LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ವಸುದೇವ ಕುಟುಂಬ ಇದು ಸ್ಟಾರ್ ಸುವರ್ಣದ ಹೊಸ ಧಾರಾವಾಹಿ 


     ವೀಕ್ಷಕರಿಗೆ ವಿಭಿನ್ನ ಕಥೆಗಳನ್ನು ನೀಡುತ್ತಿರುವ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಈಗ 'ವಸುದೇವ ಕುಟುಂಬ' ಎಂಬ ಹೊಸ ಧಾರಾವಾಹಿಯು ಬಿತ್ತರಗೊಳ್ಳಲು ಸಿದ್ದಗೊಂಡಿದೆ.

     ಕೋರಮಂಗಲ ಟಾಕೀಸ್ ಸಂಸ್ಥೆಯಡಿ ಅನಿಲ್ ಕೋರಮಂಗಲ 'ವಸುದೇವ ಕುಟುಂಬ' ನಿರ್ಮಾಣ ಮತ್ತು ನಿರ್ದೇಶನದ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.

ಶೀರ್ಷಿಕೆಗೆ ’ಒಂದೇ ಬೇರು, ಕವಲು ನೂರು’ ಎಂಬ ಅರ್ಥಪೂರ್ಣ ಅಡಿಬರಹವಿದೆ.

       ಸೀರಿಯಲ್ ಮುಖ್ಯ ಆಕರ್ಷಣೆ ಎಂದರೆ ಹಿರಿಯ ನಟ ಅವಿನಾಶ್. ಬರೋಬ್ಬರಿ ಮೂವತ್ತು ವರ್ಷಗಳ ನಂತರ ಕಿರುತೆರೆಗೆ  ಸ್ಟಾರ್ ಸುವರ್ಣ ವಾಹಿನಿ ಮೂಲಕ ಪಾದಾರ್ಪಣೆ ಮಾಡಿದ್ದಾರೆ. ಕುಟುಂಬದ ಯಜಮಾನ ವಸುದೇವ, ಹಾಗೂ ಮುದ್ದಿನ ನಾಲ್ಕು ಹೆಣ್ಣು ಮಕ್ಕಳ ತಂದೆಯಾಗಿ ಅಭಿನಯಿಸುತ್ತಿದ್ದಾರೆ. ಪತ್ನಿಯಾಗಿ ಹಿರಿಯ ನಟಿ ಅಂಜಲಿ. ಪುತ್ರಿಯರಾಗಿ ಭಾವನಾ ಪಾಟೀಲ್, ಚೈತ್ರಾತೋಟದ್, ಬೃಂದಾ ಕಶ್ಯಪ್, ಆರಾಧ್ಯ ಇವರೊಂದಿಗೆ ಹಂಸ, ಭಗತ್, ಆರ್.ಜಿ.ಅನೂಪ ಸೇರಿದಂತೆ ಅನೇಕ ಅನುಭವಿ ಕಲಾವಿದರು ನಟಿಸುತ್ತಿದ್ದಾರೆ.

      ಹಳ್ಳಿಯಲ್ಲಿ ವಸುದೇವನ ಹಿರಿಮಗಳ ಮದುವೆ ಸಿದ್ದತೆ ಸಂಭ್ರಮದಲ್ಲಿದ್ದಾಗ, ಆಕಸ್ಮಿಕವಾಗಿ ಸಂಭವಿಸುವ ಒಂದು ದುರ್ಘಟನೆ ಎಲ್ಲರ ಜೀವನವನ್ನು ತಲೆಕೆಳಗಾಗುವಂತೆ ಮಾಡುತ್ತದೆ. ಇದರಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಾರೆ. ಇಂತಹ ಕಷ್ಟದ ಸಮಯದಲ್ಲಿ ಕಥಾನಾಯಕಿ ಸ್ವಾತಿ, ತನ್ನ ತಾಳ್ಮೆ ಮತ್ತು ಧೈರ್ಯದಿಂದ ತಾಯಿ, ಅಕ್ಕ ತಂಗಿಯರಿಗೆ ಹೇಗೆ ಆಧಾರವಾಗಿ ನಿಲ್ಲುತ್ತಾಳೆ? ತನ್ನ ದುಖ:ವನ್ನು ಮರೆತು ಮನೆಯ ಬದುಕನ್ನು ಮತ್ತೆ ಕಟ್ಟುವಲ್ಲಿ ಅವಳು ಯಶಸ್ವಿಯಾಗುತ್ತಾಳಾ? ಮನೆತನದ ಮಾನ ಗೌರವವನ್ನು ಯಾವ ರೀತಿ ಕಾಪಾಡುತ್ತಾಳೆ ಎಂಬುದು ಕಥೆಯ ಮುಖ್ಯ ಸಾರಾಂಶವಾಗಿದೆ.

       ಇದೇ ಸೆಪ್ಟೆಂಬರ್ 15, ಸೋಮವಾರದಿಂದ ಪ್ರತಿದಿನ ರಾತ್ರಿ 8.30ಕ್ಕೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ

'ವಸುದೇವ ಕುಟುಂಬ' ಹೊಸ ಧಾರಾವಾಹಿ  ಪ್ರಸಾರವಾಗಲಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸ್ವಚ್ಛತೆಯೇ ಸೇವೆ-2026' ಅಭಿಯಾನ ಆರಂಭ: ಸಾರ್ವಜನಿಕರ ಸಹಭಾಗಿತ್ವಕ್ಕೆ ಕರೆಸ್ವಚ್ಛತೆಯೇ ಸೇವೆ-2026' ಅಭಿಯಾನ ಆರಂಭ: ಸಾರ್ವಜನಿಕರ ಸಹಭಾಗಿತ್ವಕ್ಕೆ ಕರೆವಿ.ಶ್ರೀ.ಕೃ. ವಿಶ್ವವಿದ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ: ಅಭಿವೃದ್ಧಿಗೆ ಎಲ್ಲರ ಸಹಭಾಗಿತ್ವ ಅಗತ್ಯಕರಕುಶಲತೆಯ ಜೊತೆ ಶಿಕ್ಷಣವೂ ಅನಿವಾರ್ಯ: ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜತಾಳಿಕೋಟೆ ತಾಲೂಕು ಕೂಡ ಶೀಘ್ರ ಬರಪೀಡಿತ ಪಟ್ಟಿಗೆ : ಶಾಸಕ ನಾಡಗೌಡತೇರದಾಳ ಹಾಗೂ ರಬಕವಿ /ಬನಹಟ್ಟಿ ತಾಲೂಕುಗಳು ಬರಗಾಲ ಪಟ್ಟಿಗೆ, ಸಿಎಂ ಡಿಕೆ ಶಿವಕುಮಾರ್ ಅವರಿಗೆ ಅಭಿನಂದನೆ.ರೋಗಿಗಳಿಗೆ ಹಾಲುಹಣ್ಣು ವಿತರಿಸಿ ಬಿಜೆಪಿ ಕಾರ್ಯಕರ್ತರಿಂದ ’ಸೇವಾ ಸಂಕಲ್ಪಹಕ್ಕುಪತ್ರ ಪಡೆದ ಫಲಾನುಭವಿಗಳಿಗೆ ಫಾರಂ-2 ಇ-ಖಾತಾ ಮಾಡಿಕೊಡಲು ಆಗ್ರಹಸೆ.20ರಂದು ಬಳ್ಳಾರಿಯಲ್ಲಿ ಹಿಂದೂ ಮಹಾ ಗಣಪತಿ ಭವ್ಯ ಶೋಭಾಯಾತ್ರೆಜನರ ಮನೆ ಬಾಗಿಲಿಗೆ ಸರ್ಕಾರದ ಸೇವೆ ಸಿಎಂ ಕನಸು; ಜನರಿಗೆ ತೊಂದರೆ ನೀಡಿದರೆ ಕ್ರಮ: ನಾರಾ ಭರತ್ ರೆಡ್ಡಿ