Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವೀರಶೈವ ಬೇಡಿ ಜಂಗಮ ಸ್ವಾಮಿಗಳೇ, ಬುಡ್ಗ ಜಂಗಮರ ಅನ್ನವನ್ನು ಕಸಿದು ತಿನ್ನಬೇಡಿ : ಅಲೆಮಾರಿ ಸಂಘದ ಅಧ್ಯಕ್ಷ ಶಿವಕುಮಾರ್ 






 ಬಳ್ಳಾರಿ ಮೇ 12 : ರಾಜ್ಯ ಸರ್ಕಾರ ನಡೆಸುತ್ತಿರುವ 101 ಜಾತಿಗಳ ಪರಿಶಿಷ್ಟ ಜಾತಿಗಳಲ್ಲಿ ಅತ್ಯಂತ ಹಿಂದುಳಿದ  ಜಾತಿಗಳನ್ನು ಗುರುತಿಸುವ ಸಲುವಾಗಿ ಜಾತಿ ಜನಗಣತಿಯನ್ನು ಆರಂಭಿಸಲಾಗಿದೆ, ಸರ್ಕಾರದ ಈ ನಡೆ, ಸ್ವಾಗತಾರ್ಹ, ಆದರೆ ವೀರಶೈವ ಜಂಗಮರು ನಾವು ಸಹ ಬೇಡ ಜಂಗಮರೆಂದು ಉಪ ಜಾತಿ ಕಲಂ ನಲ್ಲಿ ಬರೆಸುತ್ತಿದ್ದಾರೆ. ಇದು ನಿಜವಾದ ಬೇಡ ಜಂಗಮರಾದ ನಮ್ಮ ಅನ್ನವನ್ನು ಕಸಿದ್ದು ತಿಂದಂತಾಗುತ್ತದೆ  ಬೇಡಿ ಜಂಗಮರು  ಸಮಾಜದಲ್ಲಿ ಮೇಲ್ವರ್ಗ ಜಾತಿ ಮತ್ತು ಸಮುದಾಯವಾದ ವೀರಶೈವ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಯಾವುದೇ ಕಾರಣಕ್ಕೂ ತಾವುಗಳು ಪರಿಶಿಷ್ಟ ಜಾತಿ ಬೇಡಿ ಜಂಗಮರೆಂದು ಜಾತಿ ಜನಗಣತಿಯಲ್ಲಿ ಬರೆಸಬಾರದು ಒಂದು ವೇಳೆ  ಜಂಗಮ ಸಮುದಾಯದ ಸ್ವಾಮಿಗಳು ಹೀಗೆ ಮಾಡಿದ್ದು ಕಂಡು ಬಂದಲ್ಲಿ ಬೇಡಿ ಅಥವಾ ಬುಡ್ಗ ಜಂಗಮರಾದ ನಾವು ಹೋರಾಟವನ್ನು ನಡೆಸಬೇಕಾಗುತ್ತದೆ ಎಂದು ಪರಿಶಿಷ್ಟ ಜಾತಿ ಅಲೆಮಾರಿ ಸಂಘದ ಬಳ್ಳಾರಿ ಜಿಲ್ಲಾಧ್ಯಕ್ಷ ಶಿವಕುಮಾರ್ ತಿಳಿಸಿದ್ದಾರೆ.


 ಅವರು ಮಾಧ್ಯಮ ಹೇಳಿಕೆಯನ್ನು ಬಿಡುಗಡೆಗೊಳಿಸಿ, ಬೇಡಿ ಜಂಗಮರು ಮೇಲ್ವರ್ಗ ಜಾತಿ  ಮತ್ತು ಸಮುದಾಯಕ್ಕೆ ಸೇರಿದವರಾಗಿದ್ದು ಇವರು ದೇವಸ್ಥಾನಗಳಲ್ಲಿ ಅರ್ಚಕ ಸೇವೆಯನ್ನು ಮಾಡುತ್ತಾ ದಲಿತ, ಹಿಂದುಳಿದ ವರ್ಗದವರಿಂದ ಪಾದಗಳನ್ನು ತೊಳೆಸಿಕೊಂಡು ಪಾದಪೂಜೆಯನ್ನು ಮಾಡಿಸಿಕೊಳ್ಳುತ್ತಾರೆ ಹೀಗೆ ಉನ್ನತ ಜಾತಿ ಜನಾಂಗಕ್ಕೆ ಸೇರಿದ ಬೇಡಿ ಜಂಗಮ ಜನಾಂಗದವರು ನಾವು ಸಹ ಪರಿಶಿಷ್ಟ ಜಾತಿ ಎಂದು ಹೇಳಿಕೊಳ್ಳುವುದು ಹಾಸ್ಯಾಸ್ಪದವಾಗಿದೆ, ನಾಗಮೋಹನ್ ದಾಸ್ ಅವರ ವರದಿಯಲ್ಲಿ ಹೀಗಿರುವ 101 ಪರಿಶಿಷ್ಟ ಜಾತಿಯಲ್ಲಿ ಉಪಜಾತಿಗಳನ್ನು  ಗುರುತಿಸಲು ಸರ್ವೇ ಕಾರ್ಯ ನಡೆಯುತ್ತಿದೆ ಯಾವುದೇ ಕಾರಣಕ್ಕೂ ಅನ್ಯ ಜಾತಿಯವರನ್ನು ಜಾತಿ ಜನಗಣತಿಯಲ್ಲಿ ಸೇರಿಸಬಾರದು ಎಂದು

ಸ್ಪಷ್ಟವಾಗಿ ತಿಳಿಸಲಾಗಿದೆ. ಅಷ್ಟೇ ಅಲ್ಲದೆ ಇತ್ತೀಚೆಗೆ ಮೇ 8ರಂದು  ಸರ್ಕಾರ ಬಿಡುಗಡೆಗೊಳಿಸಿದ ಆದೇಶದಲ್ಲಿ ಪರಿಶಿಷ್ಟ ಜಾತಿ ಜನಗಣತಿಯನ್ನು ಕಟ್ಟುನಿಟ್ಟಾಗಿ ನಡೆಸಿ ಯಾವುದೇ ಕಾರಣಕ್ಕೂ  ಉನ್ನತ ಜಾತಿಯವರನ್ನು ಸೇರಿಸಬೇಡಿ ಒಂದು ವೇಳೆ ಹೀಗೆ ಲೋಪವಾಗಿದ್ದು ಕಂಡಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಲಾಗಿದೆ. ಆದರೂ ಸಹ ವೀರಶೈವ ಬೇಡಿ ಜಂಗಮರು ವೀರಶೈವ ಜಂಗಮ ಸಮುದಾಯಕ್ಕೆ ಸೇರಿದ್ದರು ಕೇವಲ ಮೀಸಲಾತಿಗಾಗಿ  ಪರಿಶಿಷ್ಟ ಜಾತಿಯಲ್ಲಿ  ತಮ್ಮ ಜಾತಿಯನ್ನು ಸೇರಿಸಲು ಯತ್ನಿಸುತ್ತಿದ್ದಾರೆ ಇದು ಅತ್ಯಂತ ಅಪರಾಧ ಕೃತ್ಯವಾಗಿದೆ. ಯಾವುದೇ ಕಾರಣಕ್ಕೂ ಈ  ವೀರಶೈವ ಬೇಡಿ  ಜಂಗಮರನ್ನು ಪರಿಶಿಷ್ಟ ಜಾತಿಯಲ್ಲಿ ಸೇರಿಸಬಾರದು ಎಂದು ಜಿಲ್ಲಾಧಿಕಾರಿಗಳು ತಹಸಿಲ್ದಾರರು ಮತ್ತು ಸರ್ವೆ ಕಾರ್ಯ ನಡೆಸುತ್ತಿರುವ ಸಿಬ್ಬಂದಿಗಳಲ್ಲಿ ಶಿವಕುಮಾರ್ ಮನವಿ ಮಾಡಿದ್ದಾರೆ.








Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ