ಹುನಗುಂದ: ತಾಲೂಕಿನ ಇದ್ದಲಗಿ ಗ್ರಾಮದ ಮುಳಗಡೆ ಸಂತ್ರಸ್ತರು ಶಿಥಿಲಗೊಂಡ ಶೆಡ್ ಪುನರ್ ನಿರ್ಮಾಣ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಡೆಸುತ್ತಿರುವ ಅನಿರ್ಧಷ್ಟಾವಧಿ ಧರಣಿಯ ೨೦ನೆ ದಿನ ಸೋಮವಾರವೂ ಮುಂದುವರೆಯಿತು.
ಸಂತ್ರಸ್ತರು ಶೆಡ್ ಪುನರ ನಿರ್ಮಾಣ ಮಾಡಲು ಸರ್ಕಾರ ಮತ್ತು ಇಲಾಖೆಯ ಸಹಭಾಗಿತ್ವದಲ್ಲಿ ಎನ್‌ಜಿಓ ಮುಖಾಂತರ ಸಿಎಸ್‌ಆರ್ ಫಂಡ್ ಪಡೆದುಕೊಂಡು ಸಂತ್ರಸ್ತರ ಶೆಡ್‌ಗಳ ನಿರ್ಮಾಣ ಕಾರ್ಯಕ್ಕೆ ಸರ್ಕಾರ ಮತ್ತು ಇಲಾಖೆಗಳು ಮುಂದಾಗಲು ಸಂತ್ರಸ್ತರಿಂದ ಮುಖ್ಯಮಂತ್ರಿಗಳಿಗೆ ಮತ್ತು ಇಲಾಖೆಯ ಅಧಿಕಾರಿಗಳಿಗೆ ಮಂಗಳವಾರ ಮನವಿ ಸಲ್ಲಿಸಲಿದ್ದಾರೆ.
ಈ ಸಂದರ್ಭದಲ್ಲಿ ಭೀಮಪ್ಪ ಆಡಿಹಾಳ, ಕಲ್ಲಪ್ಪ ಆನೆಹೊಸೂರ, ಶರಣಪ್ಪ ಮುಳ್ಳೂರ, ಬಸವರಾಜ ಮುಳ್ಳೂರ, ಹಬೀಸಾಬ ಮುಲ್ಲಾ, ಹನಮಂತ ಹಡಪದ, ಮಲ್ಲಮ್ಮ ಗಡ್ಡಿಮಠ, ಮುತ್ತವ್ವ ಬೇನಾಳ, ಮಹಾದೇವಿ ತೋಟಗೇರಿ, ನೀಲಮ್ಮ ಮಾಗಿ, ಭೀಮವ್ವ ಬೇನಾಳ, ಸಂಗವ್ವ ಹಾವರಗಿ ಸೇರಿದಂತೆ ಇತರರಿದ್ದರು.
