LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bellary

*ರಾಜ್ಯ ಕೃಷಿ ಪರಿಕರಗಳ ಮಾರಾಟಗಾರರ ಸಂಘದ ಅಧ್ಯಕ್ಷರಾಗಿ ತಿಮ್ಮನಗೌಡ ಆಯ್ಕೆ* 

 *ಬಳ್ಳಾರಿ ಜಿಲ್ಲೆಯ ಸಿದ್ದಮ್ಮನಹಳ್ಳಿ ಹೆಚ್.ತಿಮ್ಮನಗೌಡಗೆ ರಾಜ್ಯಮಟ್ಟದ ಹೊಣೆಗಾರಿಕೆ* 

ಬೆಂಗಳೂರು,ಅ.24: ಕರ್ನಾಟಕ ರಾಜ್ಯ ಕೃಷಿ ಪರಿಕರಗಳ ಮಾರಾಟಗಾರರ ಸಂಘದ ರಾಜ್ಯಾಧ್ಯಕ್ಷರಾಗಿ ಬಳ್ಳಾರಿ ಜಿಲ್ಲೆಯ ಸಿದ್ದಮ್ಮನಹಳ್ಳಿಯ ಹೆಚ್.ತಿಮ್ಮನಗೌಡ ಆಯ್ಕೆಯಾಗಿದ್ದಾರೆ.
ನಗರದ ಕನಿಷ್ಕ ಹೋಟೆಲ್‌ನಲ್ಲಿ ಶನಿವಾರ ನಡೆದ ಸಂಘದ ರಾಜ್ಯಮಟ್ಟದ ಚುನಾವಣೆಯಲ್ಲಿ ತಿಮ್ಮನಗೌಡ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಸಂಘಟನೆಯಲ್ಲಿ ಹಲವು ವರ್ಷಗಳಿಂದ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ ಸೇವೆ ಸಲ್ಲಿಸಿರುವ ಅವರನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿರುವುದು ಬಳ್ಳಾರಿ ಜಿಲ್ಲೆಯ ಕೃಷಿ ಪರಿಕರಗಳ ಮಾರಾಟಗಾರರ ವಲಯದಲ್ಲಿ ಸಂತಸ ಮೂಡಿಸಿದೆ.
ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬಗರ್ ಹುಕುಂ ಸಮಿತಿಯ ಅಧ್ಯಕ್ಷರಾಗಿರುವ ತಿಮ್ಮನಗೌಡ ಅವರು, ಈ ಹಿಂದೆ ಬಳ್ಳಾರಿ ಜಿಲ್ಲಾ ಕೃಷಿ ಪರಿಕರಗಳ ಮಾರಾಟಗಾರರ ಸಂಘದ ಜಿಲ್ಲಾಧ್ಯಕ್ಷರಾಗಿ ಹಾಗೂ ಕರ್ನಾಟಕ ರಾಜ್ಯ ಕೃಷಿ ಪರಿಕರಗಳ ಮಾರಾಟಗಾರರ ಸಂಘದ ರಾಜ್ಯ ಖಜಾಂಚಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಸಂಘದ ಬೆಳವಣಿಗೆಗೆ ಅವರು ಸಲ್ಲಿಸಿರುವ ಸೇವೆ ಹಾಗೂ ಸಂಘಟನಾತ್ಮಕ ಕಾರ್ಯಗಳನ್ನು ಪರಿಗಣಿಸಿ ರಾಜ್ಯಾಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಲಾಗಿದೆ.
ಚುನಾವಣೆಯ ಬಳಿಕ ಸಂಘದ ಪದಾಧಿಕಾರಿಗಳು ನೂತನ ರಾಜ್ಯಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿ, ಮುಂದಿನ ಕಾರ್ಯಚಟುವಟಿಕೆಗಳಿಗೆ ಶುಭ ಹಾರೈಸಿದರು. ರಾಜ್ಯಮಟ್ಟದ ಜವಾಬ್ದಾರಿ ದೊರೆತಿರುವುದು ಬಳ್ಳಾರಿ ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದ್ದು, ಸಂಘದ ಅಭಿವೃದ್ಧಿ ಹಾಗೂ ಮಾರಾಟಗಾರರ ಹಿತಾಸಕ್ತಿಗಳ ರಕ್ಷಣೆಗೆ ಹೊಸ ಹೊಣೆಗಾರಿಕೆ ನೆರವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಈ ಸಂದರ್ಭದಲ್ಲಿ ಸಂಘದ ರಾಜ್ಯ ಗೌರವಾಧ್ಯಕ್ಷರಾದ ನಾಗರಾಜ ಲೋಕಿಕೆರೆ, ರಾಜು ತೋಟಪ್ಪನವರ, ಉಪಾಧ್ಯಕ್ಷರಾದ ಮಲ್ಲಿಕಾರ್ಜುನ, ಟಿ.ಎಂ. ಉಮಾಪತಯ್ಯ, ಜಿಎಸ್ ಮಹಾಬಲ ಕೊಪ್ಪ, ಸುಹಾಸ ಹಾವೇರಿ ಸೆಟ್ಟರ, ಬಸವರಾಜ ಮಲಂಗಲಗಿ, ಬಸವರಾಜ ಕೋರಿ, ನಾಗರಾಜ ಎಸ್, ಶಿವಣ್ಣ, ಸಿ ಆರ್ ಪಾಟೀಲ್, ಸಂತೋಷ್ ಕುಮಾರ್, ರಾಮಕೃಷ್ಣಯ್ಯ, , ನಿರಂಜನ ಶೆಟ್ಟಿ, ಸೇರಿದಂತೆ ಸಂಘದ ವಿವಿಧ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕೋಲೂರು ಶೈಕ್ಷಣಿಕ ಜಿಲ್ಲಾ ಮಟ್ಟದ ಕ್ರೀಡಾಕೂಟ: 400 ಮೀ ಓಟದಲ್ಲಿ ದೃಷ್ಟಿಗೆ ಪ್ರಥಮ ಸ್ಥಾನಪಟ್ಟಣದಲ್ಲಿ ವಿಜೃಂಭಣೆಯಿಂದ ಜರುಗಿದ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ ಉತ್ಸವದೇಶದ ಭದ್ರತೆಯಲ್ಲಿ ಇಎಮ್‌ಇ ಸೈನಿಕರ ಪಾತ್ರ ಮಹತ್ವದ್ದು:  ಜಿ.ಪರಿಸ್ವಾಮಿ ರೆಡ್ಡಿ ವೇದಿಕೆ ಮೇಲೆ ಕೂರಿಸದಿದ್ದರೆ ಸಭೆ ಬಹಿಷ್ಕಾರದ ಎಚ್ಚರಿಕೆ: ಡಾ ಪ್ರಭಾಕರ್ ಕೋರೆ.‌ನ. 6 ರಂದು ನೇಸರಗಿ ವಿದ್ಯಾಮಂದಿರ ಪ್ರೌಢಶಾಲೆಯ ಅಮೃತ ಮಹೋತ್ಸವ ಚನ್ನಮ್ಮ ಬದುಕು ಇತಿಹಾಸ ಅಲ್ಲ; ನವಪೀಳಿಗೆಗೆ ಸ್ವಾಭಿಮಾನದ ಪಾಠ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ 'ಸೇವಾ ಮನೋಭಾವದೊಂದಿಗೆ ವೈದ್ಯಕೀಯ ವೃತ್ತಿ ಆರಂಭಿಸಿ' ಪ್ರಭುನೀಲಕಂಠ ಸ್ವಾಮೀಜಿಅಯೋಡಿನ್‌ಯುಕ್ತ ಉಪ್ಪಿನ ಬಳಕೆ ಆರೋಗ್ಯಕರ ಜೀವನಕ್ಕೆ ಸಹಕಾರಿ: ಡಾ. ರಾಮಕೃಷ್ಣ೧೦ನೇ ಸಾಂಸ್ಕೃತಿಕ ಜನೋತ್ಸವಕ್ಕೆ ಯಶಸ್ವೀ ಚಾಲನೆ, ನೋಡುಗರÀ ಮನಸೂರೆಗೊಂಡ ವಿವಿಧ ಕಲಾಪ್ರಕಾರಗಳುಎಸ್‌ಸಿ-ಎಸ್‌ಟಿ ಮೀಸಲಾತಿ ಹೆಚ್ಚಳವನ್ನು ಸಂವಿಧಾನದ 9ನೇ ಶೆಡ್ಯೂಲ್‌ಗೆ ಸೇರಿಸಿ:  ವಿ.ಎಸ್. ಶಿವಶಂಕರ್ ಆಗ್ರಹ