Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪ್ರತಿ ೧೨ವರ್ಷದ ವಿಶೇಷ ಜಾತ್ರೆಗೆ ಸಾವಿರಾರು ಭಕ್ತರ ಆಗಮನ

ಜಮಖಂಡಿ: ಐತಿಹಾಸಿಕ ಹಿನ್ನೆಲೆ ಜತೆಗೆ ೧೨ ಜ್ಯೋತಿರ್ಲಿಂಗ ಹೊಂದಿರುವ ಸುಕ್ಷೇತ್ರ ಹುನ್ನೂರಿನ ಕಾಶಿಲಿಂಗೇಶ್ವರ ದೇವರು ಪಾಂಡವರ ಮಾತೆ ಕುಂತಿ ಬೇಡಿಕೆಯಂತೆ ಶಿವನಿಂದ ವರ ಪಡೆದು ಸರ್ಪದ ರೂಪದಲ್ಲಿ ಭೂಲೋಕಕ್ಕೆ ಬಂದು ಸಾವಿರಾರು ಕೊಳ್ಳಸರದಾರನಾಗಿ ಕಾಶಿಲಿಂಗೇಶ್ವರ ನಾಮಕಿಂತದಿAಧ ಹುನ್ನೂರಲ್ಲಿ ನೆಲೆಸಿದ ಉಲ್ಲೇಖವಿದೆ.
ತಾಲೂಕಿನ ಹುನ್ನೂರ ಗ್ರಾಮದಲ್ಲಿ ಪ್ರತಿ ೧೨ ವರ್ಷಕ್ಕೊಮ್ಮೆ ಜರಗುವ ಶ್ರೀಗುರು ಕಾಶಿಲಿಂಗೇಶ್ವರ ಜಾತ್ರೆ ಎಪ್ರೀಲ ೨೪ರಿಂದ ೨೭ರವರೆಗೆ ನಡೆಯುವ ಜಾತ್ರಾ ಮಹೋತ್ಸವದಲ್ಲಿ ದೇವಸ್ಥಾನದ ನೂತನ ಕಟ್ಟಡ ಉದ್ಘಾಟನೆ, ಶ್ರೀಗ್ರಾಮ ದೇವಿಗೆ ಉಡಿತುಂಬುವ ಕಾರ್ಯಕ್ರಮ, ಸುತ್ತಮುತ್ತಲಿನ ಗ್ರಾಮಗಳ ಪಲ್ಲಕ್ಕಿ ಬರಮಾಡಿಕೊಳ್ಳುವದರ ಮೂಲಕ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಬನಪ್ಪಜ್ಜ ಎಂಬ ಸಿದ್ದಿಪುರುಷರು ಆಲಗೂರು ಗ್ರಾಮದಿಂದ ಭಕ್ತರ ಉದ್ದಾರಕ್ಕಾಗಿ ಹುನ್ನೂರ ಗ್ರಾಮದಲ್ಲಿ ನೆಲೆಸಿ, ಬರಗಾಲದ ಸಂದರ್ಭದಲ್ಲಿ ರೈತರಿಗೆ ಮಳೆ ತಂದು ಪವಾಡವನ್ನು ಮಾಡಿದ್ದಾರೆ. ಸ್ವತಃ ಬನಪ್ಪಜ್ಜನವರು ೧೯೩೦ ರಲ್ಲಿ ಶ್ರೀಗುರು ಕಾಶಿಲಿಂಗೇಶ್ವರ ದೇವಸ್ಥಾನ ನಿರ್ಮಿಸಿದರು.
ಎ.೨೪ರಂದು ಬೆಳಗ್ಗೆ ೬ಗಂಟೆಗೆ ೧೨ ಜ್ಯೋತಿರ್ಲಿಂಗಗಳಿಗೆ ವಿಠಲಾಚಾರ್ಯ ಉಮರ್ಜಿ ಅವರಿಂದ ರುದ್ರಾಭಿಷೇಕ ಜರಗುವುದು. ಸಾಯಂಕಾಲ ೪ ಗಂಟೆಗೆ ಡೊಳ್ಳು ಹಾಗೂ ಸಕಲ ವಾದ್ಯಮೇಳಗಳೊಂದಿಗೆ ಶ್ರೀರಾಮದೇವಿ ಉಡಿ ತುಂಬುವುದು, ಸಾಯಂಕಾಲ ೬ ಗಂಟೆಗೆ ಡಾ.ದುಂಡೇಶ್ವರ ಮಹಾಸ್ವಾಮಿಗಳು ಕಮರಿಮಠ ಮಧುರಖಂಡಿ- ನಂದೇಶ್ವರ ಅಮೃತ ಹಸ್ತದಿಂದ ನೂತನ ಕಟ್ಟಡ ಉದ್ಘಾಟನೆ ಹಾಗೂ ಶ್ರೀ ಅಮೋಘಸಿದ್ದೇಶ್ವರ ಡೊಳ್ಳಿನ ಗಾಯನ ಸಂಘ ಲಮಾನಹಟ್ಟಿ ಹಾಗೂ ಶ್ರೀ ವೀರಭದ್ರೇಶ್ವರ ಡೊಳ್ಳಿನ ಗಾಯನ ಸಂಘ ಹಳ್ಳೂರು ಅವರಿಂದ ಡೊಳ್ಳಿನ ಪದಗಳು ಜರಗಲಿವೆ
ಎ.೨೫ ರಂದು ಸಾಯಂಕಾಲ ೬ ಗಂಟೆಗೆ ಬೀರಸಿದ್ದೇಶ್ವರ ಪಲ್ಲಕ್ಕಿ, ಪರಮೇಶ್ವರ ಪಲ್ಲಕ್ಕಿ, ಕಾಶಿಲಿಂಗೇಶ್ವರ ಪಲ್ಲಕ್ಕಿ, ಯಳಮಳಸಿದ್ದೇಶ್ವರ ಪಲ್ಲಕ್ಕಿ, ಮಾಳಿಂಗರಾಯ ಪಲ್ಲಕ್ಕಿ, ಬೀರಸಿದ್ದೇಶ್ವರ ಪಲ್ಲಕ್ಕಿ, ಯಳಮಳಸಿದ್ದೇಶ್ವರ ಪಲ್ಲಕ್ಕಿ, ಶ್ರೀ ಗುರು ಜಟ್ಟಿಂಗರಾಯ ಪಲ್ಲಕ್ಕಿ, ಕಾಶಿಲಿಂಗೇಶ್ವರ ಪಲ್ಲಕ್ಕಿ, ಶ್ರೀ ಕಾಶಿಲಿಂಗೇಶ್ವರ ಪಲ್ಲಕ್ಕಿ, ಕಾಶಿಲಿಂಗೇಶ್ವರ ಪಲ್ಲಕ್ಕಿಗಳು ಆಗಮಿಸಲಿವೆ.
ಎ.೨೬ ರಂದು ಮುಂಜಾನೆ ೯ ಗಂಟೆಗೆ ಕುಂಭಮೇಳ ಹಾಗೂ ಮುತ್ತೈದೆಯರ ಆರತಿ, ಸಕಲ ವಾದ್ಯ ಡೊಳ್ಳು ಮೇಳದೊಂದಿಗೆ ಎಲ್ಲ ಪಲ್ಲಕ್ಕಿಗಳೊಂದಿಗೆ ಗಂಗಾ ಸ್ನಾನಕ್ಕೆ ಹೋಗುವುದು. ರಾತ್ರಿ ೧೦ ಗಂಟೆಗೆ ಶ್ರೀ ಭೀಮಶಂಕರ ಡೊಳ್ಳಿನ ಗಾಯನ ಸಂW ಉತ್ನಾಳ ಹಾಗೂ ಶ್ರೀ ಮಾರಾಯ ಸಿದ್ದೇಶ್ವರ ಡೊಳ್ಳಿನ ಗಾಯನ ಸಂಘ ಕುಂಬಾರಹಳ್ಳ ಇವರಿಂದ ಡೊಳ್ಳಿನ ಪದಗಳು ಜರುಗಲಿವೆ. 
ಎ.೨೭ ರಂದು ೧೦ ಗಂಟೆಗೆ ಆಗಮಿಸಿ ಎಲ್ಲ ಪಲ್ಲಕ್ಕಿಗಳನ್ನು ಮತ್ತು ವಾಲಗ ಮೇಳಗಳನ್ನು ಬೀಳ್ಕೊಡುವ ಮೂಲಕ ಜಾತ್ರೆ ಮಂಗಳಗೊಳ್ಳಲಿದೆ. ಜಾತ್ರೆ ನಿಮಿತ್ತ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಗಳು ಮತ್ತು ೨೦೧ ಕೆಜಿ ಉಸುಕಿನ ಚೀಲ ಹೊತ್ತು ಸಾಗುವ ಸ್ಪರ್ಧೆ ಜರುಗಲಿವೆ ಎಂದು ಜಾತ್ರಾ ಕಮಿಟಿಯು ಪ್ರಕಟಣೆಗೆ ತಿಳಿಸಿದ್ದಾರೆ.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಿಇಟಿ ಪರೀಕ್ಷೆ; ವಿದ್ಯಾರ್ಥಿಗಳ ಜನಿವಾರ ತೆಗೆಸಿದ್ದಕ್ಕೆ ವ್ಯಾಪಕ ಆಕ್ರೋಶಮಕ್ಕಳ ಮೇಲೆ ನಿಗಾ ಇರಲಿ! ಬೋಧಕರ ತರಬೇತಿ ಶಿಬಿರ ಪ್ರತಿ ೧೨ವರ್ಷದ ವಿಶೇಷ ಜಾತ್ರೆಗೆ ಸಾವಿರಾರು ಭಕ್ತರ ಆಗಮನಮಹರ್ಷಿ ಭಗೀರಥರ ತತ್ವ ಆದರ್ಶಗಳು ಇಂದಿಗೂ ಪ್ರಸ್ತುತ :  ಬಾಲಚಂದ್ರ ಜಾರಕಿಹೊಳಿಶಾರದಾ ವಿದ್ಯಾಪೀಠ ಶಾಲೆಯ ವಿದ್ಯಾರ್ಥಿನಿ ಜ್ಞಾನೇಶ್ವರಿ ಎಸ್‌ಎಸ್‌ಎಲ್‌ಸಿ‌ನಲ್ಲಿ ಉತ್ತಮ ಸಾಧನೆಬಸವಜ್ಯೋತಿಗೆ ಪ್ರೌಢಶಾಲೆಗೆ ಶೇ ೧೦೦ ಫಲಿತಾಂಶಎಸ್‌ಎಸ್‌ಎಲ್‌ಸಿ ಫಲಿತಾಂಶ; ಜಿಲ್ಲೆಗೆ ಕಾಗವಾಡ ದ್ವೀತಿಯ ಸ್ಥಾನ: ಬಿಇಓ ಪಾಂಡುರAಗ ಮದಭಾವಿಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸರಕಾರಿ ಶಾಲೆ ವಿದ್ಯಾರ್ಥಿನಿ ಪ್ರಾರ್ಥನಾ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಕುಡಿಯುವ ನೀರಿನ ತೊಂದರೆಯಾಗದಂತೆ ಮುಂಜಾಗೃತ ಕ್ರಮಕೈಗೊಳ್ಳಿ : ಯಶವಂತರಾಯಗೌಡ ಪಾಟೀಲ