನ್ನು ಬೇರ್ಪಡಿಸಬೇಕು. ಗಾಜುಗಳನ್ನು ಮರುಬಳಿಕೆಗೆ ಪ್ರಯತ್ನಿಸಿ, ಕಟ್ಟಿಗೆಯನ್ನು ಅಗ್ನಿ ಸ್ಪರ್ಶದಲ್ಲಿ ಹಾಕಬೇಕು. ದೇವರ ಫೋಟೋಗಳನ್ನು‌ ನಿತ್ಯ ಪೂಜಿಸುವ ಹಾಗೆ ಅಗ್ನಿ ಯಜ್ಞ ‌ಮಾಡಬೇಕು. ಕೊನೆಗೆ ಉಂಟಾಗುವ ಬಸ್ಮವನ್ನು ತುಳಸಿ, ಆಲ, ಬಿಲ್ವ ಪತ್ರೆ, ಬನ್ನಿ ಯಾವುದಾದರೂ ಗಿಡದ ಕೆಳಗಡೆ ಹಾಕುವುದು ಉತ್ತಮ ಎಂದರು.


ನೀಲಕಂಠಯ್ಯ ರಾಚಯ್ಯ ಹಿರೇಮಠ ಶಾಸ್ತ್ರೀ, ಪಾಲಿಕೆ ಸದಸ್ಯ ಬಸವರಾಜ ಮೊದಗೇಕರ, ಪರಶುರಾಮ, ಸುನೀಲ್ ಮಾಯನಾಚೆ, ಶೀತಲ ಪಾಟೀಲ್, ಮಾರುತಿ ಕಣಬರಕರ, ಮತ್ತು ಕುಡುಚಿ ಕಲ್ಮೇಶ್ವರ ದೇವಸ್ಥಾನದ ಆಡಳಿ ಸಿಬ್ಬಂದಿಗಳು ಹಾಗೂ ಭಕ್ತರು ಉಪಸ್ಥಿತರಿದ್ದರು.

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ