Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವಿಜಯದಶಮಿ ಪ್ರಯುಕ್ತ ದುರ್ಯೋಧನ ಗರ್ವಭಂಗ (ರಕ್ತರಾತ್ರಿ) ನಾಟಕ ಪ್ರದರ್ಶನ 

ಬಳ್ಳಾರಿ. ಸೆ. 04: ನವರಾತ್ರಿ ವಿಜಯದಶಮಿ ಪ್ರಯುಕ್ತ ಪಟೇಲ್ ನಗರದ ದುರ್ಗಾ ಕಾಲೋನಿಯ  ಸಣ್ಣ ದುರ್ಗಮ್ಮ ದೇವಸ್ಥಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು ಪ್ರತಿ ದಿನದಂತೆ ಈ ದಿನ  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಿತ ದುರ್ಯೋಧನನ ಗರ್ವಭಂಗ ಅರ್ಥಾತ್ ರೌದ್ರ ಬೀಮನ ಅಟ್ಟಹಾಸ  (ರಕ್ತರಾತ್ರಿ) ಎಂಬ ಪೌರಾಣಿಕ ನಾಟಕವನ್ನು ಸೆಪ್ಟಂಬರ್ 24ರಂದು ಬುಧವಾರ ಸಂಜೆ  ಎಲಿವಾಳ ಸಿದ್ದಯ್ಯ ಕಲಾ ಬಳಗದ ವತಿಯಿಂದ  ಪ್ರಸ್ತುತಪಡಿಸಲಾಯಿತು.


ಅಖಂಡ ಬಳ್ಳಾರಿ ಜಿಲ್ಲೆಯ ಮೇರು ಪ್ರತಿಭಾವಂತರಾದ ಹಾರ್ಮೋನಿಯಂ ಕೀಬೋರ್ಡ್ ಸಂಗೀತ ಕಲಾವಿದರಾದ ಸೂಲದಳ್ಳಿ ತಿಪ್ಪೇಸ್ವಾಮಿ  ಮತ್ತು ತಬಲಾ ಕಲಾವಿದರಾದ ಮೋರಿಗೇರಿ ವಿರುಪಾಕ್ಷಪ್ಪನವರು ಸಂಗೀತವನ್ನು ನಡೆಸಿಕೊಟ್ಟರು.


 ಈ ರಂಗ ಸಜ್ಜಿಕೆಯ ಮೇಲೆ ಮಾತನಾಡಿದ, ಸಿಲಾರ್ ಸಾಬ್ ಅವರು  ಬಳ್ಳಾರಿ ರಂಗಭೂಮಿಗೆ ಕೀರ್ತಿ ತಂದ ಯಲಿವಾಳ ಸಿದ್ಧಯ್ಯಸ್ವಾಮಿಯವರ ಮಾರ್ಗದರ್ಶನದಲ್ಲಿ ಬಳ್ಳಾರಿ ಜಿಲ್ಲೆಯ ನಾಟಕ ಕಲಾವಿದರೆಲ್ಲರೂ ಮುನ್ನಡೆಯುತ್ತಿದ್ದೇವೆ ಅದಕ್ಕಿಂತ ಮಿಗಿಲಾಗಿ  ಇಂದು ವೀರ ಅಶ್ವತ್ಥಾಮನ ಪಾತ್ರದಲ್ಲಿ ಅಭಿನಯಿಸಿದ ತಿಮ್ಮನಗೌಡರ ವಾಚಿಕ, ಸಾತ್ವಿಕ, ಆಂಗಿಕಾಭಿನಯ  ಯುವ ಕಲಾವಿದರಿಗೆ ದಾರಿದೀಪವಾಗಬೇಕು, ನಮ್ಮ ಅಭಿನಯ ಕಲಾಕೇಂದ್ರದ ನಾಟಕಗಳಲ್ಲಿ ಅಭಿನಯಸಿದ ಜ್ಯೋತಿ, ವೀಣಾ, ಚಿಲಾರ್ ಸಾಬ್, ಅಮರೇಶ, ಮಹೇಶ್, ಗಂಗಾಧರ ಅಭಿನಂದನ ಅರ್ಹರು  ಇತ್ತೀಚೆಗೆ ಶಕುನಿ ಪಾತ್ರದಲ್ಲಿ ಜನಪ್ರಿಯರಾಗಿರುವ ಪ್ರಕಾಶ್ ಕುದಾಪುರ, ಪ್ರಥಮ ಬಾರಿಗೆ ಕೃಷ್ಣನ ಪಾತ್ರವಹಿಸಿದ ತಿಪ್ಪೇರುದ್ರಪ್ಪ  ಅವರು ಶಕ್ತಿಮೀರಿ ಪಾತ್ರಕ್ಕೆ ಕಳೆ ತುಂಬಿದ್ದಾರೆ, ನೃತ್ಯಗಾರ್ತಿಯಾಗಿ ಜನಪ್ರಿಯವಾಗಿರುವ ಮೌನೇಶ್, ಜಡೆಪ್ಪ, ಶಿವರುದ್ರಯ್ಯ ಸ್ವಾಮಿ ಇವರೆಲ್ಲರನ್ನು ಇಂದು ಒಟ್ಟಾಗಿ ಕಾಣುವ ಅವಕಾಶ ಸಿಕ್ಕಿತು. ನೇಪಥ್ಯ ಕಲಾವಿದರಾದ ನಾಡಂಗ ಬಸವರಾಜರ ಅಕಾಲಿಕ ಮರಣದ ನಂತರ ಅವರ ಸ್ಥಾನವನ್ನು ತುಂಬುವ ಸಾಮರ್ಥ್ಯವುಳ್ಳ ಶ್ರಮಜೀವಿ ಜವಳಗೇರ ಬಸಯ್ಯಸ್ವಾಮಿಯವರು ಇಂದು ಪಾತ್ರ ಮಾಡುವುದರ ಜೊತೆಗೆ ರಂಗಸಜ್ಜಿಕೆಯನ್ನು ನಿರ್ವಹಿಸಿದರು.


 ಒಟ್ಟಿನಲ್ಲಿ ಇವರೆಲ್ಲರೂ ಸಹಕಾರದಿಂದ ಇಂದು ದುರ್ಯೋಧನನ ಗರ್ವಭಂಗ ಅರ್ಥಾತ್ ರೌದ್ರ ಬೀಮನ ಹಟ್ಟಹಾಸ ಎಂಬ ಪೌರಾಣಿಕ ನಾಟಕ ದುರ್ಗಾ ಕಾಲೋನಿಯ ಜನರ ಮನಸೂರೆಗೊಂಡಿತು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ