Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವಚನ ಸಾಹಿತ್ಯ ಕನ್ನಡದ ಹೆಮ್ಮೆ:  ಶಂಕರ ಸೋಮಪ್ಪ ಬೋಳಣ್ಣವರ






ಬೈಲಹೊಂಗಲ: ಬದುಕಿನ ಮೌಲ್ಯಗಳನ್ನು ಬಿಂಬಿಸುವ 12 ನೆಯ ಶತಮಾನದ ವಚನ ಸಾಹಿತ್ಯ ಕನ್ನಡದ ಹೆಮ್ಮೆ ಎಂದು ನೇಗಿಲಯೋಗಿ ರೈತ ಪರಿಶ್ರಮ ಸೇವಾ ಸಂಘದ ರಾಜ್ಯಾಧ್ಯಕ್ಷರಾದ ಶಂಕರ ಸೋಮಪ್ಪ ಬೋಳಣ್ಣವರ ಹೇಳಿದರು. ಪಟ್ಟಣದ ಚನ್ನಮ್ಮ ಸಮಾಧಿ ರಸ್ತೆಯಲ್ಲಿರುವ ಗಣಾಚಾರಿ ಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯೋತ್ಸವದ ನಿಮಿತ್ತವಾಗಿ ಬಸವ ದಿನಚರಿ ಲೋಕಾರ್ಪಣೆ ಹಾಗೂ ರಾಜ್ಯಮಟ್ಟದ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು. ನುಡಿದಂತೆ ನಡೆದು ತೋರಿಸಿ ಜಗತ್ತಿಗೆ ಮಾನವೀಯತೆಯನ್ನು ಸಾರಿ ಹೇಳಿದ ಮಹಾನ್ ದಾರ್ಶನಿಕ ಬಸವಣ್ಣ ಎಲ್ಲ ಕವಿಗಳಿಗೆ ಸ್ಪೂರ್ತಿಯಿದ್ದಂತೆ ಎಂದು ಅವರು ಅಭಿಪ್ರಾಯಪಟ್ಟರು. ಸರಳ ಭಾಷೆಯಲ್ಲಿ ಅದ್ಭುತ ಅರ್ಥ ಕೊಡುವ ಕವಿತೆಗಳು ಜನರ ಹೃದಯಕ್ಕೆ ಹತ್ತಿರವಾಗಬಲ್ಲವು ಎಂದು ಅವರು ಹೇಳಿದರು.


ರಾಜ್ಯಮಟ್ಟದ ಕವಿಗೋಷ್ಠಿಯ ಮುಖ್ಯ ಸಂಯೋಜಕರು, ಬಸವ ಸಮಿತಿಯ ಕಾರ್ಯಕಾರಿ ಸಮಿತಿಯ ಹಿರಿಯ ಸದಸ್ಯರಾದ ಮೋಹನ ಬಸನಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ ಉತ್ತಮ ದೂರದೃಷ್ಟಿಯನ್ನಿಟ್ಟುಕೊಂಡು ಮಾಜಿ ರಾಷ್ಟ್ರಪತಿಗಳಾದ ಡಾ. ಬಿ.ಡಿ ಜತ್ತಿಯವರಿಂದ 1964 ರಲ್ಲಿ  ಸ್ಥಾಪನೆಯಾದ ಬಸವ ಸಮಿತಿ ವಚನ ಸಾಹಿತ್ಯ, ಶರಣ ತತ್ವಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕಾಯಕ ಮಾಡುತ್ತಿರುವುದು ಅಭಿಮಾನದ ಸಂಗತಿ ಎಂದರು. ರಾಜ್ಯದ ವಿವಿಧೆಡೆಯಿಂದ ಆಗಮಿಸಿ ಕವಿಗೋಷ್ಠಿಯಲ್ಲಿ ಸಕ್ರಿಯವಾಗಿ ಭಾಗಿಯಾದ  ಕವಿಗಳ ಉತ್ಸಾಹ ಮೆಚ್ಚುವಂತದ್ದು ಎಂದು ಅವರು ಹೇಳಿದರು. ಕರ್ನಾಟಕ ಸಾಹಿತ್ಯ ಪರಿಷತ್ತಿನ ಬೈಲಹೊಂಗಲ ತಾಲೂಕು ಘಟಕದ ಮಾಜಿ ಅಧ್ಯಕ್ಷರಾದ ಇಬ್ರಾಹಿಮ್ ಮುಲ್ಲಾ ಮಾತನಾಡಿ ಉದಯೋನ್ಮುಖ ಕವಿಗಳು ಸಾಕಷ್ಟು ಅಧ್ಯಯನ ಮಾಡುವುದರಿಂದ ಉತ್ತಮ ಸಾಹಿತ್ಯ ರಚನೆಯಾಗುತ್ತದೆ ಎಂದರು. ಸಾವಿರಾರು ವರ್ಷಗಳ ಇತಿಹಾಸ ಮತ್ತು ಸ್ವಂತ ಲಿಪಿ ಹೊಂದಿದೆ ಕನ್ನಡ ಭಾಷೆಯ ಬಗ್ಗೆ ಎಲ್ಲರಿಗೂ ಅಭಿಮಾನ ಇರಬೇಕು ಎಂದು ಅವರು ಹೇಳಿದರು.


ಮುಖ್ಯ ಅತಿಥಿಗಳಾಗಿ ಆಗಮಿಸಿದ ಮೇಕಲಮರಡಿ ಗ್ರಾಮದ ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷರಾದ ಕಾಶಿಮಸಾಬ ಜಮಾದಾರ ಮಾತನಾಡಿ ಮುಂದಿನ ರಾಜ್ಯೋತ್ಸವದ ಅಚರಣೆಯಲ್ಲಿ ಕವಿಗಳಿಗೆ ವಿಶೇಷ ವೇದಿಕೆ ಕಲ್ಪಿಸಿ ಪ್ರೋತ್ಸಾಹ ನೀಡಲಾಗುವುದು ಎಂದರು. ಕನ್ನಡದಲ್ಲಿ ಇನ್ನಷ್ಟು ಶ್ರೇಷ್ಟ ಸಾಹಿತ್ಯ ರಚನೆಯಾಗಲಿ ಎಂದು ಅವರು ಅಭಿಪ್ರಾಯಪಟ್ಟರು


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬೈಲಹೊಂಗಲ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎನ್.ಆರ್. ಠಕ್ಕಾಯಿ ಕವಿಗಳಿಗೆ ಕಲ್ಪನಾ ಶಕ್ತಿಯ ಜೊತೆಗೆ ವಾಸ್ತವದ ಅರಿವು ಕೂಡ ಅಗತ್ಯ ಎಂದರು. ಬದುಕಿನ ಎಲ್ಲ ಅನುಭವಗಳನ್ನು ಸಮಚಿತ್ತದಿಂದ ಆಸ್ವಾದಿಸುವ ಗುಣವಿರುವ ಕವಿ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕಾವ್ಯ ಸೃಷ್ಟಿಸಬಲ್ಲ ಎಂದು ಅವರು ಅಭಿಪ್ರಾಯಪಟ್ಟರು.


ಕಾರ್ಯಕ್ರಮದಲ್ಲಿ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿದ್ಯಾವಿಷಯತ್ ಸದಸ್ಯರಾದ ಡಾ.ಚಂದ್ರಶೇಖರ ಗಣಾಚಾರಿ,  ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬೆಳಗಾವಿ ಜಿಲ್ಲಾ ಘಟಕದ ಕಾರ್ಯದರ್ಶಿಗಳಾದ ರವಿಕುಮಾರ ಹುಲಕುಂದ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಬೈಲಹೊಂಗಲ ತಾಲೂಕು ಘಟಕದ ಉಪಾಧ್ಯಕ್ಷರಾದ ಶ್ರೀಶೈಲ ಉಳವಪ್ಪ ಶರಣಪ್ಪನವರ(ಯಲ್ಲಪ್ಪಗೌಡ್ರ), ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸವದತ್ತಿ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಕೋಳಿ, ಪ್ರಗತಿಪರ ಕೃಷಿಕರಾದ  ಬಸವರಾಜ ಮಲ್ಲಪ್ಪ ಜಂಬಗಿ, ಮಹಾಂತೇಶ ಶಿವಪುತ್ರಪ್ಪ ಬೋಳಣ್ಣವರ, ಅನಿಲ ಉಳವಪ್ಪ ಗೀರನವರ, ಅದೃಶಪ್ಪ ಮಹಾರುದ್ರಪ್ಪ ಹುಚ್ಚನವರ, ಯರಗಟ್ಟಿ  ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ರಮೇಶ ಗುರುಸಿದ್ದಪ್ಪ ಯರಗಟ್ಟಿ, ಉದಯವಾಣಿ ಪತ್ರಿಕೆಯ ತಾಲೂಕು ವರದಿಗಾರರಾದ ಮಹಮ್ಮದ ಯೂನಸ ರಫೀಕ ಬಡೆಘರ ಮುಖ್ಯ ಅತಿಥಿಗಳಾಗಿ ಅಗಮಿಸಿದ್ದರು.


ರಾಜ್ಯದ ನಾನಾ ಕಡೆಗಳಿಂದ ಆಗಮಿಸಿದ ಕವಿ- ಕವಯತ್ರಿಯರಾದ ಕನಕರಾಯ ಬುಕ್ಕನಹಟ್ಟಿ,  ಮನು ಗುರುಸ್ವಾಮಿ,ರಾಜು ಅಪ್ಪಾಸಾಬ ನಾಯಿಕ, ವಿಜಯ ಸಕ್ರಿ, ಗಾಯತ್ರಿ ಮಹಾದೇವ ಗುರವ, ಶಿವಲೀಲಾ ಶಿವಮೂರ್ತಿ ಆರ್, ಶಂಕರಬಾಯಿ ನಿಂಬಾಳಕರ, ಚಂದ್ರಶೇಖರ ಬಸವರಾಜ ಬಡಿಗೇರ,  ಚಂದ್ರಶೇಖರಯ್ಯ ಶಿವಯ್ಯ ಕಲ್ಮಠ, ಸರಸ್ವತಿ ಬನ್ನಿಗಿಡದ, ಅಭಿಷೇಕ ಶಂಕರಯ್ಯ ಮಠದ,  ಆರ್. ಶೈಲಜ (ಚಿತ್ರದುರ್ಗ), ಮಲ್ಲಿಕಾರ್ಜುನ ಯಾಳವಾರ,  ಮಲ್ಲಪ್ಪ ಈ. ಚಾಯಪ್ಪಗೋಳ, ಸಿದ್ದಪ್ಪ ನಿಂಗಪ್ಪ ರಾವಳ, ಮಹಾಂತೇಶ ಎಸ್. ಮುದಕನಗೌಡರ, ಚಂದ್ರಶೇಖರ ನಿಂಗಪ್ಪ ಚನ್ನಂಗಿ, ಮಧು ಚಂದ್ರಶೇಖರ ಚನ್ನಂಗಿ,ನಬಿಸಾಬ ಇಮಾಮಹುಸೇನ ಖುದ್ದುನವರ, ಭೀಮಸೇನ ಚಿಂಚಲಿ, ಶಿವಪುತ್ರ ಎಸ್. ಬಡಿಗೇರ, ಪವಿತ್ರಾ ನಾರಾಯಣ ಶಿಂಧೆ, ಬಸವರಾಜ ವಿ. ಪತ್ತಾರ, ಈರಣ್ಣ ಕಾಳಿಂಗಪ್ಪ ಜಾಡರ, ಮಹಾಂತೇಶ ಬಸಪ್ಪ ಬಾಳಿಗಟ್ಟಿ, ಶಂಕರೆಪ್ಪ ಮಲ್ಲಪ್ಪ ಹಳಂಗಳಿ, ಕೆ.ಟಿ. ಶಾಂತಮ್ಮ (ಚಿತ್ರದುರ್ಗ), ಶಿವಕುಮಾರ ಗುರುಬಸಪ್ಪ ಶಿವಶಿಂಪಿ,  ಕಲ್ಲಪ್ಪ ಬಾಳಪ್ಪ ಹರಿಜನ, ಯಶವಂತ ಭರಮಣ್ಣ ಉಚಗಾಂವಕರ, ರಾಧಿಕಾ ಸುರೇಶ ಮಾದಾರ, ಶೋಭಾ ಉಮೇಶ ಗದಗ,ಶಾಂತಾ ಕೆ. ಹೊಂಬಳ, ರೇಣುಕಾ ಸಂಗಪ್ಪನವರ, ಮಧುಕರ್ ಎಂ. (ಮಧುಚಂದನ),  ವಿರುಪಾಕ್ಷಿ ತಿ. ಕಮತೆ, ಗಣೇಶ ಶಂಕರ ಮೋಪಗಾರ, ಗುರುನಾಥ ಗುಡೆಣ್ಣವರ, ಸವಿತಾ ಬಸನಗೌಡ ಪಾಟೀಲ, ವಾಯ್.ಕೆ. ಕೊಣ್ಣೂರ, ವಿನೋದಾ ಪರಮನಾಯ್ಕರ, ವಿನಾಯಕ ಎನ್. ಬಡಿಗೇರ,ಕವಿತಾ ಅಣ್ಣಪ್ಪ ಮುನ್ನೊಳ್ಳಿ, ಅಶ್ವಿನಿ ಬಸವರಾಜ ಚಿಪ್ಪಲಕಟ್ಟಿ, ಸಂತೋಷ ರಮೇಶ ತಿಳಗಂಜಿ, ಭಾರತಿ ಯ. ಬಡಿಗೇರ, ಚಿನ್ನಪ್ಪಗೌಡ ಮ.ಪಾಟೀಲ, ನೇಹಾ ಶ್ರೀನಿವಾಸ ಬಡಿಗೇರ, ಈಶ್ವರ ಶಿದ್ದಪ್ಪ ಹಸಬಿ, ಬಸಪ್ಪ ಹೊ. ಶೀಗಿಹಳ್ಳಿ, ಆನಂದ ಯಲ್ಲಪ್ಪ ಕೊಂಡಗುರಿ, ಮೈಲಾರಪ್ಪ ನಿಂಗಪ್ಪ ಗೋವಣ್ಣವರ, ರಾಜಕುಮಾರ ಎಸ್. ಮಾಳೇದ, ವಿಠ್ಠಲ  ಚ. ತೋಟದ,  ಲಕ್ಷ್ಮಿ ಶಂಕರಯ್ಯ ಹಿರೇಮಠ, ವಿಜಯಲಕ್ಷ್ಮಿ ತಿರಕಣ್ಣವರ, ಮಹಾಂತೇಶ ಗೋವನಕೊಪ್ಪ, ಜಗದೀಶ ಧಾರವಾಡಕರ, ಶೈಲಜಾ ಎಂ.ಕೋರಿಶೆಟ್ಟರ, ಶೈಲಜಾ ಮ. ತಳವಾರ, ಫಕೀರಪ್ಪ ಬಿ. ಸೋಮಣ್ಣವರ, ಎ.ಬಿ. ಲಿಂಬಿಗಿಡದ, ಸುಶ್ಮಿತಾ ರಾಘವೇಂದ್ರ ಮರೇದ, ಲಕ್ಷ್ಮಿ ಶೇಖಪ್ಪ ನರೇಂದ್ರ, ಅಪ್ರೀನ್ ಬಾನು ಮುಸ್ತಫಾ ಮೋಖಾಶಿ, ಸಾಗರ ಚನ್ನಪ್ಪ ಹುನುಗುಂದ, ವೀರಣ್ಣ ಮಡಿವಾಳಪ್ಪ ಹೂಲಿ, ಉದಯಚಂದ್ರ ದಿಂಡವಾರ, ಪವಿತ್ರಾ ಈರಪ್ಪ ನರೇಂದ್ರ ಕವನ ವಾಚಿಸಿದರು.


ಗೋಕಾಕ ತಾಲೂಕು ಗೋಸಬಾಳ ಗ್ರಾಮದ ಸರಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಬಾಳೇಶ ಬಸವರಾಜ ಫಕ್ಕೀರಪ್ಪನವರ, ಮೂಡಲಗಿ ತಾಲೂಕಿನ ಹುಣಶ್ಯಾಳ ಪಿ.ವಾಯ್ ಗ್ರಾಮದ ಆರೂಢ ಜ್ಯೋತಿ ಚೈತನ್ಯ ಶಾಲೆಯ ಕೋಚಿಂಗ್ ವಿಭಾಗದ ಶಿಕ್ಷಕರಾದ ಶಿವಾನಂದ ಬಸನಾಯ್ಕ ಪಟ್ಟಿಹಾಳ ಕಾರ್ಯಕ್ರಮ ನಿರೂಪಿಸಿದರು. ಬೈಲಹೊಂಗಲ ಕನ್ನಡ ಜಾನಪದ ಪರಿಷತ್ತಿನ ತಾಲೂಕಾಧ್ಯಕ್ಷ ಚಂದ್ರಶೇಖರ ಕೊಪ್ಪದ ವಂದಿಸಿದರು.






Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ