ಬಳ್ಳಾರಿ, ಮೇ.7: ಜಿಲ್ಲೆಯ ಸಂಡೂರು ತಾಲೂಕಿನ ಸುಲ್ತಾನಾಪುರದಲ್ಲಿ ರಾತ್ರಿ ವೇಳೆ ಗ್ರಾಮದೊಳಗೆ ಎರಡು ಕರಡಿಗಳು ನುಗ್ಗಿವೆ.
ಗ್ರಾಮದ ಆಂಜನೇಯ ದೇವಸ್ಥಾನ ಸುತ್ತಮುತ್ತ ಕರಡಿಗಳ ಸಂಚರಿಸಿವೆ. ಮೊಬೈಲ್ ಕ್ಯಾಮರಾದಲ್ಲಿ ಕರಡಿಗಳ ಓಡಾಟದ ದೃಶ್ಯ ಸೆರೆಯಾಗಿದೆ.
ಕಳೆದ ಕೆಲ ತಿಂಗಳುಗಳಿಂದ ಗ್ರಾಮದಲ್ಲಿ ಹೆಚ್ಚುತ್ತಿದೆ ಕರಡಿಗಳ ಹಾವಳಿ. ರೈತರು, ಕಾರ್ಮಿಕರು, ಕುರಿಗಾಹಿಗಳು ಗ್ರಾಮಸ್ಥರ ಸುರಕ್ಷತೆ ಬಗ್ಗೆ ಆತಂಕ ಹೆಚ್ಚಾಗಿದೆ.ಜಮೀನು,ಗೋಮಾಳ, ನಾಲೆ ಪ್ರದೇಶಗಳಲ್ಲಿ ಕರಡಿಗಳ ಓಡಾಟ ನಡೆದಿದೆ. ಕರಡಿಗಳನ್ನು ಹಿಡಿಯಲು ಗ್ರಾಮಸ್ಥರ ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ.
