ಬಳ್ಳಾರಿ, ಮೇ.07.: ನಗರದ ಡಾಕ್ಟರ್ ರಾಜಕುಮಾರ್ ರಸ್ತೆಯಲ್ಲಿರುವ ಸರ್ಕಾರಿ ತಾರಾನಾಥ ಆಯುರ್ವೇದ ಆಸ್ಪತ್ರೆಯ ಶುಶ್ರೂಷಧಿಕಾರಿ ಗುರುಸ್ವಾಮಿ, ಕುಕ್ ಪ್ರಮೀಳಾ, ಮಸಾಜಿಷ್ಟ್ ಚಂದ್ರಪ್ಪ ವರ್ಗಾವಣೆಯಾಗಿದ್ದಾರೆ ಎಂದು ಸ್ಥಾನಿಕ ವೈದ್ಯಾಧಿಕಾರಿ ಡಾ. ಕೊಟ್ರೇಶ್ ತಿಳಿಸಿದ್ದಾರೆ. ಈ ಕುರಿತು ಆಸ್ಪತ್ರೆ ವತಿಯಿಂದ ವರ್ಗಾವಣೆಯಾದ ಸಿಬ್ಬಂದಿಗಳಿಗೆ
ನಿನ್ನೆ ಬೀಳ್ಕೊಡುಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಿ ಮಾತನಾಡಿದ ಡಾ.ಕೊಟ್ರೇಶ ಆಸ್ಪತ್ರೆಯಲ್ಲಿ ಈಗಾಗಲೇ ಸಿಬ್ಬಂದಿಯ ಕೊರತೆ ಎದುರಿಸುತ್ತಿದ್ದೇವೆ, ಇಂಥ ಒತ್ತಡದ ಪರಿಸ್ಥಿತಿಯಲ್ಲಿ ಈ ಮೂರು ಜನ ನೌಕರರ ವರ್ಗಾವಣೆ ಮತ್ತಷ್ಟು ಸಂಕಷ್ಟಕ್ಕೆ ತನ್ದೊಡ್ಡಲಿದೆ ಎಂದು ಬೇಸರಿಸಿಕೊಂಡರು.
ಈ ಬೀಳ್ಕೊಡುಗೆ ಸಮಾರಂಭದಲ್ಲಿ
ಆಸ್ಪತ್ರೆ ವೈದ್ಯಾಧಿಕಾರಿಗಳಾದ ಡಾ. ತಮಿಮ್ ಅನ್ಸಾರಿ, ಡಾ. ರತ್ನ ಶ್ರೀ, ಡಾ.ಪ್ರಭಾವತಿ, ಆಸ್ಪತ್ರೆಯ ಶುಶ್ರೂಷಾ ಧೀಕ್ಷಕಿ ನಿರ್ಮಲ, ಮೂಗಪ್ಪ, ಮಲ್ಲಿಕಾರ್ಜುನ, ಟಿ ರಾಧ,ದೇವರಾಜ, ಬಸವರಾಜ, ವಾಜಿದ್ ಅಲಿ ಫಾರ್ಮಸಿ ಅಧಿಕಾರಿ ರಂಜಿತ್, ಮುಬಿನಾವಾಜ್ ಕಾರ್ಯಕ್ರಮ ನಿರೂಪಿಸಿದರು ಫಾರ್ಮಸಿ ಅಧಿಕಾರಿ ಸೀಮಾ ವಂದಿಸಿದರು