ತಾಳಿಕೋಟೆ, ನಗರದ ಇಂದಿರಾಬಾಯಿ ಭವನಸಿಂಗ್ ಹಜೇರಿ ವಿದ್ಯಾರ್ಥಿನಿ ಜೆಇಇ ಪರಿಕ್ಷೆಯಲ್ಲಿ ೨೨೭ನೇ ರ್‍ಯಾಂಕ್ ಪಡೆಯುವ ಮೂಲಕ ಉತ್ತಮ ಸಾಧನೆ ತೋರಿದ್ದಕ್ಕೆ ಅಮ್ಮಾ ಫೌಂಡೇಶನ್ ವತಿಯಿಂದ ಗುರುವಾರರಂದು ಸನ್ಮಾನಿಸಿ ಗೌರವಿಸಿ ಪ್ರೋತ್ಸಾಹಿಸಲಾಯಿತು.
ಈ ಸಮಯದಲ್ಲಿ ಅಮ್ಮಾ ಫೌಂಡೇಶನ್ ಅಧ್ಯಕ್ಷರಾದ ಶ್ರೀಮತಿ ಬಸ್ಸಮ್ಮ ಮಣೂರ ಕಠಿಣ ಪರಿಶ್ರಮ ಸಿಸ್ತು ಮತ್ತು ಆತ್ಮವಿಸ್ವಾಸ ಹೊಂದಿದ್ದರೆ ಏನಾನದ್ದಾರೂ ಸಾದಿಸಬಹುದಾಗಿದೆ ಕುಮಾರಿ ಇಂದಿರಾಬಾಯಿ ಜೆಇಇಯಲ್ಲಿ ಉತ್ತಮ ಸಾಧನೆ ತೋರುವದರೊಂದಿಗೆ ಸಮಾಜದ ಮತ್ತು ತಾಳಿಕೋಟೆ ನಗರದ ಕೀರ್ತಿ ಹೆಚ್ಚಿಸಿದ್ದಾಳೆ ಇವಳ ಸಾಧನೆ ಎಲ್ಲ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ ಎಂದರು.
ಈ ಸಮಯದಲ್ಲಿ ಅಮ್ಮಾ ಫೌಂಡೇಶನ್ ಅಧ್ಯಕ್ಷರಾದ ಶ್ರೀಮತಿ ಬಸ್ಸಮ್ಮ ಮಣೂರ, ಉಪಾಧ್ಯಕ್ಷೆ ಸುರೇಖಾ ಬಿಳೇಭಾವಿ, ಸುಮಂಗಲಾ ಕೊಳೂರ, ಸುರೇಖಾ ಸಾಲಂಕಿ, ಡಾ.ಗಂಗಾಂಬಿಕಾ ಪಾಟೀಲ, ಶ್ರೀಮತಿ ಅನೀತಾ ಸಜ್ಜನ, ರೇಣುಕಾ ಕಾರ್ಜೋಳ, ಗೀತಾ ಪತ್ತಾರ, ಗುರುಬಾಯಿ ಮಣೂರ, ಚನ್ನಮ್ಮ ಕತ್ತಿ, ಲಿಂಗೇಶ ರೇವಣಸಿದ್ದಯ್ಯ, ಜ್ಯೋತಿಬಾ ಕೊಡಗೆ, ಪುರಸಭಾ ಮಾಜಿ ಸದಸ್ಯ ಜೈಸಿಂಗ್ ಮೂಲಿಮನಿ, ಭವನಸಿಂಗ್ ಹಜೇರಿ, ಮೊದಲಾದವರು ಉಪಸ್ಥಿತರಿದ್ದರು.