Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶಿಕ್ಷಕರ ಕಾಲಮಿತಿ ಬಡ್ತಿ ಫೈಲ್ಗ ಫೈಲ್ಗಳ ವಿಲೇವಾರಿಗೆ ಶಿಕ್ಷಕರ ಒತ್ತಾಯ

ಬಳ್ಳಾರಿ.june.01: ಶಿಕ್ಷಕರ ಹತ್ತು ವರ್ಷಗಳ ಕಾಲ ಮಿತಿ ಭಡ್ತಿ ಆದೇಶಕ್ಕೆ ಸಹಿ ಮಾಡದೆ ಹಲವಾರು ತಿಂಗಳಿನಿಂದ ಫೈಲ್ಗಳನ್ನು ತಮ್ಮ ಟೇಬಲ್ ಮೇಲೆ ಇದ್ದರೂ ಸಹ ಅವುಗಳನ್ನು ಕಣ್ಣೆತ್ತಿ ನೋಡದೆ ಸಹಿ ಮಾಡದೆ ವಿಲೇವಾರಿ ಮಾಡದೆ ಹಾಗೆ ನಿವೃತ್ತಿಯ ದಿನದವರೆಗೂ ಇಂದು ನಾಳೆ ಎಂದು ದಿನಗಳನ್ನು ತಳ್ಳುತ್ತಾ  ಬಂದು ಕೊನೆ ದಿನ ಸಹ ಸಹಿ ಮಾಡದೆ ಹಾಗೆ ಪೆಂಡಿಂಗ್ ಉಳಿಸಿ ಹೋಗಿರುತ್ತಾರೆ, ಇದರಿಂದ ನಮ್ಮ ಸೇವಾ ಬಡ್ತಿಗೆ ಇನ್ನಷ್ಟು ವಿಳಂಬವಾಗಲಿದೆ ಉದ್ದೇಶಪೂರ್ವಕವಾಗಿ ನಮ್ಮ ಫೈಲ್ಗಳಿಗೆ ಸಹಿ ಮಾಡದೆ ಶಾಲಾ ಶಿಕ್ಷಣ ಇಲಾಖೆಯ ಬಳ್ಳಾರಿ ಉಪನಿರ್ದೇಶಕರು ನಮ್ಮನ್ನು ಸತಾಯಿಸುತ್ತಿದ್ದಾರೆ ಎಂದು ಶಿಕ್ಷಕರ ಸಂಘ ಮತ್ತು ಹಲವಾರು ಶಿಕ್ಷಕರು ಇಂದು ಡಿಡಿಪಿಐ ಉಮಾ ಅವರನ್ನು ಫೈಲ್ಗಳನ್ನು ವಿಲೇವಾರಿ ಮಾಡುವಂತೆ ಒತ್ತಾಯಿಸಿದರು.
ಉಪ ನಿರ್ದೇಶಕ ನಡೆಯಿಂದ  ಕುಪಿತರಾದ 
 ಹಲವು ಶಿಕ್ಷಕರು ಸೇರಿ ಕೋಟೆ ಪ್ರದೇಶದ ಸೆಂಟ್ ಜಾನ್ ಹೈ ಸ್ಕೂಲ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ  ನೂರಾರು ಶಿಕ್ಷಕರು ಬಂದು ತಮ್ಮ ಅಸಮಾಧಾನವನ್ನು ಡಿಡಿಪಿಐ ಉಮಾದೇವಿ ಅವರಿಗೆ ವ್ಯಕ್ತಪಡಿಸಿದರು.
 ಜಿಲ್ಲೆಯ ಸುಮಾರು ನೂರಕ್ಕೂ ಹೆಚ್ಚು ಶಿಕ್ಷಕರ ಕಾಲಮಿತಿ ಬಡ್ತಿ ಫೈಲ್ಗಳನ್ನು ಕಚೇರಿಯ ಸಿಬ್ಬಂದಿಗಳು ಅದರಲ್ಲಿನ ಎಲ್ಲಾ ವಿವರಗಳನ್ನು ಸಮಗ್ರವಾಗಿ ಪರಿಶೀಲಿಸಿ ಎಲ್ಲಾ ಸರಿ ಇವೆ ಎಂದು ಡಿಡಿಪಿಐ ಸಹಿಗಾಗಿ ಅವರ ಟೇಬಲ್ ಗೆ ಇಟ್ಟಿದ್ದರು. ಆದರೆ ಡಿಡಿಪಿ ಅವರು ಆ ಫೈಲ್ಗಳ ಕಡೆ ಕಣ್ಣೆತ್ತಿ ನೋಡದೆ ಕೊನೆಯ ದಿನದವರೆಗೂ ಸತಾಯಿಸುತ್ತಾ ಅಷ್ಟು ಶಿಕ್ಷಕರ ಕಾಲಮಿತಿ ಬಡ್ತಿಯ ಪ್ರಕ್ರಿಯೆಯಿಂದ ಹೊರಗೂಳಿಯುವಂತೆ ಮಾಡಿದ್ದಾರೆ ಇದು ಅವರಿಗೆ  ಶಿಕ್ಷಕರ ಬಗ್ಗೆ ಇರುವ ನಿರ್ಲಕ್ಷ್ಯ ಭಾವನೆಯನ್ನು ತೋರಿಸುತ್ತದೆ ಇದು ಅವರು ದುರುದ್ದೇಶ ಪೂರ್ವಕವಾಗಿ ನಮ್ಮ ಫೈಲ್ಗಳನ್ನು ಪೆಂಡಿಂಗ್ ಇಟ್ಟಿದ್ದಾರೆ  ಎಂದು ನೆರೆದ ಹಲವಾರು ಶಿಕ್ಷಕರು ಬೇಸರವನ್ನು ವ್ಯಕ್ತಪಡಿಸಿದ್ದರು.
 ಈ ಕುರಿತು ಪ್ರತಿಕ್ರಿಸಿದ ಉಪನಿರ್ದೇಶಕರಾದ ಉಮಾ, ಅವರು ಸಲ್ಲಿಸಿರುವ ವಿವರಗಳನ್ನು ಸರಿಯಾಗಿ ಪರಿಶೀಲಿಸದೆ ಅವುಗಳನ್ನು ಸಹಿ ಮಾಡುವ ಅಗತ್ಯ ಇರುವುದಿಲ್ಲ, ಏನಾದರೂ ಹೆಚ್ಚು ಕಡಿಮೆ ಆಗಿದ್ದಲ್ಲಿ ಅದರ ಪರಿಣಾಮ ನನ್ನ ಮೇಲೆ ಆಗುತ್ತದೆ ಇದು ನನ್ನ ಸೇವಾವಧಿಯ ಮೇಲೆ ಕಪ್ಪು ಚುಕ್ಕೆ ಮೂಡುವಂತೆ ಮಾಡುತ್ತದೆ ಆದ್ದರಿಂದ ಶಿಕ್ಷಕರು ಸಲ್ಲಿಸಿರುವ ಅವರ ಫೈಲ್ಗಳನ್ನು ಸರಿಯಾಗಿ ಮತ್ತೊಮ್ಮೆ ಪರಿಶೀಲಿಸಲು ಕಚೇರಿಯ ಸಿಬ್ಬಂದಿಗಳಿಗೆ ತಿಳಿಸಿದ್ದೆ ಅವರು ಆರೋಪ ಮಾಡುವಂತೆ ನಾನು ಯಾವುದೇ ವಿಳಂಬ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು. ಸ್ಥಳದಲ್ಲಿ ಇದ್ದ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕಚೇರಿಯ ಸಿಬ್ಬಂದಿಗಳು ಎಲ್ಲವನ್ನು ಪರಿಶೀಸಲಾಗಿದೆ ಎಲ್ಲಾ ವಿವರಗಳು ಸರಿಯೇ ಎಂದು ಸಹ ಪತ್ರಕರ್ತರಿಗೆ ತಿಳಿಸಿದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ