Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವಚನಗಳು ಸಮಾಜದ ದಿಕ್ಸೂಚಿ : ಎನ್. ಎಸ್. ವೇಣುಗೋಪಾಲ್

 ಬಳ್ಳಾರಿ 12..ನಗರದ ರಾಷ್ಟ್ರೀಯ ಬಸವದಳದಲ್ಲಿ ದಿನಾಂಕ 11.06.2025 ರಂದು ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ವತಿಯಿಂದ ಇತ್ತೀಚಿಗೆ ನಿಧನರಾದ ಖ್ಯಾತ ಲೆಕ್ಕಪರಿಶೋಧಕರಾದ ಶ್ರೀಯುತ ಟಿ.ಸಿ.ಗೌಡ ರವರ ಸ್ಮರಣೆ ಮತ್ತು ಅವರು ತಮ್ಮ ಶ್ರೀಮತಿ ಹೆಸರಿನಲ್ಲಿ ನೀಡಿದ ದತ್ತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು .


       ಕಾರ್ಯಕ್ರಮವನ್ನು ಉದ್ಘಾಟಿಸಿದ ಕುರುಗೋಡು ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಎನ್. ಎಸ್. ವೇಣುಗೋಪಾಲ್ ಸರ್ ಅವರು ತಮ್ಮ ಉದ್ಘಾಟನಾ ನುಡಿಯಲ್ಲಿ ವಚನಗಳು ಸರ್ವಕಾಲಿಕ ಮನುಷ್ಯನ ವ್ಯಕ್ತಿತ್ವವನ್ನು ಪರಿಪೂರ್ಣಗೊಳಿಸುವುದರಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ, ಜನಸಾಮಾನ್ಯರ ಬದುಕನ್ನು ಕಟ್ಟಿಕೊಡುವಲ್ಲಿ ವಚನಗಳು ಸಹಕಾರವಾಗಿವೆ ಎಂದು ತಮ್ಮ ಉದ್ಘಾಟನಾ ನುಡಿಯಲ್ಲಿ ನುಡಿದರು .


   ದತ್ತಿ ಉಪನ್ಯಾಸವನ್ನು ನೀಡಿದ ರಾಷ್ಟ್ರೀಯ ಬಸವದಳದ ಪ್ರಧಾನ ಕಾರ್ಯದರ್ಶಿಯಾದ ಶರಣೆ ವಚನಾಂಬಿಕೆಯವರು ವಚನ ಸಾಹಿತ್ಯದಲ್ಲಿ ಸಾಮಾಜಿಕ ಮೌಲ್ಯಗಳು ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು ಅವರು ತಮ್ಮ ಉಪನ್ಯಾಸದಲ್ಲಿ 12ನೇ ಶತಮಾನದ ವಚನಗಳು ಇಂದಿಗೂ ಪ್ರಸ್ತುತ. ವಚನಗಳು ಸಮಾಜದ ಬದಲಾವಣೆಗೆ ಪೂರಕವಾಗಿವೆ  ಪ್ರತಿಯೊಬ್ಬ ಮನುಷ್ಯನ ಜೀವನದ ಪಥವನ್ನು ಬದಲಿಸುವ ಶಕ್ತಿ ವಚನಗಳಿವೆ ಜನಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ವಚನ ರಚನಕಾರರು ರಚಿಸಿರುವುದನ್ನು ನಾವು ಕಾಣುತ್ತೇವೆ ಎಂದು ತಮ್ಮ ಉಪನ್ಯಾಸದಲ್ಲಿ ತಿಳಿಸಿದರು.


 ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಡಾ. ನಿಷ್ಟಿ ರುದ್ರಪ್ಪ ರವರು ಲಿಂ. ಶ್ರೀಯುತ ಟಿಸಿ ಗೌಡ ರವರ ಸ್ಮರಣೆ ಮಾಡುತ್ತಾ ಇತ್ತೀಚಿಗೆ ನಿಧನರಾದ ಟಿಸಿ ಗೌಡರವರು ಪ್ರಾಮಾಣಿಕ ಮತ್ತು ನಿಷ್ಠುರವಾದ ವ್ಯಕ್ತಿಯಾಗಿದ್ದರು ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಪ್ರೀತಿ ಇವರಿಗಿತ್ತು. ಸಮಾಜದ ಬಗ್ಗೆ ಕಾಳಜಿ ಉಳ್ಳವರಾಗಿದ್ದರು ಎಲ್ಲರಿಗೂ ಸದಾ ಒಳಿತನ್ನು ಬಯಸುವ ಗುಣ ಅವರದಾಗಿತ್ತು ಬುದ್ಧಿವಂತ ಲೆಕ್ಕಪರಿಶೋಧಕರಾಗಿದ್ದ ಇವರು ಕಾಯಕವೇ ಕೈಲಾಸ ಎನ್ನುವ ಹಾಗೆ ಶರಣ ಸಿದ್ದಾಂತಗಳನ್ನು ಮೈಗೂಡಿಸಿಕೊಂಡಿದ್ದರು ಇಂಥವರ ಅಗಲಿಕೆ ಬಳ್ಳಾರಿಗೆ ತುಂಬಾ ನಷ್ಟವನ್ನುಂಟು ಮಾಡಿದೆ ಎಂದು ಅಗಲಿದ ಟಿ.ಸಿ ಗೌಡರವರನ್ನು ಸ್ಮರಿಸಿದರು.


 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದತ್ತಿದಾನಿಗಳ ಪುತ್ರರಾದ ಟಿ. ವಿರೂಪಾಕ್ಷ ಗೌಡರು ಮತ್ತು ಟಿ. ಸಿ.ಮಂಜುನಾಥ್ ಗೌಡ ರವರು ಉಪಸ್ಥಿತರಿದ್ದರು . ಜೊತೆಗೆ ಶರಣ ಜಿ. ಆರ್. ನಾಗರಾಜ್, ಜಿ ಗುರುಲಿಂಗಪ್ಪ,ಬಿ ಹನುಮಂತರಾವ್, ಪರಿಷತ್ತಿನ ಮಹಿಳಾ ಪ್ರತಿನಿಧಿ  ಭಾಗ್ಯಲಕ್ಷ್ಮಿ ಜೆ ಟೀ ಮಲ್ಲಿಕಾರ್ಜುನ ಉಪಸ್ಥಿತರಿದ್ದರು


 ಈ ಸಂದರ್ಭದಲ್ಲಿ ಖ್ಯಾತ ಗಾಯಕರಾದ ಶ್ರೀಯುತ ರಾಘವೇಂದ್ರ ಗುಡದೂರು, ಮತ್ತು ವಿಜಯೇಂದ್ರ ಕ್ಷತ್ರಿಯ ರವರು ವಚನ ಗಾಯನ ಮಾಡಿದರು.


 ಕಾರ್ಯಕ್ರಮದ ಪ್ರಾರಂಭದಲ್ಲಿ ವಿಜೇಂದ್ರ ರವರು ಪ್ರಾರ್ಥನೆಯನ್ನು ನೆರವೇರಿಸಿದರು ಕಾರ್ಯಕ್ರಮದ ಗಣ್ಯಮಾನ್ಯರನ್ನು ತಾಲೂಕು ಘಟಕದ ಮಹಿಳಾ ಪ್ರತಿನಿಧಿ ಭಾಗ್ಯಲಕ್ಷ್ಮಿ ಯವರು ಸ್ವಾಗತಿಸಿದರು ತಾಲೂಕು ಘಟಕದ ಅಧ್ಯಕ್ಷರಾದ ನಾಗರೆಡ್ಡಿ ಕೆ. ವಿ. ರವರು  ಪ್ರಾಸ್ತಾವಿಕ ನುಡಿಯಲ್ಲಿ ದತ್ತಿ ದಾನದ ಮಹತ್ವ ತಿಳಿಸುತ್ತಾ ರಾಜ್ಯದಲ್ಲಿಯೇ ಹೆಚ್ಚು ದತ್ತಿಗಳನ್ನು ಸಂಗ್ರಹಿಸಿದ ಜಿಲ್ಲೆ ಬಳ್ಳಾರಿ ಎಂದು ತಿಳಿಸಿದರು, ಇದೆ ರೀತಿ ದಾನಿಗಳು ಮುಂದೆ ಬಂದು ಇಚ್ಛೆಯುಳ್ಳವರು ತಮ್ಮ ಕುಟುಂಬದವರ ಹೆಸರಿನಲ್ಲಿ ದತ್ತಿ ದಾನವನ್ನು  ಮಾಡಿ ಎಂದು ತಿಳಿಸಿದರು. ಮಾಜಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಚ್ ಹಂಪನಗೌಡರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು ಕಾರ್ಯಕ್ರಮದಲ್ಲಿ ದತ್ತಿದಾನಿಗಳ ಮಕ್ಕಳು ಮತ್ತು ಕುಟುಂಬಸ್ಥರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. ತಾಲೂಕು ಘಟಕದ ಅಧ್ಯಕ್ಷರಾದ ನಾಗರೆಡ್ಡಿ  ಕಾರ್ಯಕ್ರಮವನ್ನು ನಿರೂಪಿಸಿದರು, ಸಂಘಟನಾ ಕಾರ್ಯದರ್ಶಿಗಳಾದ ಟಿ.ಮಲ್ಲಿಕಾರ್ಜುನ ರವರು ಕೊನೆಗೆ ವಂದಿಸಿದರು
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ